285  ಕಾಲೇಜುಗಳ ಪೈಕಿ ಪ್ರಥಮ ರ್ಯಾಂಕ್ ಪಡೆದ ಬಿಬಿಎಂಪಿ ಕಾಲೇಜು ವಿದ್ಯಾರ್ಥಿನಿ!

ವಿದ್ಯಾಭ್ಯಾಸ ನೀಡುವಲ್ಲಿ  ಬಿಬಿಎಂಪಿ ಶಾಲಾ-ಕಾಲೇಜುಗಳು ಹಿಂದುಳಿದಿವೆ ಎಂದು ಮೂಗು ಮುರಿಯುವವರೊಮ್ಮೆ ಇಲ್ಲಿ ನೋಡಬೇಕು.
ರಹಮತ್ತುನ್ನಿಸಾ
ರಹಮತ್ತುನ್ನಿಸಾ

ಬೆಂಗಳೂರು: ವಿದ್ಯಾಭ್ಯಾಸ ನೀಡುವಲ್ಲಿ  ಬಿಬಿಎಂಪಿ ಶಾಲಾ-ಕಾಲೇಜುಗಳು ಹಿಂದುಳಿದಿವೆ ಎಂದು ಮೂಗು ಮುರಿಯುವವರೊಮ್ಮೆ ಇಲ್ಲಿ ನೋಡಬೇಕು.

ನಗರದ ಕ್ಲೇವ್‌ಲ್ಯಾಂಡ್‌ಟೌನ್‌ ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2016-19ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ರಹಮತುನ್ನಿಸಾ ಬೆಂಗಳೂರು ವಿಶ್ವವಿದ್ಯಾಲಯ 55ನೇ ಘಟಿಕೋತ್ಸವ ಅಂಗವಾಗಿ ಸಿದ್ಧಪಡಿಸಿರುವ ಬಿ.ಕಾಂ ಪದವಿ ಕೋರ್ಸ್‌ನ ತಾತ್ಕಾಲಿಕ ಶ್ರೇಣಿ ಪಟ್ಟಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ.

ಇದೇ ಮೊದಲ ಬಾರಿಗೆ ಬಿಬಿಎಂಪಿ ಕಾಲೇಜಿನಲ್ಲಿ ವಿಶ್ವವಿದ್ಯಾಲ  ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಒಟ್ಟಾರೆ ಆರು ಸೆಮಿಸ್ಟರ್‌ಗಳಿಂದ 4600 ಅಂಕಗಳಿಗೆ 4226 ಅಂಕ (ಶೇ.91.87) ಪಡೆದಿದ್ದಾರೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ರಹಮತ್ತುನ್ನಿಸಾ, ಮೊದಲ ರ್ಯಾಂಕ್ ಪಡೆಯಲು ಸಹಕರಿಸಿದ ನನ್ನ ತಾಯಿ, ಪ್ರಾಂಶುಪಾಲರಾದ ಆನಂದ್‌ ಹಾಗೂ ಪ್ರಾಧ್ಯಾಪಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಯಾವುದೇ ಟ್ಯೂಷನ್‌ಗೆ ಹೋಗದೆ ಕಾಲೇಜಿನಲ್ಲಿ ಮಾಡಿದ ಪಾಠದಿಂದಲೇ ಪ್ರಥಮ ರ‌್ಯಾಂಕ್ ಪಡೆದಿರುವುದರಿಂದ ತುಂಬಾ ಖುಷಿಯಾಗುತ್ತಿದೆ. ಪಿಯುಸಿ ಕೂಡ ಇದೇ ಕಾಲೇಜಿನಲ್ಲಿ ಓದಿದ್ದು ಶೇ.96ರಷ್ಟುಅಂಕ ಗಳಿಸಿದ್ದೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಬೆಂಗಳೂರು ಸೆಂಟ್ರಲ್  ವಿವಿಯಲ್ಲಿ ಎಂಕಾಂ ವ್ಯಾಸಂಗ ಮಾಡುತ್ತಿರುವ  ರೆಹಮತ್ತುನ್ನೀಸಾ  ಐಎಎಸ್‌ ಬರೆಯಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಬಿಬಿಎಂಪಿ ಕಾಲೇಜು ಆಗಿದ್ದರೂ ಯಾವುದೇ ಖಾಸಗಿ ಕಾಲೇಜುಗಳಿಗಿಂತ ಸೌಲಭ್ಯ ಹಾಗೂ ಬೋಧನೆಯಲ್ಲಿ ಕಡಿಮೆ ಇಲ್ಲ. ಉತ್ತಮವಾದ ಸೌಲಭ್ಯಗಳು ಹಾಗೂ ಬೋಧನಾ ಗುಣಮಟ್ಟಇರುವುದರಿಂದಲೇ ನಾನು ಮೊದಲ ರಾರ‍ಯಂಕ್‌ ಪಡೆದುಕೊಳ್ಳಲು ಸಾಧ್ಯವಾಯಿತು. ಆದ್ದರಿಂದ ಪೋಷಕರು ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲವೆಂದು ಪೂರ್ವಾಗ್ರಹ ಪೀಡಿತರಾಗುವುದನ್ನು ಮೊದಲು ಬಿಡಬೇಕು ಎಂದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com