ಹೊಸಪೇಟೆ: ಕಾಲುವೆಗೆ ಕಾರು ಉರುಳಿ ಮಂಗಳಮುಖಿ ಸಾವು, ಬೈಕ್ ಅಪಘಾತದಲ್ಲಿ ಸವಾರ ದುರ್ಮರಣ!

ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು ಮಂಗಳ ಮುಖಿ ಸಾವನ್ನಪ್ಪಿದ್ದು ಓರ್ವ ಪ್ರಾಣಪಾಯದಿಂದ ಪಾರಾಗಿದ್ದಾನೆ.

Published: 23rd February 2020 03:53 PM  |   Last Updated: 23rd February 2020 04:10 PM   |  A+A-


Car Accident

ಪ್ರತ್ಯಕ್ಷ ದೃಶ್ಯ

Posted By : Vishwanath S
Source : RC Network

ಹೊಸಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು ಮಂಗಳ ಮುಖಿ ಸಾವನ್ನಪ್ಪಿದ್ದು ಓರ್ವ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಹೊಸಪೇಟೆಯ ರೈಲ್ವೆ ಸ್ಟೇಷನ್ ಸಮೀಪ ಎಲ್ ಎಲ್ ಸಿ ಕಾಲುವೆಗೆ ನಿನ್ನೆ ತಡ  ರಾತ್ರಿ ಕಾರು ಉರುಳಿಬಿದ್ದಿದೆ. ಕಾರಿನಲ್ಲಿ ಮುಖೇಶ್ ಮತ್ತು ಪಿ.ಕೆ ಹಳ್ಳಿಯ ನಿವಾಸಿ 35 ವರ್ಷದ ಮಂಗಳ ಮುಖಿ ಅನಿತ ಪ್ರಯಾಣಿಸುತ್ತಿದ್ದರು.

ಮುಖೇಶ್ ಕಾರಿನ ಗಾಜು ಹೊಡಿದು ಹೊರ ಬಂದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗೃಹರಕ್ಷಕ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರು ಹೊರಕ್ಕೆ ತೆಗೆದಿದ್ದಾರೆ.

ಆಯತಪ್ಪಿ ಕೆಳಗೆ ಬಿದ್ದು ಬೈಕ್ ಸವಾರ ಸಾವು
ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ಬಳಿ ನಡೆದಿದೆ. 

ಮೃತ ವ್ಯಕ್ತಿ ಸೀತಾರಾಮ್ ತಾಂಡದ ನಿವಾಸಿ 35 ವರ್ಷದ ಹರೀಶ್ ಎಲ್.ಎಸ್ ಎಂದು ಗುರುತಿಸಲಾಗಿದೆ. ಗಂಗಾವತಿಯಿಂದ ಕೆಲಸ ಮುಗಿಸಿ ಸೀತಾರಾಮ್ ತಾಂಡಕ್ಕೆ ಮರಳುವ ವೇಳೆ ದುರ್ಘಟನೆ ಸಂಭವಿಸಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp