ಮಹಾದಾಯಿ ಮಧ್ಯಂತರ ಅಧಿಸೂಚನೆಗೆ ಆದೇಶ: ನಿರಾಸೆಯ ಕಾರ್ಮೋಡ ದೂರ ಸರಿದು ಹೊಸ ಭರವಸೆ ಮೂಡಿಸಿದ ನ್ಯಾಯಾಲಯ

ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯುವವರೆಗೂ ಮಹಾದಾಯಿ ನ್ಯಾಯಾಧೀಕರಣದ ಕುರಿತು ಅಧಿಸೂಚನೆ ಹೊರಡಿಸುವುದಿಲ್ಲ ಎನ್ನುವ ಕೇಂದ್ರದ ನಿಲುವು ಹೊರ ಬೀಳುತ್ತಲೇ ಮಲಪ್ರಭ ಅಚ್ಚುಕಟ್ಟು ಪ್ರದೇಶದ ಜನತೆಯಲ್ಲಿ ಮೂಡಿದ್ದ ನಿರಾಸೆಯ ಕಾರ್ಮೋಡ ದೂರ ಇದೀಗ ಸರಿದು ಹೊಸ ಭರವಸೆ ಮೂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯುವವರೆಗೂ ಮಹಾದಾಯಿ ನ್ಯಾಯಾಧೀಕರಣದ ಕುರಿತು ಅಧಿಸೂಚನೆ ಹೊರಡಿಸುವುದಿಲ್ಲ ಎನ್ನುವ ಕೇಂದ್ರದ ನಿಲುವು ಹೊರ ಬೀಳುತ್ತಲೇ ಮಲಪ್ರಭ ಅಚ್ಚುಕಟ್ಟು ಪ್ರದೇಶದ ಜನತೆಯಲ್ಲಿ ಮೂಡಿದ್ದ ನಿರಾಸೆಯ ಕಾರ್ಮೋಡ ದೂರ ಇದೀಗ ಸರಿದು ಹೊಸ ಭರವಸೆ ಮೂಡಿದೆ.

ನ್ಯಾಯಾಲಯ ಆದಷ್ಟು ಶೀಘ್ರ ಮಹಾದಾಯಿ ನದಿ ನೀರು ಬಳಕೆ ಕುರಿತು ಮಧ್ಯಂತರ ಆದೇಶದ ಅಧಿಸೂಚನೆ ಹೊರಡಿಸಬೇಕು ಎಂದು ಸೂಚಿಸಿರುವುದು ಬೆಳಗಾವಿ ವಿಭಾಗದ ಜಿಲ್ಲೆಗಳ ಜನತೆ ಮಹಾದಾಯಿ ನೀರು ಸಿಕ್ಕಷ್ಟೆ ಸಂತಸ ಪಡುವಂತಾಗಿದೆ.

ಸುದೀರ್ಘ ಕಾಲಿನ ಕಾನೂನು ಹೋರಾಟಕ್ಕೂ ಕೇಂದ್ರ ಸರ್ಕಾರ ಬೆಲೆ ಕೊಡದೇ ನದಿನೀರು ಹಂಚಿಕೆಯ ಅಧಿಸೂಚನೆ ವಿಷಯದಲ್ಲಿ ನಡೆದುಕೊಂಡಿದ್ದ ನಡೆಗೆ ನ್ಯಾಯಾಲಯ ಸೂಕ್ತ ಛಾಟಿಏಟು ನೀಡಿದೆ.

ಅರ್ಧ ಶತಮಾನದಿಂದ ಮಲಪ್ರಭ ನದಿಗೆ ಮಹದಾಯಿ ನೀರು ಜೋಡಣೆ ಹೋರಾಟ ನಡೆದುಕೊಂಡು ಬಂದಿದೆ. ಸಾಮಾಜಿಕ, ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ಇದೀಗ ಮಹಾದಾಯಿ ನ್ಯಾಯಾಧೀಕರಣದ ಕುರಿತು ಮಧ್ಯಂತರ ಅಧಿಸೂಚನೆ ಹೊರಡಿಸುವುದರಿಂದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ನಾಲ್ಕೂ ಜಿಲ್ಲೆಗಳ ಜನತೆಯ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ. 

ಸದ್ಯ ಕುಡಿವ ನೀರಿನ ಉದ್ದೇಶಕ್ಕಾಗಿ ಮಹಾದಾಯಿ ನೀರು ಯೋಜನಾ ಪ್ರಾಧಿಕಾರಿ ನೀಡಿದ್ದ ಮಧ್ಯಂತರ ಆದೇಶದಂತೆ ಕರ್ನಾಠಕ ೧೩.೧೨ ಟಿಎಂಸಿಇ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಸಿಕ್ಕಿತ್ತು. ಇದಕ್ಕೆ ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಬೇಕಿತ್ತು.  ಆದರೆ ಕೇಂದ್ರ ಸರ್ಕಾರ ಮೇಲ್ಮನವಿಗಳ ವಿಚಾರಣೆ ಮುಗಿಯುವವರೆಗೂ ನ್ಯಾಯಾಧೀಕರಣದ ಅಧಿಸೂಚನೆ ಹೊರಡಿಸಲಾಗದು ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಜನತೆಯಲ್ಲಿ ನಿರಾಸೆ ಭಾವನೆ ಮೂಡಿಸಿತ್ತು. ಇದೀಗ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸುವಂತೆ ಹೇಳಿರುವುದು ಜನತೆಯಲ್ಲಿ ಸಂತಸ ಇಮ್ಮಡಿಕೊಳ್ಳುವಂತಾಗಿದೆ.

