30 ಬಸ್ಕಿ ಹೊಡೆದ್ರೆ ಫ್ರೀ ಟಿಕೆಟ್..!: ಏನಿದು ರೈಲ್ವೇ ಇಲಾಖೆಯ ಹೊಸ ಪ್ಲಾನ್!

ಬಸ್ಕಿ ಹೊಡೆದ್ರೆ ಫ್ರೀ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೇ ವ್ಯವಸ್ಥೆ ಇದೀಗ ರಾಜಧಾನಿ ಬೆಂಗಳೂರಿಗೂ ಕಾಲಿಡುವ ಸಾಧ್ಯತೆ ಇದೆ.
30 ಬಸ್ಕಿ ಹೊಡೆದ್ರೆ ಫ್ರೀ ಟಿಕೆಟ್
30 ಬಸ್ಕಿ ಹೊಡೆದ್ರೆ ಫ್ರೀ ಟಿಕೆಟ್

ಬೆಂಗಳೂರು: ಬಸ್ಕಿ ಹೊಡೆದ್ರೆ ಫ್ರೀ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೇ ವ್ಯವಸ್ಥೆ ಇದೀಗ ರಾಜಧಾನಿ ಬೆಂಗಳೂರಿಗೂ ಕಾಲಿಡುವ ಸಾಧ್ಯತೆ ಇದೆ.

ಹೌದು.. ಇನ್ಮುಂದೆ ರೈಲ್ವೇ ನಿಲ್ದಾಣದಲ್ಲಿ 30 ಬಸ್ಕಿ ಹೊಡೆದರೆ ಫ್ಲಾಟ್​ ಫಾರ್ಮ್​ ಟಿಕೇಟ್​ ಅನ್ನು ಉಚಿತವಾಗಿ ಪಡೆಯಬಹುದು. ಇಂತಹುದೊಂದು ವಿನೂತನ ಯೋಜನೆಯನ್ನು ರೈಲ್ವೇ ಇಲಾಖೆ ಜಾರಿ ಮಾಡಿದ್ದು, ಫಿಟ್ ಇಂಡಿಯಾ ಯೋಜನೆ ಅಡಿಯಲ್ಲಿ ರೈಲ್ವೇ ಇಲಾಖೆ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಅನ್ವಯ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಯಂತ್ರದ ಮುಂದೆ ನಿಂತು ಮೂರು ನಿಮಿಷದಲ್ಲಿ 30 ಬಸ್ಕಿ‌ ಹೊಡಿದರೆ ಪ್ರಯಾಣಿಕರು ಪ್ಲಾಟ್‌ಫಾರಂ ಟಿಕೆಟ್​ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. 

ಈ ನಿಯಮ ಈಗಾಗಲೇ ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಜಾರಿಯಲ್ಲಿದ್ದು, ಉತ್ತರ ಪ್ರದೇಶದ ಲಖನೌ ನಿಲ್ದಾಣದಲ್ಲೂ ಈ ಯಂತ್ರವನ್ನು ಅಳವಡಿಸಲಾಗುತ್ತಿದೆ ಎನ್ನಲಾಗಿದೆ. ಇದೀಗ ಈ ನಿಯಮ ಸದ್ಯದಲ್ಲೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲೂ ಜಾರಿಯಾಗಲಿದೆ ಎಂದು ಬೆಂಗಳೂರು ಡಿವಿಷನಲ್ ರೈಲ್ವೇ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

ಇನ್ನು ಈ ಹಿಂದೆ ಟಿಕೆಟ್​ ಯಂತ್ರದ ಮುಂದೆ ನಿಂತು ಓರ್ವ ವ್ಯಕ್ತಿ ಟಿಕೆಟ್​ಗಾಗಿ ಬಸ್ಕಿ ಹೊಡೆಯುತ್ತಿರುವ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಟ್ವೀಟ್ ಮಾಡಿದ್ದರು. "ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಪ್ರಯೋಗ ಮಾಡುತ್ತಿದ್ದು, ಫಿಟ್‌ ಆಗಿಯೂ ಇರಿ. ಉಳಿತಾಯವನ್ನೂ ಮಾಡಿ ಅಂತಾ ಬರೆದು", ಅಪ್​ಲೋಡ್ ಮಾಡಿದ್ದರು.  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com