2024ರ ವೇಳೆಗೆ 35 ಕೋಟಿ ರೂ.ರಕ್ಷಣಾ ರಫ್ತುಗುರಿ ತಲುಪಲು ಎಚ್‌ಎಎಲ್ ನೆರವಾಗಲಿದೆ: ರಾಜನಾಥ್ ಸಿಂಗ್

ಭಾರತದ ರಕ್ಷಣಾ ರಫ್ತು ಹೆಚ್ಚುತ್ತಿದೆ ಮತ್ತು 2024 ರ ವೇಳೆಗೆ 35,000 ಕೋಟಿ ರೂ ಮೌಲ್ಯ ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಬೆಂಗಳೂರು: ಭಾರತದ ರಕ್ಷಣಾ ರಫ್ತು ಹೆಚ್ಚುತ್ತಿದೆ ಮತ್ತು 2024 ರ ವೇಳೆಗೆ 35,000 ಕೋಟಿ ರೂ ಮೌಲ್ಯ ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನ ನೌಕರರು ಮತ್ತು ಅಧಿಕಾರಿಗಳು ಆಯೋಜಿಸಿದ್ದ ನಾಡಹಬ್ಬ ಆಚರಣೆಯಲ್ಲಿ  ಪಾಲ್ಗೊಂಡ ರಾಜನಾಥ್ ಸಿಂಗ್ "ಎಚ್‌ಎಎಲ್‌ನ ಬಲವನ್ನು ಆಧರಿಸಿ ಭಾರತದ ರಕ್ಷಣಾ ರಫ್ತು ಪ್ರಮಾಣ ನಿರ್ಧಾರವಾಗುತ್ತದೆ.ದೀರ್ಘಾವಧಿಯಲ್ಲಿ, ದೇಶವು ತಮ್ಮ ಸ್ವಂತ ರಕ್ಷಣಾ ಸಲಕರಣೆ ತಯಾರಿಸುವುದು ಅನಿವಾರ್ಯ. ಏಕೆಂದರೆ ರಕ್ಷಣಾ ವಲಯದಲ್ಲಿ  ಆಮದಿನ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ" ಎಂದರು.

ಖಾಸಗಿ ರಕ್ಷಣಾ ಉದ್ಯಮಕ್ಕೆ ಪ್ರತಿಸ್ಪರ್ಧಿಯಾಗಿ, ಎಚ್‌ಎಎಲ್ ಸ್ಪರ್ಧಾತ್ಮಕ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಬೇಕಾಗಿದೆ - ಇದು ಸಂಕಷ್ಟಕರ ಸ್ಥಿತಿಯಾಗಿದ್ದು ಇದನ್ನೊಂದು ಅವಕಾಶ ಎಂಬಂತೆ ನೋಡಬೇಕಿದೆ ಎಂದು ಸಿಂಗ್ ಹೇಳಿದ್ದಾರೆ.

ದೇಶದಲ್ಲಿ ನಾಗರಿಕ ವಿಮಾನಗಳ ತಯಾರಿಕೆಯಲ್ಲಿ ಎಚ್‌ಎಎಲ್ ಮುಂಚೂಣಿಗೆ ಏರಲಿದೆ ಎಂದು ಕೇಂದ್ರ ಸಚಿವರು ಆಶಿಸಿದ್ದಾರೆ. 

ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಎಚ್‌ಎಎಲ್ ಪ್ರಮುಖ ಪಾತ್ರ ವಹಿಸಲಿದೆ - ಇದು ಕಾರ್ಯಾಚರಣೆ ಮತ್ತು ಹಣಕಾಸು  ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಅವರು ಹೇಳಿದರು. ಮಾರ್ಚ್ 2019 ರವರೆಗೆ ಕಂಪನಿಯ ವಹಿವಾಟು 19,705 ಕೋಟಿ ರೂ. ಆಗಿದ್ದು, ಷೇರುದಾರರಿಗೆ ಶೇಕಡಾ 198 ರಷ್ಟು ಲಾಭಾಂಶವನ್ನು ನೀಡಿದೆ. ಇದೇ ವೇಳೆ ವಾಯುಪಡೆಯ ಬೆನ್ನೆಲುಬಾಗಿ ಎಚ್‌ಎಎಲ್ ಪ್ರಗತಿಯ ಬಗ್ಗೆ ರಾಜನಾಥ್ ಸಂತೋಷ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com