ಬೆಂಗಳೂರು: ಪ್ರವಾಸಿಗನ ಸೋಗಿನಲ್ಲಿ ಕಾರು ಕಳವು, ಆರೋಪಿಗೆ ಶೋಧ

ಪ್ರವಾಸಿಗನ ಸೋಗಿನಲ್ಲಿ ಟ್ರಾವೆಲ್​​ವೊಂದಕ್ಕೆ‌ ಕರೆ‌ ಮಾಡಿ‌ 22 ಲಕ್ಷ ರೂ ಮೌಲ್ಯದ ಕಾರೊಂದು ಕಳ್ಳತನ ಮಾಡಿರುವ ಘಟನೆ ಬ್ಯಾಟರಾಯನಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ.
ಬ್ಯಾಟರಾಯನಪುರ ಪೋಲೀಸ್ ಠಾಣೆ
ಬ್ಯಾಟರಾಯನಪುರ ಪೋಲೀಸ್ ಠಾಣೆ

ಬೆಂಗಳೂರು: ಪ್ರವಾಸಿಗನ ಸೋಗಿನಲ್ಲಿ ಟ್ರಾವೆಲ್​​ವೊಂದಕ್ಕೆ‌ ಕರೆ‌ ಮಾಡಿ‌ 22 ಲಕ್ಷ ರೂ ಮೌಲ್ಯದ ಕಾರೊಂದು ಕಳ್ಳತನ ಮಾಡಿರುವ ಘಟನೆ ಬ್ಯಾಟರಾಯನಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ.

ಅರುಣ್ ಕುಮಾರ್ ಕಾರು ಕಳೆದುಕೊಂಡ ಚಾಲಕ. ವ್ಯಕ್ತಿಯೋರ್ವ ಜಸ್ಟ್ ಡಯಲ್ ಮೂಲಕ ಕಡಬಗರೆಯ ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಪರ್ಕಿಸಿ ಮೈಸೂರು ಪ್ರವಾಸಕ್ಕೆ ಹೋಗಬೇಕಾಗಿದ್ದು, ಕಾರು ಬಾಡಿಗೆಗೆ ಬೇಕಾಗಿದೆ ಎಂದು ಹೇಳಿ ಬುಕ್ ಮಾಡಿದ್ದ.

ನಂತರ ಟ್ರಾವೆಲ್ಸ್​​ನವರು ಕಾರು ಚಾಲಕ ಅರುಣ್​​ಗೆ ಹೇಳಿ ಮೈಸೂರಿಗೆ ಹೋಗುವಂತೆ ಸೂಚಿಸಿದ್ದರು. ಇದರಂತೆ ಅರುಣ್, ಕಾನಿಷ್ಕ ಹೋಟೆಲ್​​ಗೆ ಪ್ರಯಾಣಿಕನನ್ನು ಕರೆತರಲು ಹೋಗಿದ್ದ. ಈ ವೇಳೆ ಕಾರು ಹತ್ತಿದ್ದ ಪ್ರಯಾಣಿಕ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿಗೆ ತೆರಳುವಂತೆ ಹೇಳಿದ್ದ. ನಂತರ ಹೋಟೆಲ್​​ನಲ್ಲಿ ಪೇಮೆಂಟ್ ಕಲೆಕ್ಷನ್ ಮಾಡಿಕೊಳ್ಳಬೇಕಿದೆ. ಬಳಿಕ ಮಿಸ್ ಚಿಫ್ ಹೋಟೆಲ್​​​ನಲ್ಲಿ ನನ್ನ ಸ್ನೇಹಿತ ಇದ್ದಾನೆ. 10 ಸಾವಿರ ರೂ ಹಣ ಕೊಡುತ್ತಾರೆ ತೆಗೆದುಕೊಂಡು ಬಾ ಎಂದು ಅರುಣ್​​ಗೆ ಕಳುಸಿದ್ದ ವ್ಯಕ್ತಿ, ಎಸಿ ಆನ್ ಮಾಡಿ ಹೋಗುವಂತೆ ಸೂಚಿಸಿದ್ದನು. ಕೀ ಕಾರಿನಲ್ಲೇ ಬಿಟ್ಟು ಹಣ ತೆಗೆದುಕೊಂಡು ಬರಲು ಹೋದಾಗ ಕಾರು ಸಮೇತ ಆರೋಪಿ ಪರಾರಿಯಾಗಿದ್ದಾನೆ.

ಅರುಣ್ ಹಿಂತಿರುಗಿದಾಗ ಕಾರು ಅಲ್ಲಿಲ್ಲದ್ದನ್ನು ಕಂಡು ಗಾಬರಿಯಾಗಿದ್ದಾನೆ. ಘಟನೆ ಸಂಬಂಧ ಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೋಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com