ಮಹಾದಾಯಿಯಿAದ ರಾಜ್ಯಕ್ಕೆ ನ್ಯಾಯಯುತವಾಗಿ ಇನ್ನೂ ಸಿಕ್ಕಬೇಕಿರುವ ನೀರಿಗಾಗಿ ಹೋರಾಟ ಮುಂದುವರಿಯುವ ಜತೆಗೆ ಸದ್ಯ ಹಂಚಿಕೆ ಆಗಿರುವ ನೀರಿನ ಬಳಕೆಗೆ ಅಧಿಸೂಚನೆ ಮೂಲಕ ಅವಕಾಶ ಸಿಕ್ಕಲ್ಲಿ ಮಲಪ್ರಭ ನದಿ ತೀರದ ಜನತೆ ಹಾಗೂ ಸುತ್ತಲಿನ ಪ್ರದೇಶಗಳ ಜನತೆ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.

ಕಳೆದ ಅರ್ಧ ಶತಮಾನದ ಹಿಂದೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಿಂದ ಹೊತ್ತಿದ್ದ ಮಹಾದಾಯಿ ನೀರಿಗಾಗಿ ಹೊತ್ತಿದ್ದ ಹೋರಾಟದ ಕಿಡಿ ಕಳೆದ ಐದಾರು ವರ್ಷಗಳಲ್ಲಿ ಜ್ವಾಲೆಯಂತಾಗಿತ್ತು. ಜನತೆಯ ನಿರಂತರ ಹೋರಾಟಕ್ಕೆ ಇದೀಗ ಮೊದಲ ಹಂತದ ಜಯ ಸಿಕ್ಕಂತಾಗಿದೆ. ನ್ಯಾಯಯುತ ಹಕ್ಕಿನ ನೀರಿಗಾಗಿ ಹೋರಾಟ ಎಂದಿನAತೆ ಮುಂದುವರಿಸಿ ಹಕ್ಕಿನ ಪಾಲಿನ ನೀರನ್ನು ಪಡೆದುಕೊಳ್ಳಬೇಕಿದೆ. ಕೃಷ್ಣೆಯಲ್ಲೂ ಇದಾಗಲಿ:

ಇಂತಹುದೇ ಆದೇಶ ಕೃಷ್ಣಾ ನದಿ ನೀರು ಹಂಚಿಕೆ ಕುರಿತು ೨೦೧೦ ರಲ್ಲಿ ಕೃಷ್ಣಾ ನ್ಯಾಯಾಧೀಕರಣ ವರದಿ ಸರ್ಕಾರದ ಕೈ ಸೇರಿದ್ದು, ಇದುವರೆಗೂ ನೀರು ಬಳಕೆ ಕುರಿತು ಅಧಿಸೂಚನೆ ಹೊರ ಬಿದ್ದಿಲ್ಲ. ಹಾಗಾಗಿ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಕಾರ್ಯ ಹಾಗೆ ಉಳಿದುಕೊಂಡಿದೆ. ಸರ್ಕಾರ ಅಧೀಸೂಚನೆ ಹೊರಡಿಸಿದಲ್ಲಿ ಸದ್ಯ ೫೧೯. ೬೦ ಮೀಟರ್‌ನಿಂದ ೫೨೪ ಮೀಟರ್‌ಗೆ ಹೆಚ್ಚಿಸಲು ಸಾಧ್ಯವಾಗಲಿದೆ. ಆ ಮೂಲಕ ಕೃಷ್ಣಾ ನದಿಯಲ್ಲಿ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಮಹಾದಾಯಿ ನೀರಿಗಾಗಿ ಸಂಬAಧಿಸಿದ ರಾಜ್ಯಗಳು ತಮ್ಮ ಹಕ್ಕಿನ ಪಾಲಿಗಾಗಿನ ಹೋರಾಟವನ್ನು ಮುಂದುವರಿಸುವ ಹಾಗೆ ಕೃಷ್ಣಾ ನ್ಯಾಯಾಧೀಕರಣದ ಮಧ್ಯಂತರ ಆದೇಶ ಹೊರಡಿಸಿ ಉಳಿದಂತೆ ಕಾನೂನಾತ್ಮಕ ಹೋರಾಟ ಮುಂದುವರಿದಲ್ಲಿ ಹಂಚಿಕೆ ನೀರನ್ನಾದರೂ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಇಲ್ಲದೆ ಹೋದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನಾ ಕಾಮಗಾರಿ ವೆಚ್ಚ ಮಾತ್ರ ಹೆಚ್ಚುತ್ತ ಹೋಗಲಿದೆ. ಈಗಾಗಲೇ ೧ ಲಕ್ಷ ಕೋಟಿಗೂ ಅಧಿಕ ಯೋಜನಾ ವೆಚ್ಚ ಆಗಿದ್ದು, ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುವ ಜತೆಗೆ ರಾಜ್ಯ ಸರ್ಕಾರದಿಂದ ಕಾಮಗಾರಿ ಪೂರ್ಣಗೊಳಿಸುವುದು ಸಾಧ್ಯವಾಗದೇ ರಾಷ್ಟಿçÃಯ ಯೋಜನೆಯನ್ನಾಗಿ ರೂಪಿಸುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಅಚ್ಚರಿ ಪಡಬೇಕಿಲ್ಲ.


ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com