ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ: 30 ಕಲಾವಿದರಿಗೆ ಗೌರವ

2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗಳನ್ನು ಬುಧವಾರ ಘೋಷಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಒಬ್ಬೊಬ್ಬ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Published: 26th February 2020 06:28 PM  |   Last Updated: 26th February 2020 06:28 PM   |  A+A-


janapada1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಉಡುಪಿ: 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗಳನ್ನು ಬುಧವಾರ ಘೋಷಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಒಬ್ಬೊಬ್ಬ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇಂದು ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ವಿವರಗಳನ್ನು ಪ್ರಕಟಿಸಿದ್ದು, ಒಟ್ಟು 30 ಕಲಾವಿದರು ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತ ಪಟ್ಟಿ ಹೀಗಿದೆ
ಬೆಂಗಳೂರು ನಗರ-  ಗೌರಮ್ಮ(ಜಾನಪದ ಗಾಯಕಿ), ಬೆಂಗಳೂರು ಗ್ರಾಮಾಂತರ-  ಲಕ್ಷ್ಮಮ್ಮ, (ಭಜನೆ ಪದಗಳು), ರಾಮನಗರ- ಅಂಕನಹಳ್ಳಿ ಶಿವಣ್ಣ(ಪೂಜಾ ಕುಣಿತ), ಕೋಲಾರ-  ಅಂಗಡಿ ವೆಂಕಟೇಶಪ್ಪ(ತತ್ವಪದ), ತುಮಕೂರಿ-ರಂಗಯ್ಯ (ಜಾನಪದ ಗೀತೆ), ದಾವಣಗೆರೆ- ಪಿ ಜಿ ಪರಮೇಶ್ವರಪ್ಪ (ವೀರಗಾಸೆ), ಚಿತ್ರದುರ್ಗ- ತಿಪ್ಪಣ್ಣ  (ಗೊರವರ ಕುಣಿತ), ಚಿಕ್ಕಬಳ್ಳಾಪುರ-  ಮುನಿರೆಡ್ಡಿ (ಜಾನಪದ ಗಾಯನ), ಶಿವಮೊಗ್ಗ -ಜಿಸಿ ಮಂಜಪ್ಪ (ಡೊಳ್ಳುಕುಣಿತ), ಮೈಸೂರು- ಮಾದಶೆಟ್ಟಿ (ಕಂಸಾಳೆ ಕುಣಿತ), ಮಂಡ್ಯ- ಸ್ವಾಮಿಗೌಡ (ಬೀಸುವ ಪದಗಳು), ಚಾಮರಾಜನಗರ  ಗೌರಮ್ಮ (ಸೋಬಾನೆ ಪದ), ಕೊಡಗು -ಜಿಕೆ ರಾಮು (ಕೊಡವರ ಕುಣಿತ), ಹಾಸನ - ಕಪಿನಿ ಗೌಡ ಕೆ (ಕೋಲಾಟ), ಚಿಕ್ಕಮಗಳೂರು- ಡಾಕ್ಟರ್ ಹೆಚ್ ಸಿ ಈಶ್ವರ ನಾಯಕ (ನಾಟಿವೈದ್ಯ), ಉಡುಪಿ- ಸಾಧು ಪಾಣಾರ (ಭೂತ ಕೋಲ), ದಕ್ಷಿಣ ಕನ್ನಡ -ರುಕ್ಮಯ ಗೌಡ (ಸಿದ್ದವೇಷ), ಬೆಳಗಾವಿ -ಸಂಕಮ್ಮ (ಸಂಪ್ರದಾಯದ ಪದ), ಬಾಗಲಕೋಟೆ-ರುಕ್ಮಿಣಿ ಮಲ್ಲಪ್ಪ (ಹರನಾಳ ಮದುವೆ ಹಾಡು), ಧಾರವಾಡ-ಮಲ್ಲಯ್ಯ ರಾಚಯ್ಯ (ತೋಟಗಂಟಿ ಜಾನಪದ ಸಂಗೀತ), ಹಾವೇರಿ-ಹನುಮಂತಪ್ಪ ಧಾರವಾಡ (ಭಜನೆ ಕೋಲಾಟ), ಗದಗ-ನಾಗರಾಜ ನೀ ಜಕ್ಕಮ್ಮ (ನವರ್ ಗೀಗಿ ಪದ), ವಿಜಯಪುರ- ನಿಮ್ಮವ್ವ ಕೆಂಚಪ್ಪ ಗುಬ್ಬಿ (ಸೋಬಾನೆ ಪದ), ಉತ್ತರಕನ್ನಡದ ಹುಸೇನಬಿ ಬುಡನ್ ಸಾಬ್ ಸಿದ್ದಿ ಸಿದ್ದಿ ಡಮಾಮಿ ನೃತ್ಯ, ಕಲಬುರ್ಗಿ-ಗಂಗಾಧರಯ್ಯ ಅಗ್ಗಿಮಠ (ಪುರುವಂತಿಕೆ), ಬೀದರ್ - ತುಳಸಿ ರಾಮ ಭೀಮರಾವ್ ಸುತಾರ್ (ಆಲದ ಎಲೆಯಿಂದ ಸಂಗೀತ), ಕೊಪ್ಪಳ- ಶಾಂತವ್ವ ಲಕ್ಷ್ಮಪ್ಪ ಲಮಾಣಿ (ಲಮಾಣಿ ನೃತ್ಯ), ರಾಯಚೂರು- ಶ್ರೀ ಸೂಗಪ್ಪ ನಾಗಪ್ಪ (ತತ್ವಪದ), ಬಳ್ಳಾರಿ -ವೇಷಗಾರ ಮೋತಿ ರಾಮಣ್ಣ (ಹಗಲುವೇಷ), ಯಾದಗಿರಿ - ಶಿವಮೂರ್ತಿ ತನಿಖೆದಾರ (ಗೀಗಿ ಪದ) ಅವರಿಗೆ ಸಂದಿದೆ. 

ಈ ಬಾರಿಯ ಜನಪದ ತಜ್ಞ ಪ್ರಶಸ್ತಿಗಳ ವಿವರ ಹೀಗಿದೆ
ರಾಮನಗರದ ಡಾ. ಚಕ್ಕೆರೆ ಶಿವಶಂಕರ್ (ಡಾಕ್ಟರ್ ಜಿ ಶಂ ಪರಮಶಿವಯ್ಯ ಪ್ರಶಸ್ತಿ), ಕಲಬುರ್ಗಿಯ ಬಸವರಾಜ ಪೊಲೀಸ್ ಪಾಟೀಲ್( ಡಾಕ್ಟರ್ ಬಿ ಎಸ್ ಗದ್ದಗಿಮಠ ತಜ್ಞ ಪ್ರಶಸ್ತಿ)

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp