ಸಿಸಿಬಿ ಪೊಲೀಸರಿಂದ ಭೂಗತ ಪಾತಕಿ ರವಿ ಪೂಜಾರಿಯ ತೀವ್ರ ವಿಚಾರಣೆ

ಭೂಗತ ಪಾತಕಿ ರವಿ ಪೂಜಾರಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಮಡಿವಾಳದ ಎಫ್​ಎಸ್​ಎಲ್ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಭೂಗತ ಪಾತಕಿ ರವಿಪೂಜಾರಿ
ಭೂಗತ ಪಾತಕಿ ರವಿಪೂಜಾರಿ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಮಡಿವಾಳದ ಎಫ್​ಎಸ್​ಎಲ್ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಎಫ್ ಎಸ್ ಎಲ್ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್,‌ ಎಸಿಪಿ ವೇಣು ಗೋಪಾಲ್  ಅವರ ತಂಡ ರವಿ ಪೂಜಾರಿಯನ್ನು ವಿಚಾರಣೆ ನಡೆಸುತ್ತಿದೆ. 

ನ್ಯಾಯಧೀಶರ ಸೂಚನೆಯಂತೆ ವಿಚಾರಣಾ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಆತನ ಕೋಣೆ ಸುತ್ತಮುತ್ತಲು ಸಿಸಿಟಿವಿ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಚಾರಣೆ ವೇಳೆ ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು, ರವಿ ಪೂಜಾರಿ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಲಿದ್ದಾರೆ.

ರವಿ ಪೂಜಾರಿ ಪರ ವಕೀಲ ದಿಲ್ ರಾಜ್ ಅವರು, ವಿಚಾರಣೆ ವೇಳೆ ತಾವು ರವಿ ಪೂಜಾರಿ ಜೊತೆಗೆ ಇರಲು ಅನುಮತಿ ಕೇಳಿದ್ದರು. ಆದರೆ, ವಕೀಲರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ‌.

ಇಂದು ರವಿ ಪೂಜಾರಿ ವಿಚಾರಣೆ ಹಿನ್ನೆಲೆಯಲ್ಲಿ ವಕೀಲ್ ದಿಲ್ ರಾಜ್, ಎಫ್ ಎಸ್ ಎಲ್ ಕಚೇರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.

ಸಿಲಿಕಾನ್ ಸಿಟಿಯ ತಿಲಕ‌ ನಗರದ ಜೋಡಿ ಕೊಲೆ ಸೇರಿ ಹಲವು ಬೆದರಿಕೆ ಕೇಸ್ ಗಳು ಆತನ ವಿರುದ್ಧ ದಾಖಲಾಗಿರುವ  ಎಲ್ಲಾ ಪ್ರಕರಣಗಳ ಕುರಿತು ವಿವಿಧ ಆಯಾಮಗಳಲ್ಲಿ ಪೊಲೀಸರು ರವಿ ಪೂಜಾರಿಯನ್ನು ವಿಚಾರಣೆ  ನಡೆಸಲಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿಯನ್ನು ಎಡಿಜಿಪಿ ಅಮರ್ ಪಾಂಡೆ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರ  ನೇತೃತ್ವದ ತಂಡ  ಆಫ್ರಿಕಾದ ಸೆನೆಗಲ್ ನಿಂದ ಬಂಧಿಸಿ ರವಿವಾರ ರಾತ್ರಿ ಬೆಂಗಳೂರಿಗೆ  ಕರೆತಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com