ಶಿವಮೊಗ್ಗ-ಚೆನ್ನೈ ರೈಲುಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಿಂದ ಚೆನ್ನೈಗ ನೇರ ರೈಲು ಸೇವೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಶಿವಮೊಗ್ಗ-ಚೆನ್ನೈ ರೈಲು ಸೇವೆ ಪ್ರಾರಂಭಿಸಲು ರೈಲ್ವೆ ಇಲಾಖೆ ಮುಂದಾಗಿರುವುದು ಗಮನಾರ್ಹ. ವಾರದಲ್ಲಿ ಎರಡು ದಿನ ಈ ವಿಶೇಷ ರೈಲು ಎರಡೂ ನಗರಗಳ ನಡುವೆ ಸಂಚರಿಸಲಿದೆ.
ಶಿವಮೊಗ್ಗ-ಚೆನ್ನೈ ರೈಲುಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ
ಶಿವಮೊಗ್ಗ-ಚೆನ್ನೈ ರೈಲುಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರು: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಿಂದ ಚೆನ್ನೈಗ ನೇರ ರೈಲು ಸೇವೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಶಿವಮೊಗ್ಗ-ಚೆನ್ನೈ ರೈಲು ಸೇವೆ ಪ್ರಾರಂಭಿಸಲು ರೈಲ್ವೆ ಇಲಾಖೆ ಮುಂದಾಗಿರುವುದು ಗಮನಾರ್ಹ. ವಾರದಲ್ಲಿ ಎರಡು ದಿನ ಈ ವಿಶೇಷ ರೈಲು ಎರಡೂ ನಗರಗಳ ನಡುವೆ ಸಂಚರಿಸಲಿದೆ.

ಬೆಂಗಳೂರುನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ನೈಋತ್ಯ ರೈಲ್ವೆ ವಿಭಾಗದ ಮುಖ್ಯಸ್ಥರ ಕಚೇರಿಯಲ್ಲಿ ಕೇಂದ್ರ ರಲ್ವೆ ಖಾತೆ ಸಚಿವ ಸುರೇಶ್ ಅಂಗಡಿ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸಮ್ಮುಖದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಯಡಿಯೂರಪ್ಪ ಹೊಸ ರೈಲಿಗೆ ಚಾಲನೆ ನೀಡಿದ್ದಾರೆ.

"ರಾಜ್ಯದ ಎಲ್ಲಾ ರೈಲು ಯೋಜನೆ ಪೂರ್ಣಗೊಳಿಸಲ್;ಉ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಒದಗಿಸಿದೆ. ಮುಂಬರುವ ಬಜೆಟ್ಟಿನಲ್ಲಿಯೂ ರೈಲ್ವೆ ಯೋಜನೆಗೆ ಹಣ ಮೀಸಲಿರಿಸಲಾಗುತ್ತದೆ" ಯಡಿಯೂರಪ್ಪ ಹೇಳಿದ್ದಾರೆ.

"ಶಿವಮೊಗ್ಗದಿಂದ ಚೆನ್ನೈಗೆ ನೇರ ರೈಲು ಸೇವೆ ಪ್ರಾರಂಭವಾಗಿರುವುದು ಸಂತಸ ತಂದಿದೆ, ಶಿವಮೊಗ್ಗದಲ್ಲಿ ಕೋಚಿಂಗ್ ಕೇಂದ್ರ ಪ್ರಾರಂಬಕ್ಕೆ ಕೇಂದ್ರ ಸರ್ಕಾರ ಅನುಮೋದಿಸಿದೆ" ಎಂದು ಅವರು ಸಂತಸದಿಂದ ಹೇಳಿದ್ದಾರೆ.

ರೈಲು ಮಾರ್ಗ, ವೇಳಾಪಟ್ಟಿ

28.02.2020ರಿಂದ ಶಿವಮೊಗ್ಗ-ಚೆನ್ನೈ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದೆ. ಸೋಮವಾರ ಹಾಗೂ ಶುಕ್ರವಾರ ಶಿವಮೊಗ್ಗದಿಂದ ರಾತ್ರಿ 11.55ಕ್ಕೆ ಹೊರಡುವ ರೈಲು ಮಂಗಳವಾರ ಹಾಗೂ ಶನಿವಾರಗಳ್ಂದು ಬೆಳಗ್ಗೆ 11.45ಕ್ಕೆ ಚೆನ್ನೈ ತಲುಪಲಿದೆ.. ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಮಂಗಳವಾರ ಹಾಗೂ ಶನಿವಾರಗಳ್ಂದು ದ್ಯಾಹ್ನ 3ಕ್ಕೆ ಹೊರಡುವ ರೈಲು ಬುಧವಾರ ಹಾಗೂ ಭಾನುವಾರ ಬೆಳಿಗ್ಗೆ 3.55ಕ್ಕೆ ಶಿವಮೊಗ್ಗಕ್ಕೆ ಬರಲಿದೆ.

ಈ ರೈಲು ಭದ್ರಾವತಿ, ತರಿಕೆರೆ, ಬೀರೂರು, ಕಡೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಬಾಣಸವಾಡಿ, ಕೃಷ್ಣಾರಾಜಪುರ, ಬಂಗಾರಪೇಟೆ ಜೋಲಾರಪೇಟೆ, ಕಾಟ್ಪಾಡಿ, ಅರಕೋಣಂ ಮತ್ತು ಪೆರಂಬೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com