400 ಕೆ.ಜಿ ಟೊಮೆಟೊ ಬೀದಿಗೆ ಎಸೆದು ಹೋದ ಅನ್ನದಾತ! 

ಬೆಲೆ ಕುಸಿತದಿಂದ ಕಂಗಲಾದ ರೈತನೊಬ್ಬ ತಾನು ಬೆಳೆದ ಸುಮಾರು ನಾನ್ನೂರು ಕೆಜಿ ಪ್ರಮಾಣದ ಟೊಮೆಟೊವನ್ನು ರಸ್ತೆಗೆ ಎಸದು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ಸೂಕ್ತ ಬೆಲೆ ಸಿಕ್ಕದ್ದರಿಂದ ಬೇಸತ್ತ ರೈತ ನಿರಾಸೆಯಿಂದ ಈ ಹಾದಿ ತುಳಿದಿದ್ದಾನೆ ಎನ್ನಲಾಗಿದೆ.
400 ಕೆ.ಜಿ ಟೊಮೆಟೊ ಬೀದಿಗೆ ಎಸೆದು ಹೋದ ಅನ್ನದಾತ!
400 ಕೆ.ಜಿ ಟೊಮೆಟೊ ಬೀದಿಗೆ ಎಸೆದು ಹೋದ ಅನ್ನದಾತ!

ಗಂಗಾವತಿ: ಬೆಲೆ ಕುಸಿತದಿಂದ ಕಂಗಲಾದ ರೈತನೊಬ್ಬ ತಾನು ಬೆಳೆದ ಸುಮಾರು ನಾನ್ನೂರು ಕೆಜಿ ಪ್ರಮಾಣದ ಟೊಮೆಟೊವನ್ನು ರಸ್ತೆಗೆ ಎಸದು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ಸೂಕ್ತ ಬೆಲೆ ಸಿಕ್ಕದ್ದರಿಂದ ಬೇಸತ್ತ ರೈತ ನಿರಾಸೆಯಿಂದ ಈ ಹಾದಿ ತುಳಿದಿದ್ದಾನೆ ಎನ್ನಲಾಗಿದೆ.
 
ಗಂಗಾವತಿಯ ತರಕಾರಿ ಮಾರುಕಟ್ಟೆಗೆ ಕಂಪ್ಲಿಯಿಂದ ಮಾರಾಟ ಮಾಡುವ ಉದ್ದೇಶಕ್ಕೆ ಟೊಮೆಟೊ ತಂದಿದ್ದ ರೈತ ಸುಬ್ಬಣ್ಣ ಮಡಿವಾಳ ಎಂಬುವವರು ಇಲ್ಲಿನ ಬೆಲೆ ಕೇಳಿ ಬೆಚ್ಚಿಬಿದ್ದಿದ್ದಾರೆ. ಕಿಲೋಗೆ ಐವತ್ತು ಪೈಸೆಯಿಂದ ಒಂದು ರೂಪಾಯಿ ಧಾರಣೆಯಲ್ಲಿ ಕೊಳ್ಳುವುದಾಗಿ ಸ್ಥಳೀಯ ದಲ್ಲಾಳಿಗಳು ಹೇಳಿದ್ದಾರೆ. 

ಇದರಿಂದ ಅಸಮಧಾನಗೊಂಡ ರೈತ, ತಾನು ಹೊಲದಲ್ಲಿ ಬಂಡವಾಳ ಹೂಡಿ ಬೆಳೆದ ಬೆಳೆ, ಟೊಮೆಟೊ ಕತ್ತರಿಸಿದ ಕೂಲಿ, ಸಾಗಾಣಿಕೆ ವೆಚ್ಚ ಸೇರಿದಂತೆ ದುಬಾರಿ ವೆಚ್ಚ ಮಾಡಿದ್ದೇನೆ. ನೀವು ನೀಡುವ ವೆಚ್ಚ ಸಾಗಾಣಿಕೆಗೂ ಸಾಲದು ಎಂದು ರೈತ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಕೂಡಲೆ ತಾವು ತಂದ ಟೊಮೆಟೊವನ್ನು ವಾಹನ ಸಮೇತ ವಿದ್ಯಾನಗರದ ಬಳಿ ಇರುವ ರೈಲ್ವೆ ಗೇಟ್ ಬಳಿಗೆ ಕೊಂಡೊಯ್ದು ಬ್ರಿಡ್ಜ್ ಕೆಳಗೆ ರಸ್ತೆ ಬದಿ ಸುರಿದು ಹೋಗಿದ್ದಾರೆ ಎನ್ನಲಾಗಿದೆ. ಸಧ್ಯ ನಮಾರುಕಟ್ಟೆಯಲ್ಲಿ ಕಿಲೋ ಟೊಮೆಟೊಗೆ ಐದರಿಂದ ಆರು ರೂಪಾಯಿ ಧಾರಣೆ ವ್ಯಕ್ತವಾಗುತ್ತಿದೆ. ಆದರೆ ರೈತರಿಂದ ಖರೀದಿಸುವ ಟೊಮೆಟೊ ಹಣ್ಣಿಗೆ ಮಾತ್ರ ಕೇವಲ ಒಂದುರೂಪಾಯಿಗೂ ಕಡಿಮೆ ಮೊತ್ತದ ಹಣ ನೀಡುತ್ತಿರುವ ದಲ್ಲಾಳಿಗಳು ಅತ್ತ ರೈತರನ್ನು ಇತ್ತ ಗ್ರಾಹಕರನ್ನು ಶೋಷಿಸುತ್ತಿದ್ದಾರೆ. ಈ ಬಗ್ಗೆ ಕೂಡಲೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಕಾರಿಗಳು ಮಧ್ಯ ಪ್ರವೇಶಿಸಿ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ರೈತ ಮುಖಂಡ ಕೇಸರಟಹಟ್ಟಿ ಶರಣಗೌಡ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com