ವೇದ ವಿದ್ವಾಂಸ, 124 ವಸಂತ ಕಂಡ ಪಂಡಿತ ಸುಧಾಕರ ಚತುರ್ವೇದಿ ಇನ್ನಿಲ್ಲ

ಚತುರ್ವೇದ ವಿದ್ವಾಂಸ, ಸ್ವಾತಂತ್ರ ಹೋರಾಟಗಾರ, ಶತಾಯುಷಿಯಾಗಿದ್ದ ಸುಧಾಕರ ಚತುರ್ವೇದಿ ನಿಧನರಾಗಿದ್ದಾರೆ. ಅವರಿಗೆ 124 ವರ್ಷ ವಯಸ್ಸಾಗಿತ್ತು. 
 

Published: 27th February 2020 01:25 PM  |   Last Updated: 27th February 2020 01:51 PM   |  A+A-


ಸುಧಾಕರ್ ಚತುರ್ವೇದಿ

Posted By : Raghavendra Adiga
Source : Online Desk

ಚತುರ್ವೇದ ವಿದ್ವಾಂಸ, ಸ್ವಾತಂತ್ರ ಹೋರಾಟಗಾರ, ಶತಾಯುಷಿಯಾಗಿದ್ದ ಸುಧಾಕರ ಚತುರ್ವೇದಿ ನಿಧನರಾಗಿದ್ದಾರೆ. ಅವರಿಗೆ 124 ವರ್ಷ ವಯಸ್ಸಾಗಿತ್ತು. 

ಅಪ್ಪಟ ಕನ್ನಡಿಗರಾಗಿದ್ದು ಹೆಚ್ಚಿನ ಕನ್ನಡಿಗರ ಫಾಲಿಗೆ ಅಪರಿಚಿತರಾಗಿಯೇ ಉಳಿದಿದ್ದ ಸದಾ ಹಸನ್ಮುಖಿ, ಸಹೃದಯಿ, ಕರ್ಮಯೋಗಿಗಳಾದ ಪಂಡಿತ ಸುಧಾಕರ ಚತುರ್ವೇದಿ ಗುರುವಾರ ಮುಂಜಾನೆ ನಿಧನರಾಗಿದ್ದಾರೆ.

ಜಯನಗರ ಕೃಷ್ಣಸೇವಾಶ್ರಮದ ಎದುರಿನ ನಿವಾಸದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಮೃತದೇಹದ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಸಂಜೆ 4ಕ್ಕೆ ಚಾಮರಾಜಪೇಟೆಯ ಸಿತಾಗಾರದಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಗಳು ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಲೀದೆ. 
 

1897ನೆಯಪ್ರಿಲ್ 20ರ ರಾಮನವಮಿಯಂದು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗ್ರಾಮದ ದಂಪತಿಗಳಾದ ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀ ಶ್ರೀಕೃಷ್ಣರಾಯರವರ ಮಗನಾಗಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಸುಧಾಕರ ಚತುರ್ವೇದಿ ಸಮಾಜದ ಅನಿಷ್ಟ ಕಟ್ಟುಪಾಡುಗಳ ವಿರುದ್ಧ ಹೋರಾಡುತ್ತ ಬೆಳೆದಿದ್ದರು. 

ಬಾಲ್ಯದಲ್ಲಿಯೇ ಅತೀ ಕ್ರಿಯಾಶೀಲ, ಚಟುವಟಿಕಗಳ ಗಣಿಯಾಗಿ ಪ್ರತಿಭಾವಂತ ಎಂದು ಕರೆಸಿಕೊಂಡಿದ್ದ ಚತುರ್ವೇದಿಯವರ ಆರೋಗ್ಯ ಅಷ್ತಾಗಿ ಉತ್ತಮವಾಗಿರಲಿಲ್ಲ. ಆದರೆ  ಎಂಟನೇ ವರ್ಷದಲ್ಲೇ ಹಿರಿಯ ಸಹೋದರಿ ಪದ್ಮಕ್ಕನಿಂದ  ಕನ್ನಡ ಸಾಹಿತ್ಯ, ಸಂಸ್ಕೃತ ಮತ್ತು ಭಾರತ ದರ್ಶನ, ವೇದ ಅಧ್ಯಯನಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಆ ನಂತರ ಹರಿದ್ವಾರದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು.

ಸ್ವಾತಂತ್ರ ಹೋರಾಟದಲ್ಲಿ

ವೇದ ಪಂಡಿತರಷ್ಟೇ ಅಲ್ಲದೆ ಸ್ವಾತಂತ್ರ ಹೋರಾಟಗಾರನಾಗಿ ಸಹ ಚತುರ್ವೇದಿ ಗುರುತಿಸಿಕೊಂಡಿದ್ದರು. ದಲಿತೋದ್ದಾರ, ಜಾತಿ,ನಿರ್ಮೂಲನೆ, ಹಿಂದಿ ಪ್ರಚಾರ ಸೇರಿ ಅನೇಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಸ್ವಾಮಿ ಶ್ರದ್ಧಾನಂದರ ಶಿಷ್ಯರಾಗಿದ್ದ ಸುಧಾಕರ ಚತುರ್ವೇದಿ ಜಲಿಯನ್ ವಾಲಾಬಾಗ್ (1919) ಘಟನೆಯ ಬಳಿಕ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ತಮ್ಮ ಗುರುಗಳೊಡನೆ ಭಾಗಿಗಳಾದರು. 

 1915ರಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದ ಚತುರ್ವೇದಿ ನಂತರದಲ್ಲಿ ಮಹಾತ್ಮಗಾಂಧಿಯವರೊಡನೆ. ಮಹಾತ್ಮರ ಪೋಸ್ಟ್ ಮ್ಯಾನ್ ಎಂದೇ ಗುರುತಿಸಿಕೊಂಡರು! ಗಾಂಧೀಜಿ ಪಂಡಿತ್ ಚತುರ್ವೇದಿಯವರನ್ನು "ಕರ್ನಾಟಕಿ" ಎಂದು ಪ್ರೀತಿಯಿಂದ ಸಂಬೋಧಿಸುತ್ತಿದ್ದರು.  ಗಾಂಧೀಜಿ ಬರೆಯುತ್ತಿದ್ದ ಅನೇಕ ಪತ್ರಗಳನ್ನು ಚತುರ್ವೇದಿ ಅಂದಿನ ವೈಸರಾಯ್ ಮತ್ತು ಗವರ್ನರ್ ಜನರಲ್‍ ಗಳಿಗೆ ತಲುಪಿಸುವ ಕಾರ್ಯ ಮಾಡಿದ್ದರು. 

ಹರಿಜನ ಬಾಲಕನನ್ನು ದತ್ತು ಸ್ವೀಕರಿಸಿದ್ದ ಚತುರ್ವೇದಿ!

ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ ಚತುರ್ವೇದಿ ತಾವು ಹರಿಜನ ಸಮುದಾಯದ ಬಾಲಕನನ್ನು ದತ್ತು ಸ್ವೀಕಾರ ಮಾಡಿದ್ದರು. (ದತ್ತು ಮಗ ಆರ್ಯಮಿತ್ರ) ವಿವಾಹವಾಗದೆ ಬ್ರಹ್ಮಚರ್ಯ ಪಾಲಿಸುತ್ತಿದ್ದರೂ ಸಹ ಆದರ್ಶಮಯ ಮಾರ್ಗ ತೋರಿದ ಕೀರ್ತಿ ಇವರದಾಗಿದೆ.  ಗಾಂದೀ ಜತೆಗೆ ಸಬರಮತಿ ಆಶ್ರಮದಲ್ಲಿದ್ದ ಚತುರ್ವೇದಿಗಳನ್ನು ಖಿಲಾಫತ್ ಚಳವಳೀ ಸಮಯದಲ್ಲಿ ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಆ ವೇಳೆ ಅವರು ಪುಣೆಯ ಯರವಾಡ ಕಾರಾಗೃಹದಲ್ಲಿದ್ದರು.

ಮುಂದೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಚತುರ್ವೇದಿ ಹರಿಜನೋದ್ಧಾರ ಕಾರ್ಯದಲ್ಲಿ ತೊಡಗಿಕೊಂಡರು. ಬಳಿಕ ಗಾಂದ್ಃಈಜಿ ಜತೆ ಕ್ವಿಟ್ ಇಂಡಿಯಾ ಸೇರಿ ಣಾನಾ ಹೋರಾಟದಲ್ಲಿ ದೇಶವನ್ನು ಸುತ್ತಿದರು. ಈ ನಡುವೆ 30ಕ್ಕಿಂತ ಹೆಚ್ಚು ಬಾರಿ ಸೆರೆಮನೆ ವಾಸವನ್ನು ಅನುಭವಿಸಿದ ಚತುರ್ವೇದಿ ಸ್ವಾತಂತ್ರಾನಂತರ ಬೆಂಗಳೂರಿನಜಯನಗರದ   ತಮ್ಮ ನಿವಾಸದಲ್ಲಿ ಮೊಮ್ಮಕ್ಕಳೊಡನೆ ನೆಲೆಸಿದ್ದರು.

ದತ್ತು ಪುತ್ರನಿಗೆ ಐ.ಎ.ಎಸ್ ಓದಿಸಿದ್ದಲ್ಲದೆ ಎಲ್ಲ ಮೊಮ್ಮಕ್ಕಳಿಗೂ ವೇದ ಅಧ್ಯಯನ, ಕನ್ನಡ, ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳ ಮೇಲೆ ಪ್ರಭುತ್ವ ಮೂಡುವುದಕ್ಕೆ ಕಾರಣರಾಗಿದ್ದರು. 

ಕನ್ನಡ, ಇಂಗ್ಲೀಷ್, ಹಿಂದಿ ಸೇರಿ ಅನೇಕ ಭಾಷೆಗಳಲ್ಲಿ ಇವರು ರಚಿಸಿದ ಐವತ್ತಕ್ಕೆ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ. ಅಲ್ಲದೆ ಇವರು ನಾಲ್ಕು ವೇದಗಳ ಬೃಹತ್ ಸಂಪುಟವನ್ನೂ ಸಹ ಹೊರತಂದಿದ್ದಾರೆ.

ಭಾರತೀಯ ವಿದ್ಯಾಭವನ ಸಂಸ್ಥೆಯ ವತಿಯಿಂದ ಇವರಿಗೆ ರಾಷ್ಟ್ರೀಯ ಪುರಸ್ಕಾರ,  2010ರಲ್ಲಿ ಕರ್ನಾಟಕ ಸರ್ಕಾರದ ಪ್ರಶಸ್ತಿ, ಸೇರಿ ಅನೇಕ ಗೌರವಗಳೂ ಇವರಿಗೆ ಸಂದಿದೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp