ಚಾಮರಾಜನಗರ: ವರ್ಷಾಚರಣೆ ವೇಳೆ ಕರ್ತವ್ಯ ನಿರ್ವಹಿಸಿ ಹಿಂದಿರುಗುತ್ತಿದ್ದಾಗ ಪೇದೆ ಸಾವು

ನಿನ್ನೆ ಹೊಸವರ್ಷ ಸಂಭ್ರಮಾಚರಣೆಯ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸಿ ಹಿಂದಿರುಗುತ್ತಿದ್ದಾಗ ಆಯತಪ್ಪಿ ಬೈಕನಿಂದ ಬಿದ್ದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಮುಖ್ಯರಸ್ತೆಯ ಹೊಸ ಅಣಗಳ್ಳಿ ಬಳಿ ನಡೆದಿದೆ.

Published: 01st January 2020 02:40 PM  |   Last Updated: 01st January 2020 02:40 PM   |  A+A-


Road Accident

ಅಪಘಾತ

Posted By : Vishwanath S
Source : UNI

ಚಾಮರಾಜನಗರ: ನಿನ್ನೆ ಹೊಸವರ್ಷ ಸಂಭ್ರಮಾಚರಣೆಯ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸಿ ಹಿಂದಿರುಗುತ್ತಿದ್ದಾಗ ಆಯತಪ್ಪಿ ಬೈಕನಿಂದ ಬಿದ್ದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಮುಖ್ಯರಸ್ತೆಯ ಹೊಸ ಅಣಗಳ್ಳಿ ಬಳಿ ನಡೆದಿದೆ.

ಆರ್.ಎಸ್. ದೊಡ್ಡಿ ಗ್ರಾಮದ ನಿವಾಸಿ ಸಿದ್ದರಾಜು ಮೃತ ಪೊಲೀಸ್ ಪೇದೆ. ಇವರು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಹೊಸ ವರ್ಷದ ಸಂಭ್ರಮಾಚರಣೆಯ ಬಿಗಿ ಬಂದೋಬಸ್ತ್ ಗಾಗಿ ನರೀಪುರ ಪಾಯಿಂಟ್‍ಗೆ ನಿಯೋಜಿಸಲಾಗಿತ್ತು.

ಸಿದ್ದರಾಜು ಅವರು ನಿನ್ನೆ ರಾತ್ರಿ ಕರ್ತವ್ಯ ಮುಗಿಸಿ ಹಿಂದಿರುಗುವಾಗ ರಸ್ತೆ ಗುಂಡಿಯಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಪಕ್ಕದ ಚಾನಲ್‍ಗೆ ಬೈಕ್ ಸಮೇತ ಸಿದ್ದರಾಜು ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp