ಮಾಧ್ಯಮಗಳ ಮೇಲೆ ಸ್ಪೀಕರ್ ಮತ್ತೊಂದು‌ ನಿರ್ಬಂಧ: ಶಾಸಕರ ಭವನಕ್ಕೆ ನೋ ಎಂಟ್ರಿ

ವಿಧಾನಮಂಡಲ ಕಲಾಪದ ಚಿತ್ರೀಕರಣದಿಂದ ಮಾಧ್ಯಮಗಳ ಕ್ಯಾಮೆರಾವನ್ನು ದೂರ ಇಟ್ಟಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಮಾಧ್ಯಮಗಳ ಮೇಲೆ ಮತ್ತೊಂದು ರೀತಿಯಲ್ಲಿ ನಿರ್ಬಂಧ ಹೇರಿದ್ದು ಶಾಸಕರ ಭವನಕ್ಕೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ವಿಧಾನಮಂಡಲ ಕಲಾಪದ ಚಿತ್ರೀಕರಣದಿಂದ ಮಾಧ್ಯಮಗಳ ಕ್ಯಾಮೆರಾವನ್ನು ದೂರ ಇಟ್ಟಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಮಾಧ್ಯಮಗಳ ಮೇಲೆ ಮತ್ತೊಂದು ರೀತಿಯಲ್ಲಿ ನಿರ್ಬಂಧ ಹೇರಿದ್ದು ಶಾಸಕರ ಭವನಕ್ಕೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿದ್ದಾರೆ.

ಮೊದಲು ಶಾಸಕರ ಭವನಕ್ಕೆ ಪತ್ರಕರ್ತರಿಗೆ ಮುಕ್ತ ಪ್ರವೇಶ ಇತ್ತು. ಈಗ ಶಾಸಕರ ಖಾಸಗಿತನಕ್ಕೆ ತೊಂದರೆಯಾಗುತ್ತದೆ ಎಂದು ನೆಪ ಹೇಳಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ‌ನಿರಾಕರಿಸಿ ಆದೇಶಿಸಿದ್ದಾರೆ. ಶಾಸಕರು ಸಂದರ್ಶನಕ್ಕೆ ಒಪ್ಪಿಗೆ ಕೊಟ್ಟರೆ ಮಾತ್ರ ಶಾಸಕರ ಭವನ ಪ್ರವೇಶಿಸಬಹುದು ಎಂದಿದ್ದಾರೆ.

ಶಾಸಕರು ತಮ್ಮಕ್ಷೇತ್ರಗಳಿಂದ ಬೆಂಗಳೂರಿಗೆ ಬಂದು ತಮ್ಮ ಕೆಲಸದ ಸಮಯದ ನಂತರ ಶಾಸಕರ ಭವನದಲ್ಲಿ ತಂಗುವುದು ಅವರ ಖಾಸಗಿ ಸಮಯವಾಗಿರುತ್ತದೆ. ಆ ಸಮಯದಲ್ಲಿ ಮಾಧ್ಯಮದವರು ಶಾಸಕರನ್ನು ಭೇಟಿ ಮಾಡಲು ಬಂದರೆ ಅದು ಶಾಸಕರ ಖಾಸಗಿತನಕ್ಕೆ ಅಡಚಣೆ ಉಂಟಾಗುತ್ತದೆ.

ಹೀಗಾಗಿ ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ವರದಿಗಾರು ಹಾಗೂ ಕ್ಯಾಮರಾಮ್ಯಾನ್‌ಗಳಿಗೆ ಶಾಸಕರ ಭವನದ ಒಳಗೆ ಪ್ರವೇಶವನ್ನು ನೀಡಲು ಅವಕಾಶ ಇರುವುದಿಲ್ಲ. ಹೀಗಾಗಿ ಪತ್ರಕರ್ತರಿಗೆ ಶಾಸಕರ ಭವನ ಪ್ರವೇಶಕ್ಕೆ ಕೊಡಬಾರದು ಎಂದು ಆದೇಶ ಹೊರಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com