70 ವರ್ಷದ ಹಳೆಯ ಶಾಲೆ: 3 ವರ್ಷವಾದರೂ ದುರಸ್ತಿ ಕೆಲಸ ಅಪೂರ್ಣ ಭೂದಾನಿಯ ಮಗನಿಂದಲೇ ಅಡ್ಡಿ! 

ಭೂದಾನಿಯ ಮಗ ಬಂದು ಶಾಲೆಯ ಜಮೀನು ಇಲ್ಲಿ ಬರಲ್ಲ ನಿಮ್ಮ ಜಮೀನು ಬೇರೆಡೆಗೆ ಬರುತ್ತೆ ಎಂದು ಶಾಲೆಯ ದುರಸ್ತಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ ಪರಿಣಾಮ ಮಕ್ಕಳು ಬಿಸಲಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಘಟನೆ ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ ನಡೆದಿದೆ.
70 ವರ್ಷದ ಹಳೆಯ ಶಾಲೆ: 3 ವರ್ಷವಾದರೂ ದುರಸ್ತಿ ಕೆಲಸ ಅಪೂರ್ಣ ಭೂದಾನಿಯ ಮಗನಿಂದಲೇ ಅಡ್ಡಿ!
70 ವರ್ಷದ ಹಳೆಯ ಶಾಲೆ: 3 ವರ್ಷವಾದರೂ ದುರಸ್ತಿ ಕೆಲಸ ಅಪೂರ್ಣ ಭೂದಾನಿಯ ಮಗನಿಂದಲೇ ಅಡ್ಡಿ!

ರಾಯಬಾಗ: ಅದು 70 ವರ್ಷದ ಹಳೆಯ ಶಾಲೆ ಭೂದಾನಿ ಒಬ್ಬರು ಜಮೀನು ದಾನ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುವು ಮಾಡಿದ್ದರು. ಆದರೆ ಭೂದಾನಿಯ ಮಗ ಬಂದು ಶಾಲೆಯ ಜಮೀನು ಇಲ್ಲಿ ಬರಲ್ಲ ನಿಮ್ಮ ಜಮೀನು ಬೇರೆಡೆಗೆ ಬರುತ್ತೆ ಎಂದು ಶಾಲೆಯ ದುರಸ್ತಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ ಪರಿಣಾಮ ಮಕ್ಕಳು ಬಿಸಲಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಘಟನೆ ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ ನಡೆದಿದೆ.

1951 ರಲ್ಲಿ ತೋಟದ ಪ್ರದೇಶದಲ್ಲಿ ಸ್ಥಾಪನೆಯಾದ ಈ  ಶಾಲೆಯಲ್ಲಿ 1 ರಿಂದ 7 ನೆ ತರಗತಿ ವರೆಗೆ 109 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು 7 ಕೊಠಡಿಗಳು ಇದ್ದು 4 ಕೊಠಡಿಗಳನ್ನ ದುರಸ್ತಿ ಮಾಡಲಾಗುತ್ತಿದೆ. ಆದರೆ ಶಾಲೆಗೆ ದಾನ ಕೊಟ್ಟಿರುವ ಜಾಗದ ಮಾಲಿಕ ಮಲ್ಲಯ್ಯ ಮಠಪತಿ ಮಾತ್ರ ಶಾಲೆ ರಿಪೇರಿ ಮಾಡಲು ವಿರೋಧಸುತ್ತಿದ್ದಾರೆ.  ಮಲ್ಲಯ್ಯ ಮಠಪತಿ ತಂದೆ ನಿರುಪಾದಯ್ಯ 10 ಗುಂಟೆ ಜಾಗವನ್ನ ಶಾಲೆ ನಿರ್ಮಾಣಕ್ಕೆ ದಾನ ಮಾಡಿದ್ದರಿ 69 ವರ್ಷಗಳ ವರೆಗೂ ಶಾಲೆ ಚೆನ್ನಾಗಿಯೇ ನಡೆದಿದೆ ಶಾಲಾ ಹಂಚುಗಳು ಹಾಗೂ ಮೇಲ್ಛಾವಣಿ ಹಾಳಾದ ಹಿನ್ನಲೆ 2017 ರಲ್ಲಿ ರಿಪೇರಿ ಮಾಡಲು ತೆಗೆದ ಬಳಿಕ ಈ ವರೆಗೂ ರಿಪೇರಿ ಮಾಡಲು ಬಿಡದೆ ತಕರಾರು ಮಾಡುತ್ತಿದ್ದಾರೆ. ಪರಿಣಾಮ ಮಕ್ಕಳು ಕೊಠಡಿಗಳಿಲ್ಲದೆ ಶಾಲೆ ಆವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

ಇನ್ನು ಶಾಲೆಗೆ ಹೆಚ್ಚುವರಿಯಾಗಿ 3 ಗುಂಟೆ ಜಮೀನು ಬಂದಿದೆ ಆ ಕಾರಣಕ್ಕಾಗಿ ಜಮೀನು ಮಾಲಿಕ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ ಇನ್ನೊಂದೆಡೆ ಜಮೀನು ಮಾಲಿಕ ಮಲ್ಲಯ್ಯ ಮಠಪತಿಯನ್ನ ಕೇಳಿದ್ರೆ ನಾವು ಜಮೀನು ಕೊಟ್ಟಿದ್ದು ನಿಜ ಆದ್ರೆ ಬೇರೆಡೆಗೆ ಜಮೀನು ನೀಡಲಾಗಿದೆ ಸರ್ಕಾರಿ ಶಾಲೆ ಇರುವ ಚೆಕ್ ಬಂದಿ ಹುಡುಕಿ ಶಾಲೆಯನ್ನ ಅಲ್ಲಿ ಕಟ್ಟಿಕೊಳ್ಳಿ. ಈಗ ಈ ಶಾಲೆ ನನ್ನ ಜಾಗವನ್ನ ಅತಿಕ್ರಮಣ ಮಾಡಿದೆ ಎನ್ನುತ್ತಾರೆ.
 
ಇನ್ನು ಜಮೀನು ವಿವಾದ ಬಗೆ ಹರಿಸುವಂತೆ ರಾಯಬಾಗ ತಹಶಿಲ್ದಾರ್ ಗೆ ಇಲ್ಲಿನ ಶಿಕ್ಷಕರು ಮನವಿ ಸಲ್ಲಿಸಿದರೂ ಯಾವುದೆ ಪ್ರಯೋಜನ ಮಾತ್ರ ಆಗಿಲ್ಲ. ಇದುವರೆಗೂ ಬಂದು ಸಮಸ್ಯೆಯನ್ನು ಕೇಳಿಲ್ಲ ಎಂದು ಇಲ್ಲಿನ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಜಮೀನು ವಿವಾದಾಕ್ಕೆ ಮಕ್ಕಳು ಪರದಾಡುವಂತಾಗಿದೆ ಇನ್ನಾದರೂ ತಹಶಿಲ್ದಾರ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com