ಸೋಬಾನೆ ಕಲಾವಿದೆ ಗೌರಮ್ಮಗೆ ಜಾನಪದ ಅಕಾಡೆಮಿ ಪ್ರಶಸ್ತಿ

2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗಳನ್ನು ಬುಧವಾರ ಘೋಷಿಸಲಾಗಿದ್ದು, ಜಿಲ್ಲೆಯಿಂದ ಈ ಬಾರಿ ಜಾಲಹಳ್ಳಿಹುಂಡಿಯ ಗೌರಮ್ಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ‌.
ಗೌರಮ್ಮ
ಗೌರಮ್ಮ

ಚಾಮರಾಜನಗರ: 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗಳನ್ನು ಬುಧವಾರ ಘೋಷಿಸಲಾಗಿದ್ದು, ಜಿಲ್ಲೆಯಿಂದ ಈ ಬಾರಿ ಜಾಲಹಳ್ಳಿಹುಂಡಿಯ ಗೌರಮ್ಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ‌.

ಪ್ರಶಸ್ತಿ ಫಲಕ ಹಾಗೂ 25 ಸಾವಿರ ರೂ. ನಗದು ಒಳಗೊಂಡಿರಲಿದ್ದು, ಮಾರ್ಚ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆ ಇದೆ. 

ಗೌರಮ್ಮಗೆ ತಮ್ಮ ಹಿರಿಯರಿಂದ ಈ ಕಲೆ ಸಿದ್ದಿಸಿದ್ದು, ಇಂದಿಗೂ ಸೋಬಾನೆ ಪದದಲ್ಲಿ ಕಂಚಿನ ಕಂಠ ಹೊಂದಿದ್ದಾರೆ. 

ಜಾನಪದ ಸಂಸ್ಕೃತಿಯಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದ್ದು, ಮದುವೆ ಸಮಾರಂಭ, ಶುಭ ಕಾರ್ಯಗಳಲ್ಲಿ ಗಂಡ- ಹೆಂಡಿರ ಸಂಬಂಧ, ತಂದೆ- ತಾಯಿ, ಅತ್ತೆ- ಮಾವಗೆ ಕೊಡಬೇಕಾದ ಗೌರವ ಕುರಿತು ತಮ್ಮಿಚ್ಛೆಯ ದೇವರ ಮೇಲೆ ಪದ ಕಟ್ಟಿ ಹಾಡುವ ಕಲೆ ಇದಾಗಿದೆ. ಇದೇ ರೀತಿ ಜಿಲ್ಲೆಯಲ್ಲಿ ನೂರಾರು ಮಂದಿ ಸೋಬಾನೆ ಕಲಾವಿದರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com