'ಏನ್ ಸಮಾಚಾರ' ಎಂದ ಟ್ವಿಟರ್, ಕನ್ನಡಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಟ್ವಿಟರ್‌ ಇಂಡಿಯಾ ಇಂದು ಮಾಡಿದ್ದ ಒಂದು ಟ್ವೀಟ್ ಕನ್ನಡಿಗರ ಖುಷಿಗೆ ಕಾರಣವಾಗಿದೆ.
ಟ್ವಿಟರ್ ಕನ್ನಡ
ಟ್ವಿಟರ್ ಕನ್ನಡ

ಬೆಂಗಳೂರು: ಟ್ವಿಟರ್‌ ಇಂಡಿಯಾ ಇಂದು ಮಾಡಿದ್ದ ಒಂದು ಟ್ವೀಟ್ ಕನ್ನಡಿಗರ ಖುಷಿಗೆ ಕಾರಣವಾಗಿದೆ.

ಹೌದು..  ಇಂದು ಮಧ್ಯಾಹ್ನ 1.11 ನಿಮಿಷಯದಲ್ಲಿ ಟ್ವಿಟರ್ ಇಂಡಿಯಾ ‘ಏನ್‌ ಸಮಾಚಾರ’ ಎಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್ ಖುಷಿ ವ್ಯಕ್ತಪಡಿಸಿರುವ ಕನ್ನಡಿಗರು, ಕನ್ನಡಿಗರಿಗೆ ಉದ್ಯೋಗ ಕೊಟ್ಟ ಟ್ವಿಟರ್ ಧನ್ಯವಾದ ಹೇಳಿದ್ದಾರೆ. ಇದೀಗ ಈ ಟ್ವೀಟ್ ವ್ಯಾಪಕ ವೈರಲ್ ಆಗುತ್ತಿದ್ದು, ರಾತ್ರಿ ವೇಳೆ 14 ಸಾವಿರ ಬಾರಿ ರಿಟ್ವೀಟ್ ಆಗಿದ್ದು, 66 ಸಾವಿರ ಲೈಕ್ ಪಡೆದಿದೆ. ಅಂತೆಯೇ 16 ಸಾವಿರ ಪ್ರತಿಕ್ರಿಯೆಗಳು  ಬಂದಿವೆ.

ಇನ್ನು 'ಏನ್‌ ಸಮಾಚಾರ' ಎಂದು ಪ್ರಶ್ನೆ ಹಾಕಿದ ಟ್ವಿಟರ್‌ ಇಂಡಿಯಾಕ್ಕೆ ಟ್ವೀಟರ್‌ ಬಳಕೆದಾರರು ಹಲವು ಬಗೆಯ ಉತ್ತರಗಳನ್ನೇ ನೀಡಿದ್ದು, ಈ ಪೈಕಿ ಸಿಂಪಲ್ ನಿರ್ದೇಶಕ ಸುನಿ ಕೂಡ ಪ್ರತಿಕ್ರಿಯೆ ನೀಡಿ ಸಿನಿರಂಗದ ಇತ್ತೀಚೆಗಿನ ಬೆಳವಣಿಗೆಳನ್ನು ಸುದ್ದಿರೂಪದಲ್ಲಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com