ಪಾಕ್ ಪರ ಅಮೂಲ್ಯ ಘೋಷಣೆ: ಜೆಡಿಎಸ್ ಸದಸ್ಯ ಸೇರಿ ನಾಲ್ವರ ವಿಚಾರಣೆ

ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ ಪಾಕಿಸ್ತಾನದ ಪರ ವಿದ್ಯಾರ್ಥಿನಿ ಅಮೂಲ್ಯ ಲಿಯೋನ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಿಬಿಎಂಪಿ ಜೆಡಿಎಸ್ ಸದಸ್ಯ ಹಾಗೂ ಅಂದಿನ ಕಾರ್ಯಕ್ರಮದ ಆಯೋಜಕ ಇಮ್ರಾನ್ ಪಾಷಾ ಸೇರಿ ನಾಲ್ವರನ್ನು ಪೊಲೀಸರು ಶನಿವಾರ 6 ತಾಸು ಉಪ್ಪಾರಪೇಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. 
ಅಮೂಲ್ಯ
ಅಮೂಲ್ಯ

ಬೆಂಗಳೂರು: ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ ಪಾಕಿಸ್ತಾನದ ಪರ ವಿದ್ಯಾರ್ಥಿನಿ ಅಮೂಲ್ಯ ಲಿಯೋನ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಿಬಿಎಂಪಿ ಜೆಡಿಎಸ್ ಸದಸ್ಯ ಹಾಗೂ ಅಂದಿನ ಕಾರ್ಯಕ್ರಮದ ಆಯೋಜಕ ಇಮ್ರಾನ್ ಪಾಷಾ ಸೇರಿ ನಾಲ್ವರನ್ನು ಪೊಲೀಸರು ಶನಿವಾರ 6 ತಾಸು ಉಪ್ಪಾರಪೇಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಪಾಷಾ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿದ ತನಿಖಾಧಿಕಾರಿಗಳು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ರಾತ್ರಿ 9 ಗಂಟೆಗೆ ಕಳುಹಿಸಿದ್ದಾರೆ. 

ವಿಚಾರಣೆ ವೇಳೆ ಸಿಎಎ ಹಾಗೂ ಎನ್ಆರ್'ಸಿ ವಿರೋಧಿಸಿ ಕಾರ್ಯಕ್ರಮ ಆಯೋಜಿಸಿದ್ದೆವು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಲ್ಲಿ ಅಮೂಲ್ಯ ಕೂಡ ಒಬ್ಬಳಾಗಿದ್ದಳು ಎಂದು ಪಾಷಾ ಹೇಳಿದ್ದಾರೆಂದು ತಿಳಿದುಬಂದಿದೆ. 

ವಿಚಾರಣೆ ವೇಳೆ ಪಾಷಾ ಹಾಗೂ ಇತರೆ ವ್ಯಕ್ತಿಗಳ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಇದಲ್ಲದೆ ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ಅಮೂಲ್ಯ, ನಿಮಗೆ ಒಂದು ಮುಖವಷ್ಟೇ ಕಾಣುತ್ತಿದೆ. ಕಾಣದ ನಾಯಕರು ನನ್ನ ಹಿಂದೆ ಇದ್ದಾರೆ. ನನ್ನ ಭಾಷಣಕ್ಕೆ ಅವರು ಸಹಾಯ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಆ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಅಮೂಲ್ಯ ಅವರ ಹೇಳಿಕೆಯನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಲಾಗಿದ್ದು, ಮತ್ತಷ್ಟು ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಅಮೂಲ್ಯ ಭಾಷಣ ಮಾಡಿದ್ದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಅಮೂಲ್ಯ ಪೋಷಕರ ವಿಚಾರಣೆ ಕೂಡ ಅಗತ್ಯವಿದೆ. ಈಗಾಗಲೇ ತನಿಖೆಗೆ ಎಸ್ಐಟಿ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com