ಜಯನಗರದಲ್ಲಿ ಸಿಗಲಿದೆ  ಐಸ್ ಕ್ರೀಂ ದೋಸೆ, ಇಡ್ಲಿ, ಐಸ್ ಕ್ರೀಂ ಪಾನಿಪುರಿ!

ಫುಡ್ ಫ್ಯಾಶನ್ ಎಂಬುದು ಇಂದು ನೆನ್ನೆಯದಲ್ಲ. ಪಾಶ್ಚಾತ್ಯ ಖಾದ್ಯಗಳಿಗೆ ದೇಶೀ ಟಚ್‌ ಕೊಟ್ಟು ಪರಿಚಯಿಸಲಾದ ಅನೇಕ ಖಾದ್ಯಗಳು ಸಖತ್‌ ಫೇಮಸ್ ಆಗಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಇವೆ.
ಐಸ್ ಕ್ರೀಂ ದೋಸೆ
ಐಸ್ ಕ್ರೀಂ ದೋಸೆ

ಬೆಂಗಳೂರು: ಫುಡ್ ಫ್ಯಾಶನ್ ಎಂಬುದು ಇಂದು ನೆನ್ನೆಯದಲ್ಲ. ಪಾಶ್ಚಾತ್ಯ ಖಾದ್ಯಗಳಿಗೆ ದೇಶೀ ಟಚ್‌ ಕೊಟ್ಟು ಪರಿಚಯಿಸಲಾದ ಅನೇಕ ಖಾದ್ಯಗಳು ಸಖತ್‌ ಫೇಮಸ್ ಆಗಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಇವೆ.

ಐಸ್ ಕ್ರೀಂ ದೋಸೆ-ಸ್ವರ್ಗಕ್ಕೆ ಮೂರೇ ಗೇಣು ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ನೀರು ದೋಸೆ, ಹೀಗೆ ಹಲವಾರು ವೆರೈಟಿ ದೋಸೆಗಳ ರುಚಿ ನೋಡಿರುತ್ತೀರಿ .ಆದರೆ ಐಸ್ ಕ್ರೀಂ ದೋಸೆ, ಹೌದು ಜಯನಗರದ 2ನೇ ಬ್ಲಾಕ್ ನಲ್ಲಿರುವ  ಮಂಜುನಾಥ್ ಈ ವೆರೈಟಿ ದೋಸೆ ಹರಿಕಾರ.

ದೋಸೆ ಮೇಲೆ ಐಸ್ ಕ್ರೀಂ ಸಿರಾಪ್ ಹಾಕುತ್ತಾರೆ. ದೋಸೆಗೆ ಬೇರೆ ಪದಾರ್ಥಗಳನ್ನು ಹಾಕುವ ಬದಲು ಟೂಟಿ ಫ್ರೂಟಿ ಮುಂತಾದವುಗಳನ್ನು ಹಾಕಿ ಕೊಡಲಾಗುತ್ತದೆ.

ನಮ್ಮಲ್ಲಿ ಗುಲ್ಕಂಡ್ ದೋಸೆ, ಹೆಚ್ಚಾಗಿ ಮಾರಾಟವಾಗುತ್ತಿದ್ದವು ಎಂದು ಅಮರನಾಥ್ ಚಾಟ್ಸ್ ಮಾಲೀಕ ಮಂಜುನಾಥ್ ಸಂಜೆ 5.30 ರಿಂದ ರಾತ್ರಿ 11 ಗಂಟೆಯವರೆಗೆ ಅಂಗಡಿ ತೆರೆದಿರುತ್ತದೆ. ರಾತ್ರೆ 8 ಗಂಟೆಯ ನಂತರ ಹೆಚ್ಚಿನ ಗ್ರಾಹಕರು ಬರುತ್ತಾರೆ. 

ದೋಸೆಯ ಜೊತೆಗೆ ಐಸ್ ಕ್ರೀಂ ಇಡ್ಲಿ, ಓರಿಯೋ ದೋಸೆ, ಬುಲೆಟ್ ಐಸ್ ಕ್ರೀಂ ಬೊಂಡಾ ಮತ್ತು ಫ್ರೈಡ್ ರೈಸ್ ಕ್ರೀಂ, ಬ್ರೆಡ್ ಐಸ್ ಕ್ರೀಂ ಸೇರಿದಂತೆ ಹಲವು ವೆರೈಟಿಗಳು ದೊರೆಯುತ್ತವೆ. 40 ರುಪಾಯಿಯಿಂದ 150 ರುಗಳ ವರೆಗೂ ಬೆಲೆ ಇದೆ. ಮಾರ್ಚ್ 1 ರಿಂದ ಪಾನಿ ಪುರಿ ಐಸ್ ಕ್ರೀಂ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com