ಪಾಕ್ ಪರ ಘೋಷಣೆ: ಕೆಎಲ್ಇ ಕಾಲೇಜಿನಲ್ಲಿ ಇನ್ನುಳಿದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಅಭದ್ರತೆ! 

ಕೆಎಲ್ಇ ಕಾಲೇಜಿನಲ್ಲಿದ್ದ ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣದಿಂದ ಕಾಲೇಜಿನಲ್ಲೇ ಇದ್ದ ಇನ್ನುಳಿದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಅಭದ್ರತೆ ಕಾಡಲು ಪ್ರಾರಂಭವಾಗಿದೆ. 

ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನೂ ನಾಲ್ವರು ಕಾಶ್ಮೀರದ ವಿದ್ಯಾರ್ಥಿಗಳು ಕೆಎಲ್ಇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

ಕಾಶ್ಮೀರ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ಇರುವ ವಿಡಿಯೋ ವೈರಲ್ ಆದಾಗಿನಿಂದಲೂ ಕ್ಯಾಂಪಸ್ ಹಾಗೂ ಹಾಸ್ಟೆಲ್ ನಲ್ಲಿ ಅಹಿತಕರ ವಾತಾವರಣ ಮೂಡಿದೆ. ಅಷ್ಟೇ ಅಲ್ಲದೇ ಆ ವಿದ್ಯಾರ್ಥಿಗಳ ಮೇಲೆ ಕೋರ್ಟ್ ಬಳಿ ಹಲ್ಲೆ ನಡೆದ ಬಳಿಕ ಉಳಿದ ಕಾಶ್ಮೀರಿ ವಿದ್ಯಾರ್ಥಿಗಳಲ್ಲಿ ಅಭದ್ರತೆ ಕಾಡುತ್ತಿದೆ. 

ನಾಲ್ವರ ಪೈಕಿ ಇಬ್ಬರು ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರೆ ಉಳಿದ ಇಬ್ಬರು ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ರಜೆ ಹಿನ್ನೆಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರು ತಮ್ಮ ಊರುಗಳಿಗೆ ತೆರಳಿದ್ದರು. ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮ್ಯಾನೆಜ್ಮೆಂಟ್ ನ ಸಲಹೆಯಂತೆ ತರಗತಿಗಳು ಪ್ರಾರಂಭವಾದರೂ ಇನ್ನಿಬ್ಬರು ವಿದ್ಯಾರ್ಥಿಗಳು ತಮ್ಮ ಸಂಬಂಧಿಕರ ಮನೆಯಲ್ಲೇ ಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com