ಭಾವಿ ಗಂಡನ ದುಬಾರಿ ಗಿಫ್ಟ್ ಪಡೆಯಲು ಹೋಗಿ 71 ಲಕ್ಷ ರೂ ಕಳೆದು ಕೊಂಡ ಅವಿವಾಹಿತ ಮಹಿಳೆ!

ಮದುವೆ ಹೆಸರಿನಲ್ಲಿ ಭಾವಿ ಗಂಡನೇ ಅವಿವಾಹಿತ ಮಹಿಳೆಗೆ ಬರೊಬ್ಬರಿ 71 ಲಕ್ಷ ರೂ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮದುವೆ ಹೆಸರಿನಲ್ಲಿ ಭಾವಿ ಗಂಡನೇ ಅವಿವಾಹಿತ ಮಹಿಳೆಗೆ ಬರೊಬ್ಬರಿ 71 ಲಕ್ಷ ರೂ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು.. ಸುಮಾರು 42 ವರ್ಷದ ಅವಿವಾಹಿತ ಮಹಿಳೆಯೊಬ್ಬರು ಇದೀಗ ತಮ್ಮ ಭಾವಿ ಗಂಡನಿಂದಲೇ ಬರೊಬ್ಬರಿ 71 ಲಕ್ಷ ರೂಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥ ಮಹಿಳೆ ಧಾರವಾಡ ಮೂಲದಲವರು ಎಂದು ತಿಳಿದುಬಂದಿದೆ.
ಮದುವೆ ಗಂಡಿನ ಶೋಧದಲ್ಲಿದ್ದ ಅವಿವಾಹಿತ ಮಹಿಳೆಗೆ ಆಕೆಯ ಸಹೋದರಿ ಆನ್ ಲೈನ್ ನಲ್ಲಿ ಆ್ಯಂಡ್ರ್ಯೂ ಕೊಹೆನ್ ಎಂಬಾತನ ಪ್ರೊಫೈಲ್ ನೋಡಿ ಇಷ್ಟ ಪಟ್ಟಿದ್ದಾರೆ. ಈ ವೇಳೆ ಆ್ಯಂಡ್ರ್ಯೂ ಕೊಹೆನ್ ಮತ್ತು ಸಂತ್ರಸ್ಥ ಮಹಿಳೆ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡಿದ್ದಾರೆ. 

ಇಬ್ಬರೂ ಪರಸ್ಪರ ಮದುವೆಗೆ ಓಕೆ ಎಂದ ಮೇಲೆ ಮಹಿಳೆಗೆ ಕರೆ ಮಾಡಿದ್ದ  ಆ್ಯಂಡ್ರ್ಯೂ ಕೊಹೆನ್ ಹೊಸ ವರ್ಷದ ನಿಮಿತ್ತ ದುಬಾರಿ ಉಡುಗೊರೆ ಕಳುಹಿಸಿದ್ದೇನೆ ಅದನ್ನು ತೆಗೆದಿಕೊ ಎಂದು ಹೇಳಿದ್ದ. ಅದರಂತೆ ಜನವರಿ 6ರಿಂದ ಮಹಿಳೆಗೆ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿಕೊಂಡ ಅನಾಮಿಕರು ಕರೆ ಮಾಡಿ ನಿಮಗೆ ಪಾರ್ಸೆಲ್ ಒಂದು ಬಂದಿದ್ದು, ಅದರ ಸುಂಕ ಕಟ್ಟಿ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಆನ್ ಲೈನ್ ಮೂಲಕ ಅವರು ಹೇಳಿದ ಹಾಗೆಲ್ಲಾ ಹಣ ರವಾನೆ ಮಾಡಿದ್ದಾರೆ. ಆಕೆಯೇ ದೂರಿನಲ್ಲಿ ಹೇಳಿಕೊಂಡಿರುವಂತೆ ಜನವರಿ 6 ರಿಂದ 27ರವರೆಗೂ ಅವರು ಆನ್ ಲೈನ್ ಮೂಲಕ ಅವರು ಸೂಚಿಸಿದ್ದ ವಿವಿಧ ಖಾತೆಗಳಿಗೆ ಸುಮಾರು 71,57,793 ರೂ ಹಣ ರವಾನೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟೆಲ್ಲಾ ಹಣ ಕಟ್ಟಿದ ಬಳಿಕವೂ ಮತ್ತೆ ಮಹಿಳೆಗೆ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿಕೊಂಡ ಅನಾಮಿಕರು ಕರೆ ಮಾಡಿ ಮತ್ತಷ್ಟು ಹಣ ಕಟ್ಟಿ ಪಾರ್ಸೆಲ್ ಪಡೆಯುವಂತೆ ಹೇಳುತ್ತಿದ್ದರು. ಇದರಿಂದ ಅನುಮಾನಗೊಂಡ ಮಹಿಳೆ ಸೈಬರ್ ಕ್ರೈಮ್ ಅಧಿಕಾರಿಗಳಿಗೆ ದೂರು ನೀಡಿದ್ದು, ತನ್ನ ಭಾವಿ ಗಂಡ ಎಂದು ಹೇಳಿಕೊಂಡ ಬ್ರಿಟನ್ ಮೂಲಗ ಆ್ಯಂಡ್ರ್ಯೂ ಕೊಹೆನ್ ಮತ್ತು ಆತನ ತಂಡವೇ ಕಸ್ಟಮ್ಸ್ ಅಧಿಕಾರಿಗಳು ಎಂದು ಸುಳ್ಳು ಹೇಳಿ ನನ್ನಿಂದ ಹಣ ಪಡೆಯುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಮ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಮಹಿಳೆಯ ತವರೂರಾದ ಧಾರವಾಡಕ್ಕೂ ಒಂದು ತಂಡವನ್ನು ರವಾನೆ ಮಾಡಲಾಗಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com