ರೆಕ್ಕೆಯಲ್ಲಿ ಬಿರುಕು: ಚೆನ್ನೈ-ಗೋವಾ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ವಿಮಾನದ ರೆಕ್ಕೆಯಲ್ಲಿ ಬಿರುಕು ಕಂಡುಬಂದ ಕಾರಣ 68 ಪ್ರಯಾಣಿಕರೊಂದಿಗೆ ಚೆನ್ನೈನಿಂದ ಗೋವಾಗೆ ಹೊರಟಿದ್ದ  ಸ್ಪೈಸ್‌ಜೆಟ್ ವಿಮಾನವು ಗುರುವಾರ ಮಧ್ಯಾಹ್ನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಮಾನದ ರೆಕ್ಕೆಯಲ್ಲಿ ಬಿರುಕು ಕಂಡುಬಂದ ಕಾರಣ 68 ಪ್ರಯಾಣಿಕರೊಂದಿಗೆ ಚೆನ್ನೈನಿಂದ ಗೋವಾಗೆ ಹೊರಟಿದ್ದ  ಸ್ಪೈಸ್‌ಜೆಟ್ ವಿಮಾನವು ಗುರುವಾರ ಮಧ್ಯಾಹ್ನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ.

ಫ್ಲೈಟ್ ಸಂಝ್ಯೆ ಎಸ್‌ಜಿ 3105,ಕ್ಯೂ 400 ವಿಮಾನ ಮಧ್ಯಾಹ್ನ 12.10 ಕ್ಕೆತನ್ನ ರೆಕ್ಕೆಯಲ್ಲಿ ಬಿರುಕುಗಳನ್ನು ಗುರುತಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇದು ಮಧ್ಯಾಹ್ನ 12.17 ಕ್ಕೆ ಕೆಐಎಗೆ  ಆಗಮಿಸಿದ ವಿಮಾನ ಇಲ್ಲಿ ಸುರಕ್ಷಿತವಾಗಿ ಇಳಿದಿದೆ.

ಸ್ಪೈಸ್ ಜೆಟ್ ವಕ್ತಾರರ ಪ್ರಕಾರ, "ವಿಮಾನದ ವಿಂಡ್ ಷೀಲ್ಡ್ ನ  ಪಿ 2 ಬದಿಯ ಹೊರಗಿನ ಫಲಕ ಬಿರುಕು ಬಿಟ್ಟಿತ್ತು. ಆಗ ಮುಖ್ಯ ಪೈಲಟ್ ವಿಮಾನವನ್ನು ಬೆಂಗಳೂರಿನತ್ತ ತಿರುಗಿಸಲು ತೀರ್ಮಾನಿಸಿದ್ದರು.. ವಿಮಾನವು ಸುರಕ್ಷಿತವಾಗಿ ಬೆಂಗಳೂರಿನಲ್ಲಿ ಇಳಿದಿದೆ."

ವಿಮಾನವು ದುರಸ್ತಿಗೊಂಡ ಬಳಿಕ ಸಂಜೆ 4.30 ಕ್ಕೆ ಗೋವಾಕ್ಕೆ ಹೊರಟಿತು ಎಂದು ಮತ್ತೊಂದು ಮೂಲದ ಮಾಹಿತಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com