ಸೋಷಿಯಲ್ ಮೀಡಿಯಾದಲ್ಲಿ ಗೆಳತಿಯ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವ ಬೆದರಿಕೆ: ಆರೋಪಿ ಅಂದರ್ 

ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್ ಮೇಲ್ ​​ ಮಾಡುತ್ತಿದ್ದ ಆರೋಪಿಯನ್ನು ಕೃಷ್ಣರಾಜಪುರ ಪೊಲೀಸರು ಬಂಧಿಸಿದ್ದಾರೆ.  ಮಧ್ಯಪ್ರದೇಶ ಮೂಲದ ದೀಪಕ್ ಕುಮಾರ್ ಬಂಧಿತ ಆರೋಪಿ.

Published: 23rd February 2020 12:52 PM  |   Last Updated: 23rd February 2020 12:52 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : UNI

ಬೆಂಗಳೂರು: ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್ ಮೇಲ್ ​​ ಮಾಡುತ್ತಿದ್ದ ಆರೋಪಿಯನ್ನು ಕೃಷ್ಣರಾಜಪುರ ಪೊಲೀಸರು ಬಂಧಿಸಿದ್ದಾರೆ.  ಮಧ್ಯಪ್ರದೇಶ ಮೂಲದ ದೀಪಕ್ ಕುಮಾರ್ ಬಂಧಿತ ಆರೋಪಿ.

ಸಂತ್ರಸ್ತ ಯುವತಿ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಆರೋಪಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಳು. ಕಾರ್ಯಕ್ರಮ ಮುಗಿದ ಬಳಿಕ ಇಬ್ಬರೂ  ದೀಪಕ್​​ ರೂಂಗೆ ತೆರಳಿದ್ದಾರೆ. ಅಲ್ಲಿ ಸಂತ್ರಸ್ತೆ ಸ್ನಾನ ಮಾಡುವ ವಿಡಿಯೋವನ್ನು ಆರೋಪಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ.

ಈ ಘಟನೆ ಬಳಿಕ ಆರೋಪಿ ರೂಂ ಖಾಲಿ ಮಾಡಿಕೊಂಡು ತನ್ನ ಊರಿಗೆ ತೆರಳಿದ್ದ. ಅಲ್ಲಿಂದ ಹೊಸ ಇ-ಮೇಲ್ ಐಡಿ ಕ್ರಿಯೇಟ್ ಮಾಡಿ ಯುವತಿಗೆ ವಿಡಿಯೋ ಕಳುಹಿಸಿದ್ದ. ಅಲ್ಲದೇ ₹3 ಲಕ್ಷ ಹಣ ಕೊಡು ಇಲ್ಲವಾದರೆ ವಿಡಿಯೋವನ್ನು ಸೋಷಿಯಲ್ ಮಿಡೀಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ವಿಚಾರವಾಗಿ ಸಂತ್ರಸ್ತೆ  ಜನವರಿ 13ರಂದು ಕೃಷ್ಣರಾಜಪುರ ಠಾಣೆಗೆ ತೆರಳಿ ದೂರು ನೀಡಿದ್ದಳು. ಕಲಂ 354(ಸಿ), 509, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp