ಆದಾಯ ಹೆಚ್ಚಿಸಿಕೊಂಡ ಚಾಮರಾಜನಗರ ಕೆಎಸ್ಆರ್​ಟಿಸಿ ಉಪ ವಿಭಾಗ

ಚಾಮರಾಜನಗರ ಕೆಎಸ್ಆರ್​ಟಿಸಿ ಉಪವಿಭಾಗವು 2019 ರಲ್ಲಿ ಅಧಿಕ ಲಾಭ ಗಳಿಸಿದೆ. ಚಾಮರಾಜನಗರ ಉಪ ವಿಭಾಗದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ನಂಜನಗೂಡು ಘಟಕಗಳಿಂದ ಪ್ರತಿನಿತ್ಯ 540 ಬಸ್ಸುಗಳು ಕಾರ್ಯಾಚರಿಸುತ್ತಿದ್ದು ಪ್ರತಿದಿನ ಸರಾಸರಿ 50-52 ಲಕ್ಷ ರೂ. ಆದಾಯ ಗಳಿಸುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಚಾಮರಾಜನಗರ ಕೆಎಸ್ಆರ್​ಟಿಸಿ ಉಪವಿಭಾಗವು 2019 ರಲ್ಲಿ ಅಧಿಕ ಲಾಭ ಗಳಿಸಿದೆ. ಚಾಮರಾಜನಗರ ಉಪ ವಿಭಾಗದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ನಂಜನಗೂಡು ಘಟಕಗಳಿಂದ ಪ್ರತಿನಿತ್ಯ 540 ಬಸ್ಸುಗಳು ಕಾರ್ಯಾಚರಿಸುತ್ತಿದ್ದು ಪ್ರತಿದಿನ ಸರಾಸರಿ 50-52 ಲಕ್ಷ ರೂ. ಆದಾಯ ಗಳಿಸುತ್ತಿದೆ. 

2019 ರ ಏಪ್ರಿಲ್​ನಿಂದ ಡಿಸೆಂಬರ್​ವರೆಗಿನ ಲೆಕ್ಕಾಚಾರದ ಪ್ರಕಾರ, ಸಂಸ್ಥೆಯು 5 ಕೋಟಿ ರೂ ಹೆಚ್ಚುವರಿ ಆದಾಯ ಗಳಿಸಿದೆ. ಕಳೆದ ಬಾರಿಗೆ ಹೋಲಿಸಿದರೆ 2 ರಿಂದ 2.5 ಕೋಟಿ ರೂ. ಲಾಭಾಂಶದಲ್ಲಿ ಹೆಚ್ಚಳವಾಗಿದೆ ಎಂದು ಚಾಮರಾಜನಗರ ಸಾರಿಗೆ ಸಂಸ್ಥೆ ಉಪವಿಭಾಗಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಚಾಮರಾಜನಗರ ಸಾರಿಗೆ ಸಂಸ್ಥೆ ಉಪವಿಭಾಗಧಿಕಾರಿ ಶ್ರೀನಿವಾಸ್ ಮಾತನಾಡಿ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಭಕ್ತರು ಹೆಚ್ಚಾಗಿ ಸಾರಿಗೆ ಸಂಸ್ಥೆ ಬಸ್​ಗಳಲ್ಲೇ ಸಂಚರಿಸುವುದರಿಂದ ಸಂಸ್ಥೆಗೆ ಉತ್ತಮ ಆದಾಯ ಹರಿದು ಬಂದಿದೆ. ಯುಗಾದಿ, ಅಮಾವಾಸ್ಯೆ, ದೀಪಾವಳಿ ಸೇರಿದಂತೆ ವಿಶೇಷ ದಿನಗಳಲ್ಲಿ 200-400 ಹೆಚ್ಚುವರಿ ಬಸ್​ಗಳು ಸಂಚರಿಸುವುದರಿಂದ ಈ ಬಾರಿ 9 ಕೋಟಿ 63 ಲಕ್ಷ ರೂ ಆದಾಯ ಬಂದಿದೆ. ಮಾದಪ್ಪನ ಭಕ್ತರಿಂದಲೇ ಈ ಬಾರಿ ಹೆಚ್ಚುವರಿ ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು‌.

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿರ್ಬಂಧ ಇರುವುದರಿಂದ ಸಾರಿಗೆ ಸಂಸ್ಥೆ ಬಸ್​ಗಳಿಗೆ ವಾರಾಂತ್ಯದ ದಿನಗಳಲ್ಲಿ ಸರಾಸರಿ ದಿನವೊಂದಕ್ಕೆ 1.80 ಲಕ್ಷ ಆದಾಯ ಬರುತ್ತಿದೆ‌.‌ ಬಿಳಿಗಿರಿರಂಗನನಾಥ ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಕಳೆದೆರಡು ವರ್ಷಗಳಿಂದ ಆದಾಯ ಸೋರಿಕೆಯಾಗಿದೆ ಎಂದರು.
- ಗುಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com