ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ಪ್ರಕಾಶರಾವ್ ವೀರಮಲ್ಲ ಆಯ್ಕೆ 

ವಿಶ್ವದ ಅತಿ ದೊಡ್ಡ ಕಾಳೇಶ್ವರ ಏತ ನೀರಾವರಿ ಯೋಜನೆಯ ಹರಿಕಾರ,  ತೆಲಂಗಾಣ ಸರಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರು ಪ್ರಸಕ್ತ ಸಾಲಿನ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಕೊಡಮಾಡುವ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಕಾಶರಾವ್ ವೀರಮಲ್ಲ
ಪ್ರಕಾಶರಾವ್ ವೀರಮಲ್ಲ

ಬಾಗಲಕೋಟೆ: ವಿಶ್ವದ ಅತಿ ದೊಡ್ಡ ಕಾಳೇಶ್ವರ ಏತ ನೀರಾವರಿ ಯೋಜನೆಯ ಹರಿಕಾರ,  ತೆಲಂಗಾಣ ಸರಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರು ಪ್ರಸಕ್ತ ಸಾಲಿನ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಕೊಡಮಾಡುವ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ವಿಷಯ ಪ್ರಕಟಿಸಿದರು. ಜನವರಿ ೧೪ ರಂದು ಕೂಡಲಸಂಗಮದ ಬಸವಸಭಾ ಭವನದಲ್ಲಿ ನಡೆಯುವ ೧೦ನೇ ಕೃಷಿ ಸಂಕ್ರಾಂತಿ ಹಾಗೂ ಉತ್ತರ ಕರ್ನಾಟಕ ಸಮಗ್ರ ನೀರಾವರಿ ಕುರಿತು ನಾಡಿನ ರೈತ ಬಾಂಧವರ ಸಂವಾದದಲ್ಲಿ ಒಂದು ಲಕ್ಷ ರೂ.ಗಳ ನಗದು ಪುರಸ್ಕಾರ ಹಾಗೂ ತಾಮ್ರಪತ್ರ ಸ್ಮರಣಿಕೆಯನ್ನೊಳಗೊಂಡ ರಾಷ್ಟ್ರಮಟ್ಟದ ಬಸವಕೃಷಿ ಪ್ರಶಸಿಯನ್ನು ಪ್ರಕಾಶರಾವ್ ವೀರಮಲ್ಲ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು.

ಕೃಷಿ ಹಾಗೂ ಕೃಷಿಕರನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಕ್ರಾಂತಿಯ ಸಂದರ್ಭದಲ್ಲಿ ೨೦೧೨ ರಲ್ಲಿ ಕಾಯಕಯೋಗಿ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಪೀಠದಿಂದ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ೨೦೨೦ ರ ಸಾಲಿಗೆ  ವಿಶ್ವದ ಅತಿ ದೊಡ್ಡ ಕಾಳೇಶ್ವರ ಏತ ನೀರಾವರಿ ಯೋಜನೆಯ ಹರಿಕಾರ, ತೆಲಂಗಾಣ ಸರಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರು ಆಯ್ಕೆಯಾಗಿದ್ದು ಜನೇವರಿ ೧೪ ರಂದು ಕೂಡಲಸಂಗಮದಲ್ಲಿ ನಡೆಯುವ ಕೃಷಿ ಸಂಕ್ರಾAತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಪ್ರತ್ಯೇಕ ರಾಜ್ಯ ಚಳುವಳಿಯ ಸ್ಥಾಪಕ ಸದಸ್ಯರಾಗಿರುವ ಪ್ರಕಾಶರಾವ್ ವೀರಮಲ್ಲ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಕಾಲುವೆ ದುರಸ್ತಿ, ರೈತ ಹಕ್ಕುಗಳಿಗಾಗಿ ಅನೇಕ ರೈತ ಸಂಘಗಳನ್ನು ಸ್ಥಾಪಿಸಿದ್ದಾರೆ ಎಂದರು. ಟಿಆರ್‌ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರತ್ಯೇಕ ತೆಲಂಗಾಣ ರಾಜ್ಯ ಚಳುವಳಿಗೆ ಪ್ರಕಾಶರಾವ್ ವೀರಮಲ್ಲ ಅವರು ಈಗ ತೆಲಂಗಾಣ ಸರಕಾರದ ಪ್ರತಿನಿಧಿಯಾಗಿ, ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಪಕ್ಷದ ಪ್ರಣಾಳಿಕೆ ರೂಪಿಸುವದು ಮತ್ತು ನೀರಾವರಿ ವಿಷಯಗಳ ಬಗ್ಗೆ ಸರಕಾರಗಳ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿ ತೆಲಂಗಾಣದಲ್ಲಿ ನೀರಾವರಿ ವಲಯ ಸುಧಾರಣೆಗೆ ಶ್ರಮಿಸಿದ್ದಾರೆ. 

ಅಲ್ಲದೇ ಮಿಷನ್ ಕಾಕತೀಯ ಯೋಜನೆಯ ಪರಿಣಾಮವಾಗಿ ತೆಲಂಗಾಣದಲ್ಲಿ ೪೬ ಸಾವಿರ ಕೆರೆಗಳು ಜಲಮೂಲಗಳನ್ನು ದುರಸ್ತಿ ಮಾಡುವ ಮೂಲಕ ತೆಲಂಗಾಣದ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲವನ್ನು ಪರಿಣಾಮಕಾರಿಯಾಗಿ ಮರುಪೂರಣ ಮಾಡಲಾಗಿದೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಶಾಫ್ಟ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಗ್ರಾಮೀಣ ನೀರುದ್ಯೋಗಿ ಯುವಕರಿಗೆ ನೀರಿನ ಸಂರಕ್ಷಣೆ ಮತ್ತು ನೈಸರ್ಗಿಕ ಕೃಷಿ ಸಮಗ್ರ ಕೃಷಿ ತರಬೇತಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಪ್ರಾರಂಭಿಸಿದ್ದಾರೆ ಎಂದು ಜಗದ್ಗುರುಗಳು ವಿವರಿಸಿ ಈ ಸಾಧನೆಗಾಗಿ ಪೀಠದ ಬಸವ ಕೃಷಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿಂಗಪ್ಪ ಕೋಟಿ, ಎಸ್.ಎನ್. ರಾಂಪೂರ, ಮಂಜುನಾಥ ಪರೂತಗೇರಿ, ಹಣಮಂತ, ಸಂಗಮೇಶ ದೊಡಮನಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com