ಬಾದಾಮಿಯ ಮೇಣಬಸದಿ, ಆನೆಗೊಂದಿ, ಕರಾವಳಿ ಉತ್ಸವಕ್ಕೆ ಚಾಲನೆ: ಚಾಲುಕ್ಯ ಉತ್ಸವ ಕೇಳುವವರೆ ಇಲ್ಲ!

ಹಂಪೆಯಲ್ಲಿ ಆನೆಗುಂದಿ ಉತ್ಸವ, ಕಾರವಾರದಲ್ಲಿ ಕರಾವಳಿ ಉತ್ಸವಗಳು ಅದ್ದೂರಿಯಾಗಿ ನಡೆಯುತ್ತಿವೆ. ಇವುಗಳಿಗಿಂತಲೂ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಗೊಂಡಿರುವ (ನವರಸಪುರ-ಪಟ್ಟದಕಲ್ಲು) ಚಾಲುಕ್ಯ ಉತ್ಸವಕ್ಕೆ ಮಾತ್ರ ಗರ ಬಡಿದಿದೆ.
ಬಾದಾಮಿಯ ಮೇಣಬಸದಿ, ಆನೆಗೊಂದಿ, ಕರಾವಳಿ ಉತ್ಸವಕ್ಕೆ ಚಾಲನೆ: ಚಾಲುಕ್ಯ ಉತ್ಸವ ಕೇಳುವವರೆ ಇಲ್ಲ!

ಬಾಗಲಕೋಟೆ: ಹಂಪೆಯಲ್ಲಿ ಆನೆಗುಂದಿ ಉತ್ಸವ, ಕಾರವಾರದಲ್ಲಿ ಕರಾವಳಿ ಉತ್ಸವಗಳು ಅದ್ದೂರಿಯಾಗಿ ನಡೆಯುತ್ತಿವೆ. ಇವುಗಳಿಗಿಂತಲೂ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಗೊಂಡಿರುವ (ನವರಸಪುರ-ಪಟ್ಟದಕಲ್ಲು) ಚಾಲುಕ್ಯ ಉತ್ಸವಕ್ಕೆ ಮಾತ್ರ ಗರ ಬಡಿದಿದೆ.

ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು. ಆ ಮೂಲಕ ನಾಡಿನ ಕಲೆ, ವಾಸ್ತುಶಿಲ್ಪ ಮತ್ತು ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ದೇಶ,ವಿದೇಶಗಳಿಗೆ ತಲುಪಿಸಬೇಕು ಎನ್ನುವ ಮಹದುದ್ದೇಶದಿಂದ ಪ್ರವಾಸಿ ತಾಣಗಳಾದ ವಿಜಯಪುರ ಮತ್ತು ಬಾಗಲಕೋಟೆಯ ಪಟ್ಟದಕಲ್ಲಿನಲ್ಲಿ ನವರಸಪುರ ಮತ್ತು ಪಟ್ಟದಕಲ್ಲು ಉತ್ಸವಕ್ಕೆ 1985ರ ಕಾಲ ಘಟ್ಟದಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ದಿ. ಎಂ.ಪಿ. ಪ್ರಕಾಶ ಚಾಲನೆ ನೀಡಿದ್ದರು. ಅಂದು ಅವರು ಚಾಲನೆ ನೀಡಿದ ಉತ್ಸವಗಳು ಆರಂಭಿಕ ವರ್ಷಗಳಲ್ಲಿ ರಾಷ್ಟ್ರೀಯ ಉತ್ಸವಗಳಾಗಿಯೇ ನಡೆದವು.

ಬಳಿಕ ರಾಜ್ಯದ ಇತರ ಜಿಲ್ಲೆಗಳಲ್ಲೂ ಉತ್ಸವಗಳು ಆರಂಭಗೊAಡ ಪರಿಣಾಮ ರಾಷ್ಟ್ರೀಯ ಪರಿಕಲ್ಪನೆ ಹೊಂದಿದ್ದ ನವರಸಪುರ ಉತ್ಸವ ಮತ್ತು ಪಟ್ಟದಕಲ್ಲು ಉತ್ಸವಗಳು ಕಳಾಹೀನಗೊಳ್ಳತೊಡಗಿದವು. ಪಟ್ಟದಕಲ್ಲು ಉತ್ಸವ ಚಾಲುಕ್ಯ ಉತ್ಸವವಾಗಿ ಮಾರ್ಪಟ್ಟಿತು. ಬಳಿಕವಂತೂ ಅದು ವರ್ಷದಿಂದ ವರ್ಷಕ್ಕೆ ತನ್ನ ವೈಭವನ್ನು ಕಳೆದುಕೊಂಡು ಬರುತ್ತ, ಕಳೆದ ಐದಾರು ವರ್ಷಗಳಿಂದ ನಾನಾ ಕಾರಣಗಳಿಂದ ನಿಂತೇ ಹೋಗಿದೆ. ಸಿಎಂ ