ಸೂಪರ್ ಫಾಸ್ಟ್ ರೈಲಿನ ನಿಧಾನಗತಿ ವೇಗ: ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಮೈಸೂರು ನಿವಾಸಿ ಹೈಕೋರ್ಟ್ ಮೊರೆ

ಮಾಲ್ಗುಡಿ ಎಕ್ಸ್ ಪ್ರೆಸ್ ವೇಗ ಕಡಿಮೆಯಿದ್ದರೂ ಪ್ರಯಾಣಿಸುತ್ತಿರುವ ಪ್ರಯಾಣಿಕರಿಂದ ಅಕ್ರಮವಾಗಿ ಅಧಿಕ ದರ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಮೈಸೂರಿನ ಉದಯಗಿರಿ ನಿವಾಸಿ ಮೊಹಮ್ಮದ್ ದಸ್ತಗಿರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಲ್ಗುಡಿ ಎಕ್ಸ್ ಪ್ರೆಸ್ ವೇಗ ಕಡಿಮೆಯಿದ್ದರೂ ಪ್ರಯಾಣಿಸುತ್ತಿರುವ ಪ್ರಯಾಣಿಕರಿಂದ ಅಕ್ರಮವಾಗಿ ಅಧಿಕ ದರ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಮೈಸೂರಿನ ಉದಯಗಿರಿ ನಿವಾಸಿ ಮೊಹಮ್ಮದ್ ದಸ್ತಗಿರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.


ದಸ್ತಗಿರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕಾ ಮತ್ತು ಜಸ್ಟೀಸ್ ಹೇಮಂತ್ ಚಂದಗೌಡರ್ ಅವರ ನೇತೃತ್ವದ ವಿಭಾಗೀಯ ಪೀಠ ರೈಲ್ವೆ ಮಂಡಳಿ ಮತ್ತು ನೈರುತ್ಯ ರೈಲ್ವೆಗಳಿಗೆ ನೊಟೀಸ್ ಹೊರಡಿಸಿದೆ.


ರೈಲಿನ ವೇಗ ಗಂಟೆಗೆ 55 ಕಿಲೋ ಮೀಟರ್ ಅಥವಾ ಅದಕ್ಕಿಂತ ಹೆಚ್ಚು ವೇಗ ಇದ್ದರೆ ಸೂಪರ್ ಫಾಸ್ಟ್ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು ಎಂದು ರೈಲ್ವೆ ಮಂಡಳಿ ಕಳೆದ ಡಿಸೆಂಬರ್ 1ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ರೈಲ್ವೆ ಇಲಾಖೆ ಹೊರಡಿಸಿರುವ ವೇಳಾಪಟ್ಟಿ ಪ್ರಕಾರ ಮೈಸೂರು ಮತ್ತು ಯಲಹಂಕ ಮಧ್ಯೆ ಸಂಚರಿಸುವ ಮಾಲ್ಗುಡಿ ಎಕ್ಸ್ ಪ್ರೆಸ್ ವೇಗ 55 ಕಿಲೋ ಮೀಟರ್ ಗಿಂತ ಗಂಟೆಗೆ ಕಡಿಮೆ ಇದೆ. ಇಷ್ಟಾಗಿಯೂ ರೈಲ್ವೆ ಮಂಡಳಿ ಅಕ್ರಮವಾಗಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ಪ್ರಯಾಣಿಕರಿಂದ ಪಡೆಯುತ್ತಿದೆ ಎಂದು ದಸ್ತಗಿರಿ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com