ಶಿಕಾರಿಪುರ: ಖಾಸಗಿ ಬಸ್ -ಟಾಟಾ ಏಸ್ ಢಿಕ್ಕಿ, ಮೂವರು ಮಹಿಳೆಯರು ಸಾವು
ಖಾಸಗಿ ಬಸ್ಸೊಂದು ಟಾಟಾ ಏಸ್ ಗೆ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ಮೂವರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಶಿಕಾರಿಪುರ ಪಟ್ಟಣ ಹೊರವಲಯದ ಕುಮದ್ವತಿ ಸೇತುವೆ ಸಮೀಪದಲ್ಲಿ ನಡೆದಿದೆ.
Published: 25th February 2020 03:17 PM | Last Updated: 25th February 2020 03:17 PM | A+A A-

ಶಿಕಾರಿಪುರ ರಸ್ತೆ ಅಪಘಾತ
ಶಿಕಾರಿಪುರ: ಖಾಸಗಿ ಬಸ್ಸೊಂದು ಟಾಟಾ ಏಸ್ ಗೆ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ಮೂವರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಶಿಕಾರಿಪುರ ಪಟ್ಟಣ ಹೊರವಲಯದ ಕುಮದ್ವತಿ ಸೇತುವೆ ಸಮೀಪದಲ್ಲಿ ನಡೆದಿದೆ.
ಚಂದ್ರಕಲಾ (40), ಲಕ್ಷ್ಮೀ (40), ರೇಖಾ (45) ಎಂಬುವವರು ಮೃತಪಟ್ಟ ದುರ್ದೈವಿಗಳಾಗಿದ್ದು ಇವರು ಶಿಕಾರಿಪುರ ಪಟ್ಟಣದ ಜಯನಗರ ಬಡಾವಣೆ ನಿವಾಸಿಗಳು ಎಂದು ತಿಳಿದು ಬಂದಿದೆ.
ಮೃತರು ಶಿಕಾರಿಪುರ ಕೊಪ್ಪದ ಕೆರೆಗೆ ಪೂಜೆಗಾಗಿ ಟಾಟಾ ಏಸ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಢಿಕ್ಕಿಯಾಗಿದೆ.
ಘಟನೆ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.