ಬೇಸಿಗೆ ಆರಂಭ: ತಾಪಮಾನದಲ್ಲಿ ಕೋಲ್ಕತಾ, ಚೆನ್ನೈ ಮೀರಿಸಿದ ಸಿಲಿಕಾನ್ ಸಿಟಿ, ಫೆ.17ರಂದು 31.4 ಡಿಗ್ರಿ ಉಷ್ಣಾಂಶ ದಾಖಲು

ಸಿಲಿಕಾನ್ ಸಿಟಿಯಲ್ಲಿ ಬೆಳಗಿನ ಜಾವದಲ್ಲಿ ಚಳಿಯ ಅನುಭವ ಆಗುವುದು ಹೊರತುಪಡಿಸಿದರೆ, ಬೇಸಿಗೆ ಬೇಗೆ ಜನರನ್ನು ದಿನವಿಡೀ ಕಾಡಲು ಆರಂಭವಾಗಿದೆ. ಬೇಸಿಗೆಯ ಆರಂಭಿಕ ದಿನದಲ್ಲಿಯೇ ತಾಪಮಾನದಲ್ಲಿ ಬೆಂಗಳೂರು, ಕೋಲ್ಕತಾ ಹಾಗೂ ಚೆನ್ನೈ ನಗರವನ್ನು ಮೀರಿಸಿದೆ. ಫೆ.17ರಂದು ನಗರದಲ್ಲಿನ ತಾಪಮಾನ 31.4 ಡಿಗ್ರಿಯಷ್ಟು ದಾಖಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಗಿನ ಜಾವದಲ್ಲಿ ಚಳಿಯ ಅನುಭವ ಆಗುವುದು ಹೊರತುಪಡಿಸಿದರೆ, ಬೇಸಿಗೆ ಬೇಗೆ ಜನರನ್ನು ದಿನವಿಡೀ ಕಾಡಲು ಆರಂಭವಾಗಿದೆ. ಬೇಸಿಗೆಯ ಆರಂಭಿಕ ದಿನದಲ್ಲಿಯೇ ತಾಪಮಾನದಲ್ಲಿ ಬೆಂಗಳೂರು, ಕೋಲ್ಕತಾ ಹಾಗೂ ಚೆನ್ನೈ ನಗರವನ್ನು ಮೀರಿಸಿದೆ. ಫೆ.17ರಂದು ನಗರದಲ್ಲಿನ ತಾಪಮಾನ 31.4 ಡಿಗ್ರಿಯಷ್ಟು ದಾಖಲಾಗಿದೆ. 

ತಾಪಮಾನಕ್ಕೆ ಚೆನ್ನೈ ಹಾಗೂ ಕೋಲ್ಕತಾ ಹೆಸರುವಾಸಿಯಾಗಿದ್ದು, ಸಾಮಾನ್ಯವಾಗಿ ಈ ನಗರದಲ್ಲಿ ಗರಿಷ್ಟ ತಾಪಮಾನ 28.4 ಡಿಗ್ರಿ ಹಾಗೂ 26.2 ಡಿಗ್ರಿಯಷ್ಟಿಸುತ್ತದೆ. ಆದರೆ, ಬೆಂಗಳೂರು ನಗರದಲ್ಲಿ ಫೆ.17ರಂದು ಈ ಎರಡೂ ನಗರಗಳನ್ನು ಮೀರಿಸಿ 31.4 ಡಿಗ್ರಿಯಷ್ಟು ದಾಖಲಾಗಿರುವುದು ಕಂಡು ಬಂದಿದೆ. 

ಸೋಮವಾರ ಮಧ್ಯಾಹ್ನ 2.30ರ ವೇಳೆಗೆ ಬೆಂಗಳೂರಿನಲ್ಲಿ 31.4 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದ್ದು, ಕಲಬುರಗಿಯಲ್ಲಿ 35 ಡಿಗ್ರಿ, ಬೆಳಗಾವಿ 32.2 ಡಿಗ್ರಿ, ಗದಗ 32.8 ಡಿಗ್ರಿ, ಕಾರವಾರ 34 ಡಿಗ್ರಿ, ಹೊನ್ನಾವರ 31.4, ಚಿತ್ರದುರ್ಗ 31.4 ಹಾಗೂ ಮಂಗಳೂರಿನಲ್ಲಿ 34.2 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. 2005ರ ಫೆ.17ರಂದು ಬೆಂಗಳೂರಿನಲ್ಲಿ 35.9 ಡಿಗ್ರಿ ದಾಖಲಾಗಿತ್ತು. ಪ್ರತೀ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನ ತಾಪಮಾನ 31.1ರಷ್ಟಿರುತ್ತದೆ. 

ಕೇವಲ ಫೆ.17 ಮಾತ್ರವೇ ಅಲ್ಲ, ಫೆ.15ರಂದೂ ಕೂಡ ಬೆಳಗಾವಿಯಲ್ಲಿನ ತಾಪಮಾನಕ್ಕಿಂತಲೂ ಬೆಂಗಳೂರಿನ ತಾಪಮಾನ ಹೆಚ್ಚಾಗಿರುವುದು ದಾಖಲಾಗಿತ್ತು. ತಾಪಮಾನದ ಈ ಏರಿಕೆಯ ಬೆಳವಣಿಗೆಗಳು ಬೆಂಗಳೂರು ನಗರದಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದು ಜಾಗತಿಕ ಹವಾಮಾನ ಬದಲಾವಣೆಯ ವಿದ್ಯಾಮಾನಗಳಿಂದ ಮಾತ್ರವಷ್ಟೇ ಅಲ್ಲದೆ, ಸ್ಥಳೀಯ ಅಂಶಗಳಿಂದಲೂ ಉಷ್ಣಾಂಶ ಏರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ನಗರದಲ್ಲಿ ಈ ವರೆಗೂ 33.1ರಷ್ಟು ಉಷ್ಣಾಂಶ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ 35 ಡಿಗ್ರಿ ತಲುಪಬಹುದು ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com