ವಂದೇ ಮಾತರಂ ಕೇಳಲೂ ಕೂಡ ಇವರು ಯೋಗ್ಯರಲ್ಲ: ಅಮೂಲ್ಯಗೆ ತಿರುಗೇಟು ನೀಡಿದ ಮಹೇಶ್ ವಿಕ್ರಮ್ ಹೆಗ್ಡೆ

ವಿಮಾನ ನಿಲ್ದಾಣದಲ್ಲಿ ವಂದೇ ಮಾತರಂ ಹಾಡಿ ಎಂದು ಪೀಡಿಸಿದ್ದ ಅಮೂಲ್ಯಗೆ ತಿರುಗೇಟು ನೀಡಿರುವ ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ವಂದೇ ಮಾತರಂ ಕೇಳಲೂ ಕೂಡ ಇವರು ಯೋಗ್ಯರಲ್ಲ ಎಂದು ಹೇಳಿದ್ದಾರೆ.
ಯುವತಿ ಅಮೂಲ್ಯ ಮತ್ತು ವಿಕ್ರಮ್ ಮಹೇಶ್ ಹೆಗ್ಡೆ
ಯುವತಿ ಅಮೂಲ್ಯ ಮತ್ತು ವಿಕ್ರಮ್ ಮಹೇಶ್ ಹೆಗ್ಡೆ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ವಂದೇ ಮಾತರಂ ಹಾಡಿ ಎಂದು ಪೀಡಿಸಿದ್ದ ಅಮೂಲ್ಯಗೆ ತಿರುಗೇಟು ನೀಡಿರುವ ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ವಂದೇ ಮಾತರಂ ಕೇಳಲೂ ಕೂಡ ಇವರು ಯೋಗ್ಯರಲ್ಲ ಎಂದು ಹೇಳಿದ್ದಾರೆ.

ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಅಮೂಲ್ಯ ವಿರುದ್ಧ ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಕಿಡಿಕಾರಿದ್ದು, ಇಂತಹವರು ವಂದೇ ಮಾತರಂ ಕೇಳಲೂ ಕೂಡ ಯೋಗ್ಯರಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ವಿಕ್ರಮ್ ಮಹೇಶ್ ಹೆಗ್ಡೆ, 'ಇದೇ ಕಾರಣಕ್ಕೆ ನಾನು ಅಂದು ವಿಮಾನ ನಿಲ್ದಾಣದಲ್ಲಿ ಮೌನವಹಿಸಿದ್ದೆ. ಇಂತಹವರು ವಂದೇ ಮಾತರಂ ಗೀತೆ ಕೇಳಲೂ ಕೂಡ ಯೋಗ್ಯರಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಗಿಮಿಕ್ ಗಳನ್ನು ಮಾಡುತ್ತಾರೆ. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಪೊಲೀಸರು ಕ್ರೂರವಾಗಿ ಶಿಕ್ಷಿಸಬೇಕು. ಪಾಕಿಸ್ತಾನ ಪದದಲ್ಲಿದ ಪಾ ಅಕ್ಷರವನ್ನೂ ಕೂಡ ಉಚ್ಥರಿಸಲು ಅವರು ಭಯಪಡಬೇಕು. ಇಂತಹ ಟ್ರೆಂಡ್ ಅಪಾಯಕಾರಿಯಾಗಿದ್ದು, ಕೂಡಲೇ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಈ ಹಿಂದೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್‌ ವಿಕ್ರಂ ಹೆಗ್ಡೆ ಅವರಿಗೆ ವಂದೇ ಮಾತರಂ ಹಾಡುವಂತೆ ಪೀಡಿಸಿದ್ದರು. ಅಲ್ಲದೆ ವಂದೇ ಮಾತರಂ ಗೀತೆ ಹಾಡುವ ಮೂಲಕ ನಿಮ್ಮ ದೇಶಭಕ್ತಿ ತೋರಿಸಿ ಎಂದು ಕಾಡಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com