ಅಪ್ರಾಪ್ತನನ್ನು ವರಿಸಿದ 19ರ ಯುವತಿ: ಬೆಂಗಳೂರಿನಲ್ಲೊಂದು ವಿಚಿತ್ರ ಸಂಗತಿ

ನಗರದ ಅರೆಕೆರೆ ಮೈಕೋ ಬಡಾವಣೆಯಲ್ಲಿ 16 ವರ್ಷದ ಅಪ್ರಾಪ್ತನನ್ನು 19ರ  ಯುವತಿ ವಿವಾಹವಾಗಿರುವ ಕುತೂಲಹಕಾರಿ ಸಂಗತಿ ಬೆಳಕಿಗೆ ಬಂದಿದೆ.

Published: 22nd February 2020 02:18 PM  |   Last Updated: 22nd February 2020 02:18 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : UNI

ಬೆಂಗಳೂರು: ನಗರದ ಅರೆಕೆರೆ ಮೈಕೋ ಬಡಾವಣೆಯಲ್ಲಿ 16 ವರ್ಷದ ಅಪ್ರಾಪ್ತನನ್ನು 19ರ  ಯುವತಿ ವಿವಾಹವಾಗಿರುವ ಕುತೂಲಹಕಾರಿ ಸಂಗತಿ ಬೆಳಕಿಗೆ ಬಂದಿದೆ.

ಯುವತಿಗೆ 16 ವರ್ಷದ ಅಪ್ರಾಪ್ತ ಬಾಲಕನ ಜೊತೆ ಮದುವೆ ಮಾಡಿಸಿರುವ ಘಟನೆ ವರದಿಯಾಗಿದೆ. ಕೆಲ ದಿನಗಳ ಹಿಂದೆ ಯುವತಿ ಹಾಗೂ ಬಾಲಕನಿಗೆ ಮದುವೆ ಮಾಡಲಾಗಿತ್ತು.

ಬಳಿಕ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಬಾಲ್ಯ ವಿವಾಹದ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ‌ ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಇದೇ ತಿಂಗಳ 19ರಂದು ಯುವಕನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬಾಲ್ಯ ವಿವಾಹ ಬಯಲಿಗೆ ಬಂದಿತ್ತು.

ಸದ್ಯ ಯುವತಿಯನ್ನು ಪೋಷಕರಿಗೆ ಒಪ್ಪಿಸಿ, ಅಪ್ರಾಪ್ತ ಬಾಲಕನನ್ನು  ಪೊಲೀಸರು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

ಬಾಲಕ ಹಾಗೂ ಯುವತಿ ಪೋಷಕರು ಸಂಬಂಧಿಕರಾಗಿದ್ದು, ಯುವತಿಗೆ ತಂದೆ ತಾಯಿ ಇರಲಿಲ್ಲ. ಹೀಗಾಗಿ ಅವಳು ಅತ್ತೆ‌ ಮನೆಯಲ್ಲಿ ವಾಸವಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರಿಲ್ಲದ ಆಕೆಗೆ ಮದುವೆ ಮಾಡಿಸಲಾಗಿತ್ತು ಎನ್ನಲಾಗಿದೆ. 

ಕಳೆದ 20 ವರ್ಷಗಳಿಂದ ಬಾಲಕನ ಪೋಷಕರು ಬೆಂಗಳೂರಿನಲ್ಲೇ ವಾಸವಾಗಿದ್ದು, ಬಾಲಕನ ತಂದೆ ವಾಹನ ಚಾಲಕರಾಗಿದ್ದಾರೆ 
ತಿಳಿದು ಬಂದಿದೆ.

ಎರಡು ಕುಟುಂಬದವರು ಅಸ್ಸಾಂ ಹಾಗೂ ನೇಪಾಳದವರಾಗಿದ್ದು, ಬಲವಂತವಾಗಿ ಪೋಷಕರು ಅಪ್ರಾಪ್ತ ಬಾಲಕನ ಮದುವೆ ಮಾಡಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪುಟ್ಟೇನಹಳ್ಳಿ ಠಾಣೆ ಪ್ರಕರಣ ತನಿಖೆ ಕೈಗೊಂಡಿದ್ದಾರೆ.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp