ಜನವರಿ 17 ರಂದು  ದೇಶದ  8 ನಗರಗಳಲ್ಲಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಬಿಡುಗಡೆ

53 ನಿಮಿಷಗಳ ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ ಜನವರಿ 17 ರಂದು  ಬೆಂಗಳೂರು ಸೇರಿದಂತೆ ದೇಶದ  8 ಪ್ರಮುಖ ನಗರಗಗಳಲ್ಲಿ ರಿಲೀಸ್ ಆಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 53 ನಿಮಿಷಗಳ ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ ಜನವರಿ 17 ರಂದು  ಬೆಂಗಳೂರು ಸೇರಿದಂತೆ ದೇಶದ  8 ಪ್ರಮುಖ ನಗರಗಗಳಲ್ಲಿ ರಿಲೀಸ್ ಆಗಲಿದೆ.

ದೆಹಲಿ, ಮುಂಬಯಿ,  ಬೆಂಗಳೂರು, ಚೆನ್ನೈ,  ಹೈದರಾಬಾದ್, ಕೊಲ್ಕೊತ, ಪುಣೆ, ನಾಗಪುರ, ಚಂಡಿಗಡ, ಅಹಮದಾಬಾದ್, ವಡೋದರಾ, ಇಂದೋರ್, ರಾಯ್ ಪುರ, ನಾಶಿಕ್, ಸೂರತ್, ಗುರುಗಾವ್, ಲಕ್ನೋ ಮತ್ತು ಲುಧಿಯಾನಗಳಲ್ಲಿ ರಿಲೀಸ್ ಆಗಲಿದೆ.

15 ಡ್ರೋಣ್ ಸೇರಿದಂತೆ 20 ಕ್ಯಾಮೆರಾಗಳನ್ನು ಈ ಸಾಕ್ಷ್ಯ ಚಿತ್ರ ಶೂಟಿಂಗ್ ಗೆ ಬಳಸಲಾಗಿದೆ.  ಕಳೆದ 4 ವರ್ಷಗಳ ಕಾಲದಿಂದ ಈ ಸಾಕ್ಷ್ ಚಿತ್ರ ತಯಾರಿಸಲಾಗಿದೆ. 

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ  ಹೆಚ್ಚಿನ ಭಾಗದ ಶೂಟಿಂಗ್  ನಡೆದಿದೆ.  ಇದೇ ಮೊದಲ ಬಾರಿಗೆ ದೇಶದಲ್ಲಿ ಸಾಕ್ಷ್ಯಚಿತ್ರ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ.  ಖ್ಯಾತ ಇತಿಹಾಸಕಾರ ಮತ್ತು ಪರಿಸರವಾದಿ ಬ್ರಿಟನ್‌ ಮೂಲದ ಸರ್‌. ಡೇವಿಡ್‌ ಅಟೆನ್‌ಬರೋ ವಾಯ್ಸ್ ಓವರ್ ನೀಡಿದ್ದಾರೆ.  ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್ ಸಂಗೀತ ನೀಡಿದ್ದಾರೆ.

4ಕೆ ಅಲ್ಟ್ರಾ ಎಚ ಡಿ ಟೆಕ್ನಾಲಜಿಯಲ್ಲಿ ಶೂಟಿಂಗ್ ಮಾಡಲಾಗಿದೆ. ಅಮೋಘವರ್ಷ ಮತ್ತು ಕಲ್ಯಾಣ್ ವರ್ಮಾ ನೇತೃತ್ವದ ಭಾರತೀಯ ಚಲನಚಿತ್ರ ತಯಾರಕರ ತಂಡವು ಈ ಚಿತ್ರದಲ್ಲಿ ಪ್ರಾಣಿಗಳ ನಡವಳಿಕೆಯನ್ನು ಚಿತ್ರೀಕರಿಸಿ ದಾಖಲಿಸಿದ್ದಾರೆ. 

ಚಿರತೆಯ ಭೇಟೆ, ಕಪ್ಪೆ ಜಿಗಿತ, ಆನೆಗಳು ಮತ್ತು ಹುಲಿಗಳ ವರ್ತನೆಯನ್ನು ಡ್ರೋಣ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ,  ಈ ಮೊದಲು  ಸಾಕ್ಷ್ಯ ಚಿತ್ರಗಳನ್ನು ಕೇವಲ ಕೆಲವು ಆಯ್ಜವರಿಗೆ ಮಾತ್ರ ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಸಲ ಎಲ್ಲ ಪಿವಿಆರ್ ಸೇರಿದಂತೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ವರ್ಷನ್ ಕೂಡ ಶೀಘ್ರವೇ ರಿಲೀಸ್ ಆಗಲಿದೆ. ಜೊತೆಗೆ ಕರ್ನಾಟಕದ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com