ಪಾರ್ಕಿಂಗ್ ಪಾಲಾದ ವಿಶ್ವವಿಖ್ಯಾತ ಹಂಪಿ ಮಂಟಪ!

ವಿಶ್ವದಾದ್ಯಂತ ಖಾತಿ ಪಡೆದಿರುವ ಹಂಪಿಯ ಮಂಟಪಗಳನ್ನು ರಕ್ಷಣೆ ಮಾಡಲು ಸರ್ಕಾರ ಸಾಕಷ್ಟು ತಂತ್ರಜ್ಞಾನ, ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಇಲ್ಲಿರುವ ಸರ್ಕಾರಿ ಸಂಸ್ಥೆಗಳ ಬಹುತೇಕ ನೌಕರರೇ ಮಂಟಪಗಳ ಸ್ಥಳಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. 
ಪಾರ್ಕಿಂಗ್ ಪಾಲಾದ ವಿಶ್ವವಿಖ್ಯಾತ ಹಂಪಿ ಮಂಟಪ!
ಪಾರ್ಕಿಂಗ್ ಪಾಲಾದ ವಿಶ್ವವಿಖ್ಯಾತ ಹಂಪಿ ಮಂಟಪ!

ಹುಬ್ಬಳ್ಳಿ: ವಿಶ್ವದಾದ್ಯಂತ ಖಾತಿ ಪಡೆದಿರುವ ಹಂಪಿಯ ಮಂಟಪಗಳನ್ನು ರಕ್ಷಣೆ ಮಾಡಲು ಸರ್ಕಾರ ಸಾಕಷ್ಟು ತಂತ್ರಜ್ಞಾನ, ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಇಲ್ಲಿರುವ ಸರ್ಕಾರಿ ಸಂಸ್ಥೆಗಳ ಬಹುತೇಕ ನೌಕರರೇ ಮಂಟಪಗಳ ಸ್ಥಳಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. 

ಸರ್ಕಾರಿ ಸಂಸ್ಥೆಗಲಿಗೆ ಸೇರಿದ ನೌಕರರು ಮಂಟಪಗಳ ಸ್ಥಳಗಳನ್ನು ಪಾರ್ಕಿಂಗ್ ಸ್ಥಳಗಳನ್ನಾಗಿ ಮಾರ್ಪಡಿಸಿದ್ದು, ಮಂಟಪಗಳ ಬಳಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. 

ಮಂಟಪಗಳ ರಕ್ಷಣೆಗೆ ಭಾರತೀಯ ಪುರಾತತ್ಮ ಸಮೀಕ್ಷೆ ಪ್ರವಾಸಿಗರಿಗೆ ಹಲವು ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಸ್ಥಳೀಯ ಅಧಿಕಾರಿಗಳು ಕೂಡ ಸ್ತಳದಲ್ಲಿ ಟ್ರೈಪಾಡ್ ಗಳನ್ನು ಇಡಲು ನಿಷೇಧ ಹೇರಿದ್ದಾರೆ. ಆದರೆ, ಇದೇ ಸ್ಥಳದಲ್ಲಿ ಇದೀಗ ಪಾರ್ಕಿಂಗ್ ಮಾಡುತ್ತಿರುವುದು ಹಲವರಲ್ಲಿ ಬೇಸರವನ್ನು ತರಿಸಿದೆ. 

ಪೊಲೀಸ್ ಠಾಣೆ ಬಳಿಯಿರುವ ನಂದಿ ಪ್ರತಿಮೆ ನೋಡಲು ಬರುವ ಜನರೂ ಕೂಡ ಮಂಟಪಗಳಲ್ಲಿ ತಮ್ಮ ತಮ್ಮ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಮಂಟಪದ ಹಿಂಭಾಗದಲ್ಲಿ ಮಣ್ಣಿನ ರಸ್ತೆಯಿದೆ. ಹೀಗಾಗಿ ಮಂಟಪದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಾರೆ. ಇದನ್ನು ಮೊದಲು ನಿಲ್ಲಿಸಬೇಕು. ಫೋಟೋಗಳು ವೈರಲ್ ಆದ ಬಳಿಕ ಸ್ಥಳೀಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳು, ನಿಮಯಗಳ ಬಗ್ಗೆ ಕೆಲವ ಕೆಲಸಗಾರರಿಗೆ ಮಾಹಿತಿ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 

ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ, ಅಂಗಡಿಗಳನ್ನು ತೆರೆಯದಂತೆ ನಿಯಮಗಳಿವೆ. ನಿಯಮಗಳ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದಿದ್ದಾರೆ. 

ವೀರೂಪಾಕ್ಷ ಮಾರುಕಟ್ಟೆ ಹಲವು ವರ್ಷಗಳಿಂದ ನಡೆಯುತ್ತಿತ್ತು. ಅಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆದರೆ, ವ್ಯಾಪಾರಸ್ಥರಿಗೆ ಪರ್ಯಾಯವಾಗಿ ಯಾವುದೇ ಜಾಗವನ್ನೂ ನೀಡಿಲ್ಲ. ಪಾರ್ಕಿಂಗ್ ಸ್ಥಳವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿಲ್ಲ. ವ್ಯಾಪಾರಸ್ಥರಿಗೆ ಸಣ್ಣ ಜಾಗಗಳನ್ನು ನೀಡಲಾಗಿದೆ. ಪ್ರವಾಸಿಗರಿಗೆ ಹಾಗೂ ವ್ಯಾಪಾರಸ್ಥರಿಗೆ ಸರ್ಕಾರ ಸೂಕ್ತ ರೀತಿಯ ಸ್ಥಳಗಳನ್ನು ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com