ಕನ್ನಡ ಚಿತ್ರರಂಗದ ಸುವರ್ಣಯುಗ ಮರಳಲಿ: ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬಿಎಸ್'ವೈ

ಫಿಲಂ ರೋಲುಗಳಿಂದ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೊಂಡ ನಂತರ ಕನ್ನಡವೂ ಸೇರಿದಂತೆ ಭಾರತೀಯ ಭಾಷಾ ಚಿತ್ರಗಳಲ್ಲಿ ನಿರ್ಮಾಣ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಎಪ್ಪತರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗವೆಂದು ಕರೆಯಲಾಗುತ್ತದೆ ಅಂತಹ ದಿನಗಳು ಮತ್ತೆ ಬಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಶಯ ವ್ಯಕ್ತಪಡಿಸಿದ್ದಾರೆ. 

Published: 27th February 2020 08:09 AM  |   Last Updated: 27th February 2020 01:53 PM   |  A+A-


yeddyurappa

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಮ

Posted By : Manjula VN
Source : The New Indian Express

ಬೆಂಗಳೂರು: ಫಿಲಂ ರೋಲುಗಳಿಂದ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೊಂಡ ನಂತರ ಕನ್ನಡವೂ ಸೇರಿದಂತೆ ಭಾರತೀಯ ಭಾಷಾ ಚಿತ್ರಗಳಲ್ಲಿ ನಿರ್ಮಾಣ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಎಪ್ಪತರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗವೆಂದು ಕರೆಯಲಾಗುತ್ತದೆ ಅಂತಹ ದಿನಗಳು ಮತ್ತೆ ಬಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಶಯ ವ್ಯಕ್ತಪಡಿಸಿದ್ದಾರೆ. 

ಬುಧವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿರುವ 12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿ ಯಡಿಯೂರಪ್ಪ ಅವರು ಮಾತನಾಡಿದರು. 

ಫಿಲಂ ರೋಲುಗಳಿಂದ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೊಂಡ ನಂತರ ಕನ್ನಡವೂ ಸೇರಿದಂತೆ ಭಾರತೀಯ ಭಾಷಆ ಚಿತ್ರಗಳಲ್ಲಿ ನಿರ್ಮಾಣ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2018ರಲ್ಲಿ ಕನ್ನಡ ಚಿತ್ರರಂಗದಲ್ಲಿ 370 ಚಿತ್ರಗಳ ನಿರ್ಮಾಣಗೊಂಡದ್ದವು. ಕಳೆದ ವರ್ಷ ಚಿತ್ರಗಳ ನಿರ್ಮಾಣದ ಪ್ರಮಾಣ 450ಕ್ಕೆ ಹೆಚ್ಚಳವಾಗಿತ್ತು. ಕನ್ನಡ ಚಿತ್ರಗಳ ನಿರ್ಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಗುಣಮಟ್ಟದಲ್ಲಿ ಸುಧಾರಣೆಯಾಗಬೇಕಿದೆ ಎಂದು ಹೇಳಿದರು. 

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಶಿವಮೊಗ್ಗ, ಹಂಪಿ, ಐಹೊಳೆ ಸೇರಿದಂತೆ ಐದು ಕಡೆಳಲ್ಲಿ ಚಲನಚಿತ್ರ ಮ್ಯೂಸಿಯಂ ಸ್ಥಾಪಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು, ಕೃತಿಚೌರ್ಯ ನಡೆಯದಂತೆ ಸ್ಟೋರಿ ಬೋರ್ಡ್ ಮಾಡುವ ಯೋಜನೆ ಇದೆ. ಜಿಲ್ಲಾ ಕೇಂದ್ರಗಳಲ್ಲಿ ಚಲನಚಿತ್ರ ಲೈಬ್ರರಿ ತೆರೆಯುವುದು ಚಲನಚಿತ್ರ ಅಕಾಡೆಮಿ ಜಾಗದಲ್ಲಿ ಸಿನಿಮಾ ಸಂಕೀರ್ಣ ಮಾಡುವ ಮೂಲಕ ಸ್ಟುಡಿಯೋ ಅಭಿವೃದ್ಧಿಪಡಿಸುವ ಯೋಜನೆಗಳು ಇವೆ. ಈಗಾಗಲೇ ರಾಜ್ಯ ಸರ್ಕಾರ ವಿವಿಧ ಯೋಜನಗಳಿಗೆ ರೂ.5 ಕೋಟಿ ನೀಡಿದೆ ಎಂದು ಹೇಳಿದ ಅವರು, ಸಿನಿಮಾಮ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು. 

ನಂತರ ಮಾತನಾಡಿದ ನಟಿ ಜಯಪ್ರದಾ ಅವರು, ಕನ್ನಡ ನನಗೆ ಇಷ್ಟ ಎಂದು ಮಾತು ಆರಂಭಿಸಿದರು. ಈ ವೇಳೆ ಸಭಾಂಗಣದಲ್ಲಿ ಶಿಳ್ಳೆ, ಚಪ್ಪಾಳೆ ಪ್ರತಿಧ್ವನಿಸಿದವು.ನನಗೆ ಕನ್ನಡ ಭಾಷೆ, ಕನ್ನಡ ಜನ, ಕನ್ನಡ ಚಲನಚಿತ್ರವೆಂದರೆ ತುಂಬಾ ಪ್ರೀತಿ. ಏಕೆಂದರೆ ಸನಾದಿ ಅಪ್ಪಣ್ಣ ನನ್ನ ಮೊದಲ ಕನ್ನಡ ಚಿತ್ರ. ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದರು. ವಿಷ್ಣುವರ್ಧನ್, ಅಂಬರೀಶ್ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ. ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆಂದು ತಿಳಿಸಿದರು. 

ನಿರ್ಮಾಪಕ ಬೋನಿ ಕಪೂರ್ ಮಾತನಾಡಿ, 1980ರಲ್ಲಿ ನಿರ್ಮಿಸಿದ ಹಮ್ ಪಾಂಚ್ ತಮ್ಮ ಚಿತ್ರರಂಗದ ಮೊದಲ ಸಿನಿಮಾವಾಗಿದೆ. ಬೆಂಗಳೂರು, ಮೈಸೂರು, ಮೇಲುಕೋಟೆಗಳಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಕರ್ನಾಟಕದಲ್ಲಿ ಕಳೆದ ದಿನಗಳು ಅತ್ಯಂತ ಸ್ಮರಣೀಯ ಎಂದರು. 

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp