ಮುಚ್ಚಿಡುವ ಪ್ರಶ್ನೆಯಿಲ್ಲ, ಅಶೋಕ್ ಪುತ್ರ ಪ್ರವಾಸಕ್ಕೆ ಹೋಗಿದ್ದಾನೆ: ಕಟೀಲ್
ಮರಿಯಮ್ಮನಹಳ್ಳಿ ಬಳಿ ನಡೆದ ಅಪಘಾತ ಪ್ರಕರಣ ವೇಳೆ ಸಚಿವ ಆರ್. ಅಶೋಕ್ ಪುತ್ರ ಕಾರಿನಲ್ಲಿರಲಿಲ್ಲ ಎಂದು ಸಮರ್ಥಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸದ್ಯ ಅಶೋಕ್ ಪುತ್ರ ಪ್ರವಾಸಕ್ಕೆ ಹೋಗಿರುವುದಾಗಿ ತಿಳಿಸಿದ್ದಾರೆ.
Published: 18th February 2020 12:36 AM | Last Updated: 18th February 2020 12:36 AM | A+A A-

ಸಂಗ್ರಹ ಚಿತ್ರ
ಚಾಮರಾಜನಗರ: ಮರಿಯಮ್ಮನಹಳ್ಳಿ ಬಳಿ ನಡೆದ ಅಪಘಾತ ಪ್ರಕರಣ ವೇಳೆ ಸಚಿವ ಆರ್. ಅಶೋಕ್ ಪುತ್ರ ಕಾರಿನಲ್ಲಿರಲಿಲ್ಲ ಎಂದು ಸಮರ್ಥಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸದ್ಯ ಅಶೋಕ್ ಪುತ್ರ ಪ್ರವಾಸಕ್ಕೆ ಹೋಗಿರುವುದಾಗಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಅಶೊಕ್ ಪುತ್ರನನ್ನು ಏಕೆ ಬಚ್ಚಿಡಲಾಗಿದೆ. ಈಗ ಅವರೆಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ. ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಸದ್ಯ ಅಶೋಕ್ ಅವರ ಪುತ್ರ ಪ್ರವಾಸಕ್ಕೆ ಹೋಗಿದ್ದಾನೆ ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರಿದ್ದರೇ ಅದು ಕಾಂಗ್ರೆಸ್ . ಕೈ ಪಾಳಯಕ್ಕೆ ಸಿದ್ದಾಂತ, ವೈಚಾರಿಕತೆಗಳಿಲ್ಲ ಎಂದ ಅವರು ಬಿಎಸ್ವೈ ಜೈಲಿಗೆ ಹೋಗಿ ಬಂದವರು ಎನ್ನುವ ಸಿದ್ದರಾಮಯ್ಯ ಕುರಿತು ಜೈಲಿಗೆ ಹೋಗಿ ಬಂದವರು ಯಾರು ಅಂತ ಹೇಳಿದರೇ ಅವರ ರಾಷ್ಟ್ರೀಯ ನಾಯಕರಗಳನ್ನೆ ನೋಡಿ ಚಿದಂಬರಂ, ಡಿಕೆ ಶಿವಕುಮಾರ್ ಯಾರು.., ಇವತ್ತು ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ, ಅವರು ಹೇಳಿದ್ದನ್ನ ಅವರೇ ಅನುಭವಿಸುತ್ತಾರೆ, ಕಾಂಗ್ರೆಸ್ ಏನು ಹೇಳುತ್ತದೆ ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತದೆ ಎಂದು ವಾಗ್ದಾಳಿ ನಡೆಸಿದರು.ಆನಂದ್ ಸಿಂಗ್ ರವರ ಅರಣ್ಯ ಖಾತೆ ವಿಚಾರವನ್ನ ಮುಖ್ಯಮಂತ್ರಿಗಳೇ ಗಮನಿಸುತ್ತಾರೆ ಅವರೇ ನೋಡಿಕೊಳ್ಳುತ್ತಾರೆ ಎಂದರು.