ಬೆಂಗಳೂರು: ಸ್ಪಾ ಮೇಲೆ ಸಿಸಿಬಿ ದಾಳಿ, 6 ಯುವತಿಯರ ರಕ್ಷಣೆ! 

ಬೆಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಕೋರಮಂಗಲದ ಸ್ಪಾ ಮೇಲೆ ದಾಳಿ ನಡೆಸಿದ್ದಾರೆ. 
ಬೆಂಗಳೂರು: ಸ್ಪಾ ಮೇಲೆ ಸಿಸಿಬಿ ದಾಳಿ, 6 ಯುವತಿಯರ ರಕ್ಷಣೆ!
ಬೆಂಗಳೂರು: ಸ್ಪಾ ಮೇಲೆ ಸಿಸಿಬಿ ದಾಳಿ, 6 ಯುವತಿಯರ ರಕ್ಷಣೆ!

ಬೆಂಗಳೂರು: ಸಲೂನ್, ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವ  ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 6 ಯುವತಿಯರನ್ನು ರಕ್ಷಿಸಿದ್ದಾರೆ.

ಸ್ಪಾ ಮ್ಯಾನೇಜರ್ ಮೊನಾಲಿ‌ ಘೋಷ್ (33) ಬಂಧಿತ ಆರೋಪಿ. ಬಂಧಿತನಿಂದ 5000ರೂ ಹಾಗೂ ಒಂದು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ  ಕೋರಮಂಗಲ್ ಕೆಬಿ ಹೆಚ್ ಕಾಲೋನಿಯ ಜಾಕ್ ಸಲೂನ್, ವಿಲ್‌ನೆಸ್ ಸ್ಪಾ ಮತ್ತು  ಜ್ಲಾ  ಫ್ಯಾಮಿಲಿ ಸೆಲೂನ್ ಮತ್ತು ಸ್ಪಾ ಗಳಲ್ಲಿ ಯುವತಿಯರಿಗೆ ಹಣದ ಆಮಿಷ ತೋರಿಸಿ  ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸೋಮವಾರ ಪೊಲೀಸರು  ಕಾರ್ಯಾಚರಣೆ ಕೈಗೊಂಡಿದ್ದರು‌.

ಸ್ಪಾ ಮಾಲೀಕ ಅರವಿಂದ್, ರುಪೇಶ್ ಅಲಿಯಾಸ್ ಸಿದ್ದಾರ್ಥ ಎಂಬುವವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ‌ ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಘಟಕದ ಮಹಿಳಾ ಸಂರಕ್ಷಣಾ ದಳದ ಎಸಿಪಿ ಎಂಆರ್ ಮುದವಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com