ಕೋಮು ಪ್ರಚೋದನೆ ಆರೋಪ: ಮಧುಗಿರಿ ಮೋದಿ ವಿರುದ್ಧ ಪ್ರಕರಣ ದಾಖಲು

ಮತ್ತೊಂದು ಸಮುದಾಯವನ್ನು ಪ್ರಚೋದಿಸುವ ವಿಡಿಯೋಗಳನ್ನು ಹರಿಯಬಿಟ್ಟಿದ್ದ ಆರೋಪದ ಮೇರೆಗೆ ತನ್ನನ್ನು ತಾನು ಮಧುಗಿರಿ ಮೋದಿ ಎಂದು ಕರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರ ವಿರುದ್ಧ ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಮತ್ತೊಂದು ಸಮುದಾಯವನ್ನು ಪ್ರಚೋದಿಸುವ ವಿಡಿಯೋಗಳನ್ನು ಹರಿಯಬಿಟ್ಟಿದ್ದ ಆರೋಪದ ಮೇರೆಗೆ ತನ್ನನ್ನು ತಾನು ಮಧುಗಿರಿ ಮೋದಿ ಎಂದು ಕರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರ ವಿರುದ್ಧ ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಧುಗಿರಿ ತಾಲೂಕ್ ಬಡವನಬಳ್ಳಿ ಬಳಿಯ ಹೊನ್ನಾಪುರ  ಮೂಲದ ಅತುಲ್ ಕುಮಾರ್ ಆರೋಪಿಯಾಗಿದ್ದಾನೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

ಸ್ನಾತಕೋತ್ತರ ಪದವೀಧರನಾಗಿರುವ ಅತುಲ್ ಕುಮಾರ್ ಕೆಲ ದಿನಗಳ ಕಾಲ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ಕೆಲಸಕ್ಕೆ ಗುಡ್ ಬೈ ಹೇಳಿ ಹಿಂದೂಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.ಈ ಹಿಂದೆಯೂ ಕೂಡಾ ಇದೇ ರೀತಿಯ ಚಟುವಟಿಕೆಗಳಿಂದಾಗಿ ಅತುಲ್ ಕುಮಾರ್ ವಿರುದ್ಧ ಹಲವು ಬಾರಿ ಪ್ರಕರಣ ದಾಖಲಿಸಲಾಗಿತ್ತು. 

ಪ್ರವಾದಿ ಮೊಹಮ್ಮದ್ ಅವರನ್ನು  ಅವಹೇಳನ ಮಾಡುವ ವೀಡಿಯೊವೊಂದನ್ನು  ಅತುಲ್ ಕುಮಾರ್   ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವ ಮೂಲಕ ಕೋಲಾಹಲವನ್ನು ಸೃಷ್ಟಿಸಿದ್ದಾರೆ. ಇದರ ವಿರುದ್ಧ ಮುಸ್ಲಿಂರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರು. 

ಧರ್ಮವನ್ನು ಅವಮಾನಿಸುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 295, 295 ಎ ಮತ್ತು ಐಟಿ ಕಾಯ್ದೆ ಪ್ರಕಾರ ಅತುಲ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com