ಹೊನ್ನಾಳಿ: ಬಸ್ ಚಾಲಕರಾದ ಎಂ. ಪಿ. ರೇಣುಕಾಚಾರ್ಯ!

ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ  ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸುತ್ತಮುತ್ತಲ ಹಳ್ಳಿಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೌಲಭ್ಯ ಇಂದಿನಿಂದ ಆರಂಭವಾಗಿದ್ದು, ಬಸ್ಸೊಂದನ್ನು ತಾವೇ ಖುದ್ದು ಚಾಲನೆ ಮಾಡಿದ್ದಾರೆ.

Published: 05th January 2020 05:20 PM  |   Last Updated: 05th January 2020 05:22 PM   |  A+A-


Renukacharya1

ಎಂ. ಪಿ. ರೇಣುಕಾಚಾರ್ಯ

Posted By : Nagaraja AB
Source : Online Desk

ಹೊನ್ನಾಳಿ: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ  ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸುತ್ತಮುತ್ತಲ ಹಳ್ಳಿಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೌಲಭ್ಯ ಇಂದಿನಿಂದ ಆರಂಭವಾಗಿದ್ದು, ಬಸ್ಸೊಂದನ್ನು ತಾವೇ ಖುದ್ದು ಚಾಲನೆ ಮಾಡಿದ್ದಾರೆ.

ಹೊನ್ನಾಳಿಯ ಕೆಲ ಹಳ್ಳಿಗಳಿಗೆ ಬಸ್ ಸಂಚಾರ ಸೌಲಭ್ಯದ ಉದ್ಘಾಟನೆಗೆ ಆಗಮಿಸಿದ ರೇಣುಕಾಚಾರ್ಯ, ಚಾಲಕನ ಡ್ರೆಸ್ ಹಾಕಿಕೊಂಡು ಡ್ರೈವರ್ ಸೀಟ್ ನಲ್ಲಿ ಕುಳಿತು ಬಸ್ ಮಾಡಿದ್ದು, ನೆರೆದಿದ್ದ ಜನರು  ರೇಣುಕಾಚಾರ್ಯ ಪರ ಜೈಕಾರ ಮೊಳಗಿಸಿದ್ದಾರೆ.

ಜನರ ಹರ್ಷೋದ್ಘಾರಗಳಿಂದ ಸಂತೋಷಗೊಂಡ ರೇಣುಕಾಚಾರ್ಯ, ಬಸ್ಸನ್ನು ಕೆಲ ದೂರದವರೆಗೂ ಚಾಲನೆ ಮಾಡುವ ಮೂಲಕ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು. ಹೊನ್ನಾಳಿ ಕ್ಷೇತ್ರದ ಸಮಗ್ರ ಅಭಿವೃದ್ದಿಯೆ ನನ್ನ ಗುರಿ. ಈ ಬಸ್ ಸೌಲಭ್ಯದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳ ಸದುಪಯೋಗವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 

ಈ ಹಿಂದೆ ನಡೆದ ಜಾತ್ರೆ ಮಹೋತ್ಸವಗಳಲ್ಲಿ ನೆರೆದಿದ್ದವರೊಂದಿಗೆ ವಾದ್ಯಗಳ ಸದ್ದಿಗೆ ಡ್ಯಾನ್ಸ್ ಮಾಡಿದ್ದ ರೇಣುಕಾಚಾರ್ಯ ಕೆಲ ದಿನಗಳ ಹಿಂದೆ ಹೋರಿಯಿಂದ ಗುದ್ದಿಸಿಕೊಂಡು ಸುದ್ದಿಯಾಗಿದ್ದರು. 

Stay up to date on all the latest ರಾಜ್ಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp