ಮಂಗಳೂರು: ದಿವಾಕರ್‌ಗೆ ಒಲಿದ ಮೇಯರ್ ಪಟ್ಟ, ವೇದಾವತಿ ಉಪಮೇಯರ್ ಆಗಿ ಆಯ್ಕೆ

 ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಗಿದಿದ್ದು ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ದಿವಾಕರ ಪಾಂಡೇಶ್ವರ ಆಯ್ಕೆಗೊಂಡಿದ್ದಾರೆ. ದಿವಾಕರ್ ಅವರು ಪಾಲಿಕೆಯ 21ನೇ ಅವಧಿಯ ಮೇಯರ್ ಆಗಿದ್ದು 46ನೇ ಕಂಟೋನ್ಮೆಂಟ್ ವಾರ್ಡ್ ನ ಕಾರ್ಪೋರೇಟರ್ ಆಗಿದ್ದಾರೆ. ಇನ್ನು ಬಿಜೆಪಿಯ ವೇದಾವತಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದು ಇವರು 9ನೇ ಕುಳಾಯಿ ವಾರ್ಡ್ ಕಾರ್ಪೋರೇಟರ್ ಆಗಿದ್ದಾ
ಮಂಗಳೂರು: ದಿವಾಕರ್‌ಗೆ ಒಲಿದ ಮೇಯರ್ ಪಟ್ಟ, ವೇದಾವತಿ ಉಪಮೇಯರ್ ಆಗಿ ಆಯ್ಕೆ

ಮಂಗಳುರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಗಿದಿದ್ದು ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ದಿವಾಕರ ಪಾಂಡೇಶ್ವರ ಆಯ್ಕೆಗೊಂಡಿದ್ದಾರೆ. ದಿವಾಕರ್ ಅವರು ಪಾಲಿಕೆಯ 21ನೇ ಅವಧಿಯ ಮೇಯರ್ ಆಗಿದ್ದು 46ನೇ ಕಂಟೋನ್ಮೆಂಟ್ ವಾರ್ಡ್ ನ ಕಾರ್ಪೋರೇಟರ್ ಆಗಿದ್ದಾರೆ. ಇನ್ನು ಬಿಜೆಪಿಯ ವೇದಾವತಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದು ಇವರು 9ನೇ ಕುಳಾಯಿ ವಾರ್ಡ್ ಕಾರ್ಪೋರೇಟರ್ ಆಗಿದ್ದಾರೆ.

ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಅರವತ್ತು ಕಾರ್ಪೋರೇಟರ್ ಗಳ ಪ್ರಮಾಣವಚನ ನೆರವೇರಿದ್ದು ಆ ಬಳಿಕ ಅಸ್ತಿತ್ವಕ್ಕೆ ಬಂದ ಪಾಲಿಕೆಯ ನೂತನ ಪರಿಷತ್  ನಲ್ಲಿ ಮೇಯರ್ ಆಯ್ಕೆ ಚುನಾವಣೆ ನಡೆದಿತ್ತು.

ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ವಿ. ಯಶವಂತ್ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ.

ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದರೆ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗಾಗಿ ಮೀಸಲಾಗಿತ್ತು.ಪಾಲಿಕೆಯಲ್ಲಿ ಬಹುಮತವಿದ್ದ ಬಿಜೆಪಿಯಿಂದ ದಿವಾಕರ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ ಕಾಂಗ್ರೆಸ್ ನಿಂದ ಕೇಶವ ಸ್ಪರ್ಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com