ಹೊಸಪೇಟೆ: ಅವೈಜ್ಞಾನಿಕ ರಸ್ತೆ ನಿರ್ಮಾಣ, ರಸ್ತೆ ಬಂದ್ ಮಾಡಿ ರೈತರಿಂದ ರಸ್ತೆ ತಡೆ

ಅವೈಜ್ಞಾನಿಕ ರಸ್ತೆ ನಿರ್ಮಾಣ ವಿರೋಧಿಸಿ ರೈತರು ರಸ್ತೆ ಬಂದ್ ಮಾಡಿ ರಸ್ತೆ ತಡೆ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಪ್ರತಿಭಟನಾ ನಿರತ ಗ್ರಾಮಸ್ಥರು
ಪ್ರತಿಭಟನಾ ನಿರತ ಗ್ರಾಮಸ್ಥರು

ಹೊಸಪೇಟೆ: ಅವೈಜ್ಞಾನಿಕ ರಸ್ತೆ ನಿರ್ಮಾಣ ವಿರೋಧಿಸಿ ರೈತರು ರಸ್ತೆ ಬಂದ್ ಮಾಡಿ ರಸ್ತೆ ತಡೆ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಗುಂಡಾ ಮತ್ತು ಮರಿಯಮ್ಮನಹಳ್ಳಿ ಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆ ಬಂದ್ ಮಾಡಿ ರೈತರಿಂದ ರಸ್ತೆ ತಡೆ ನಡೆಸಿದ್ದಾರೆ. ಹೀಗಾಗಿ  ರಾಷ್ಟ್ರೀಯ ಹೆದ್ದಾರಿ 50ರ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆಯಲ್ಲಿ ಕೆಲಕಾಲ ರಸ್ತೆ ಸಂಚಾರಕ್ಕೆ ತೊಡಕಾಗಿತ್ತು.

ನೂರಾರು ವರ್ಷಗಳಿಂದ ಸಂಚರಿಸುತಿದ್ದ ರಸ್ತೆಯನ್ನ ಬಂದ್ ಮಾಡಿ ಹೆದ್ದಾರಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಸ್ಥಳೀಯ ರೈತರು ತೀವ್ರ ವಿರೋಧಿಸಿದ್ದಾರೆ. ಮರಿಯಮ್ಮನಹಳ್ಳಿ, ಗುಂಡಾ, ದೇವಲಾಪುರ, ಮರಿಯಮ್ಮನಹಳ್ಳಿ ತಾಂಡ, ಐಯ್ಯನಹಳ್ಳಿ, ಗೊಲ್ಲರಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರೋಡ್ ಇದಾಗಿದ್ದು, ಇದನ್ನೇ ಬಂದ್ ಮಾಡಿರುವ ಪ್ರಾಧಿಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೆದ್ದಾರಿ ನಿರ್ಮಾಣ ಒಂದೇ ಕಾರಣ ಇಟ್ಟುಕೊಂಡು ರೈಲ್ವೇ ಹಳಿಯ ಮೇಲೆ ಇದ್ದ ರಸ್ತೆ ಬಂದ್ ಮಾಡುವುದಾಗಿ ರೈಲ್ವೇ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಎರಡು ಇಲಾಖೆಗಳ ಬೇಜವಾಬ್ದಾರಿಗೆ ಸ್ಥಳೀಯ ಹಳ್ಳಿಗಳ ರೈತರು ಬೆಚ್ಚಿಬಿದ್ದಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರ ಮತ್ತು ಹೊಸಪೇಟೆ ತಹಸಿಲ್ದಾರ್ ಬರುವಂತೆ ಪಟ್ಟು ಹಿಡಿದಿದ್ದಾರೆ. 

ಇನ್ನು ಕಳೆದ 10ನೇ ತಾರೀಕಿನಂದು ವಿ.ಐ.ಪಿ. ಮಗನ ಕಾರು ಅಪಘಾತ ಪ್ರಕರಣದಲ್ಲಿ ಸ್ಥಳೀಯ ನಿವಾಸಿ ರವಿನಾಯ್ಕ್ ಸಾವನ್ನಪ್ಪಿದ್ದರು. ಇದೀಗ ರವಿನಾಯ್ಕ್ ಸಾವನ್ನಪ್ಪಿದ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com