ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ಗುಡ್ ನ್ಯೂಸ್! ಮೆಟ್ರೋ, ಬಿಎಂಟಿಸಿ ಸೇವೆ ತಡರಾತ್ರಿವರೆಗೂ ವಿಸ್ತರಣೆ

ಹೊಸವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮೆಟ್ರೋ ಹಾಗೂ  ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ಮೆಟ್ರೋ ಹಾಗೂ ಬಿಎಂಟಿಸಿ  ಬಸ್‌ಗಳ ಸೇವೆಯನ್ನು ತಡರಾತ್ರಿ 12.30ಗಂಟೆಯವರೆಗೂ ವಿಸ್ತರಿಸಲಾಗಿದೆ. ಎಲ್ಲೆಲ್ಲಿ  ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗಲಿದೆ ಎಂಬ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

Published: 01st January 2020 04:01 PM  |   Last Updated: 01st January 2020 04:01 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ಬೆಂಗಳೂರು: ಹೊಸವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮೆಟ್ರೋ ಹಾಗೂ  ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ಮೆಟ್ರೋ ಹಾಗೂ ಬಿಎಂಟಿಸಿ  ಬಸ್‌ಗಳ ಸೇವೆಯನ್ನು ತಡರಾತ್ರಿ 12.30ಗಂಟೆಯವರೆಗೂ ವಿಸ್ತರಿಸಲಾಗಿದೆ. ಎಲ್ಲೆಲ್ಲಿ  ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗಲಿದೆ ಎಂಬ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

 ಬೆಂಗಳೂರಿಗರು, ರಾತ್ರಿ 10.30 ರ ಬಳಿಕ ಮೆಜೆಸ್ಟಿಕ್‌ನಲ್ಲಿ ಬಸ್ ಸಿಗುವುದಿಲ್ಲ, ರಾತ್ರಿ 11ರ ನಂತರ  ಮೆಟ್ರೋ ಇಲ್ಲ ಎಂದು ಗೊಣಗುವುದು, ತಡರಾತ್ರಿ ಬಸ್‌ಗಾಗಿ ಕಾಯುವುದು ಸರ್ವೆಸಾಮಾನ್ಯ. ಆದರೆ  ಇಂತಹ ಗೊಣಗಾಟ ಕಾಯುವಿಕೆಗೆ ಇನ್ನುಮುಂದೆ ಇರುವುದಿಲ್ಲ. ಹೊಸವರ್ಷದ ಮೊದಲ ದಿನವಾದ  ಜ.1ಅಂದರೆ ಇಂದಿನಿಂದಲೇ ಈ ತೊಂದರೆಗಳಿಗೆ ಬಹುತೇಕ ಮುಕ್ತಿ ಸಿಗಲಿದೆ. ತಡರಾತ್ರಿಯವರೆಗೂ  ಪ್ರಯಾಣಿಕರಿಗೆ ಮೆಟ್ರೋ, ಬಿಎಂಟಿಸಿ ಸೇವೆ ಲಭ್ಯವಾಗಲಿದೆ. ಈ ಹಿಂದೆ 11.30ರ ವರೆಗೆ ಇದ್ದ  ಮೆಟ್ರೋ ಸೇವೆ ಇಂದಿನಿಂದ ರಾತ್ರಿ 12ರವರೆಗೂ ವಿಸ್ತರಣೆಯಾಗಿದೆ.

ಮೈಸೂರು ರಸ್ತೆಗೆ ಕೊನೆಯ ರೈಲು ರಾತ್ರಿ 11.40, ಬೈಯಪ್ಪನಹಳ್ಳಿಗೆ 11.35 ,ನಾಗಸಂದ್ರಕ್ಕೆ 11.25 ಕೊನೆಯ ಟ್ರೈನ್ ಹೊರಡುವ ಸಮಯ,

ಯಲಚೇನಹಳ್ಳಿ- 11.35 ಕೊನೆಯ ಟ್ರೈನ್ ಹೊರಡುವ ವೇಳೆಯಾಗಿತ್ತು. ಆದರೆ ಇನ್ನುಮುಂದೆ ಈ ಎಲ್ಲಾ ನಾಲ್ಕೂ ಟ್ರೇನ್‌ಗಳು ಮೆಜೆಸ್ಟಿಕ್  ನಲ್ಲಿ ರಾತ್ರಿ 12 ಗಂಟೆಗೆ ಸೇರಲಿವೆ. 

ಮೆಟ್ರೋ ಸೇವೆ ವಿಸ್ತರಣೆ ಹಿನ್ನೆಲೆಯಲ್ಲಿ  ಬಿಎಂಟಿಸಿ ಫೀಡರ್ ಸೇವೆ ಆರಂಭಿಸಿದೆ. ತಡರಾತ್ರಿಯೂ ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ  ಫೀಡರ್ ಸೇವೆ ಲಭ್ಯವಾಗಲಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸೇವೆ ವಿಸ್ತರಣೆ  ಮಾಡಲಾಗಿದೆ. ನಗರದ ಕೆಲವು ಮುಖ್ಯ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಸೇವೆಯನ್ನು ಬಿಎಂಟಿಸಿ  ನೀಡಿದೆ.

ವಿಜಯ ನಗರ ಮೆಟ್ರೋ ನಿಲ್ದಾಣ ಟು- ಬನಶಂಕರಿ ಮೆಟ್ರೋ  ನಿಲ್ದಾಣ, ವಿಜಯನಗರ ಮತ್ತು ಉಳ್ಳಾಲ ಮೈಸೂರು ರಸ್ತೆ -ಕೆಂಗೇರಿ, ಮೈಸೂರು ರಸ್ತೆ -  ಬಿಇಎಂಎಲ್ 5 ನೇ ಹಂತ,ಬನಶಂಕರಿ - ಕಗ್ಗಲೀ ಪುರ,ಜಯನಗರ -ವಡ್ರಹಳ್ಳಿ,ಜಯನಗರ ಮೆಟ್ರೋ  ನಿಲ್ದಾಣ -ಜಂಬೂಸವಾರಿ ದಿಣ್ಣೆ, ಗೋರಗುಂಟೆ ಪಾಳ್ಯ - ವಿದ್ಯಾರಣ್ಯಪುರ, ಜಾಲಹಳ್ಳಿ  - ವಿದ್ಯಾರಣ್ಯಪುರ,ಎಸ್ ವಿ ರೋಡ್ - ವೈಟ್ ಫೀಲ್ಡ್, ಎಸ್ ವಿ ರೋಡ್ ಮೆಟ್ರೋ - ಕೆಆರ್  ಪುರಂ ಟಿಟಿಎಂಸಿ,ಎಸ್ ವಿ ರೋಡ್ ಮೆಟ್ರೋ - ಸೆಂಟ್ರಲ್ ಸಿಲ್ಕ್ ಬೋರ್ಡ್,ಈ ಹಿಂದೆ  ಬೆಂಗಳೂರಿನಲ್ಲಿ 10 ಗಂಟೆ ಬಿಎಂಟಿಸಿ ಬಸ್‌ಗಳನ್ನು ಬಹುತೇಕ  ನಿಲ್ಲಿಸಲಾಗುತ್ತಿತ್ತು. ಆದರೆ ಮುಂದೆ ಈ ಎಲ್ಲಾ ಮಾರ್ಗಗಳಿಗೆ ತಡರಾತ್ರಿ 12.20  ರವರೆವಿಗೂ  ಬಿಎಂಟಿಸಿ ಸೇವೆ ವಿಸ್ತರಿಸಿದೆ.

Stay up to date on all the latest ರಾಜ್ಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp