ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ: ರಮೇಶ್ ಚಂದ್

ತೋಟಗಾರಿಕೆ ಕ್ಷೇತ್ರದ ಸ್ಪರ್ಧಾತ್ಮಕತೆಗಾಗಿ ಉನ್ನತ ಸಂಶೋಧನೆ ಮತ್ತು ಅಭಿವೃದ್ದಿ ಪ್ರಮುಖವಾಗಿದೆ ಎಂದು ಭಾರತ ಸರಕಾರದ ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫರ್ಮಿಂಗ್ ಇಂಡಿಯಾ ಆಯೋಗದ ಸದಸ್ಯ ಪ್ರೊ.ರಮೇಶ ಚಂದ್ ತಿಳಿಸಿದರು.
ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ: ರಮೇಶ್ ಚಂದ್
ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ: ರಮೇಶ್ ಚಂದ್

ಬಾಗಲಕೋಟೆ: ತೋಟಗಾರಿಕೆ ಕ್ಷೇತ್ರದ ಸ್ಪರ್ಧಾತ್ಮಕತೆಗಾಗಿ ಉನ್ನತ ಸಂಶೋಧನೆ ಮತ್ತು ಅಭಿವೃದ್ದಿ ಪ್ರಮುಖವಾಗಿದೆ ಎಂದು ಭಾರತ ಸರಕಾರದ ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫರ್ಮಿಂಗ್ ಇಂಡಿಯಾ ಆಯೋಗದ ಸದಸ್ಯ ಪ್ರೊ.ರಮೇಶ ಚಂದ್ ತಿಳಿಸಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ತೋವಿವಿಯ 9ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ತೋಟಗಾರಿಕೆ ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯ ಮತ್ತು ದೇಶದ್ಯಂತ ಉತ್ತಮ ಆದಾಯವನ್ನು ಗಳಿಸಲು ವ್ಯಾಪಾರ ಮಾಡಲು ಅನುಕೂಲವಾಗುವಂತೆ ವಿದ್ಯಾಲಯದಲ್ಲಿ ತೋಟ, ವ್ಯಾಪಾರ ಮತ್ತು ರಫ್ತು ಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿರುವುದು ಶ್ಲಾಘನೀಯವಾದುದು ಎಂದರು.

ತೋಟಗಾರಿಕೆಯಲ್ಲಿ ಅಗತ್ಯವಾದ ಕೌಶಲ್ಯಗಳೊಂದಿಗೆ ರಾಜ್ಯವು ಸಾಕಷ್ಟು ಮಾನವ ಶಕ್ತಿ ಹೊಂದಿಲ್ಲ. ಈ ಅಗತ್ಯವನ್ನು ಪರಿಹರಿಸಲು ವಿಶ್ವವಿದ್ಯಾಲಯವು ಬದ್ಧವಾಗಿರಬೇಕು. ಕರ್ನಾಟಕದ ಬೆಳೆ ಕ್ಷೇತ್ರದ ಒಟ್ಟಾರೆ ಉತ್ಪಾದಕತೆಯು ಅಖಿಲ ಭಾರತ ಸರಾಸರಿಗಿಂತ ಕಡಿಮೆಯಾಗಿದೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಮಳೆ ಮೇಲೆ ರಾಜ್ಯದ ಹೆಚ್ಚಿನ ಅವಲಂಬನೆಯ ಕಡಿಮೆ ಉತ್ಪಾದಕೆತೆ ಬೆಳೆಗಳ ಪ್ರಾಬಲ್ಯ ತೋಟಗಾರಿಕೆ ಕಡೆಗೆ ಒಂದು ಸಣ್ಣ ಬದಲಾವಣೆಯು ಕೃಷಿ ಆದಾಯಕ್ಕೆ ದೊಡ್ಡ ವ್ಯತ್ಯಾಸವನ್ನು ಉಂಟು ಮಾಡುತ್ತದೆ ಎಂದರು.

ಮಾರುಕಟ್ಟೆ ಸಾಮಾನ್ಯವಾಗಿದ್ದರೆ ಯಾವುದೇ ಆಹಾರ ಧಾನ್ಯಗಳು, ಎಣ್ಣೆಕಾಳುಗಳು ಇತರೆ ಕ್ಷೇತ್ರ ಬೆಳೆಗಳು ತೋಟಗಾರಿಕಾ ಬೆಳೆಗಳಿಂದ ಬರುವ ಆದಾಯಕ್ಕೆ ಹೊಂದಿಕೆಯಾಗಿರವುದಿಲ್ಲ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದಾಗಿಯೂ ಸೀಮಿತಗೊಳಿಸಿರುವ ಅಂಶಗಳು ಅಸಮರ್ಪಕ ಮಾರುಕಟ್ಟೆ ಮಾಹಿತಿ ಅಭಿವೃದ್ಧಿಯಾಗದೆ ಸಾರಿಗೆ, ಶೇಖರಣಾ ಸೌಲಭ್ಯಗಳು, ಕಳಪೆ ಶ್ರೇಣಿ ಮತ್ತು ಕೋಯ್ಲೆತ್ತರ ನಷ್ಟ ತೋಟಗಾರಿಕೆ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ಹಲವಾರು ವಲಯಗಳಲ್ಲಿ ಕ್ರಮ ಅಗತ್ಯವಾಗಿದೆ ಎಂದರು.

ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮತ್ತು ರಾಜ್ಯಕ್ಕೆ ತೋಟಗಾರಿಕೆ ನೇತೃತ್ವದ ಬೆಳೆಗಳನ್ನು ಸಾಧಿಸಲು ದೊಡ್ಡ ಆಸ್ತಿ ಆಗಿದ್ದು, ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸ್ವಾಧೀನ ಪಡಿಸಿಕೊಂಡಿರುವ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಸಾರ್ವಜನಿಕ ಅಥವಾ ಖಾಸಗೀ ವಲಯದಲ್ಲಿ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಅವಕಾಶಗಳು ಸಾಕಷ್ಟು ಇರುವುದಾಗಿ ತಿಳಿಸಿದರು. 

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ. ಇಂದಿರೇಶ ಅವರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಯುವಜನಾಂಗದ ಶೈಕ್ಷಣಿಕ ಯಶಸ್ಸಿನ ಮೇಲೆ ಬೆಳಕು ಬೀರುವ ಸುಸಂದರ್ಭ ಈ ಘಟಿಕೋತ್ಸವವಾಗಿದ್ದು, ವೃತ್ತಿ ಬದುಕಿನ ಭದ್ರ ಬುನಾದಿಗೆ ದಾರಿಯಾಗದೆ. ಬಾಗಲಕೋಟೆ ತೋವಿವಿಯು ದೇಶದಲ್ಲಿರುವ ೭೪ ಕೃಷಿ ವಿಶ್ವವಿದ್ಯಾಲಯಗಳಲ್ಲಿಯೇ ವಿಶಿಷ್ಟವಾದ ಮೂರನೇ ತೋಟಗಾರಿಕೆ ವಿಶ್ವವಿದ್ಯಾಲಯವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳ ಬೆಂಬಲ ಹಾಗೂ ವಿಶ್ವವಿದ್ಯಾಲಯದ ಶಿಕ್ಷಕರು, ವಿಜ್ಞಾನಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಪ್ರತೀಕವಾಗಿದೆ ಎಂದರು. ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವರು ಹಾಗೂ ತೋವಿವಿಯ ಸಹ ಕುಲಪತಿ ಕೆ.ಸಿ. ನಾರಾಯಣ ಗೌಡ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. 

ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ಆಡಳಿತ ವರ್ಗ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com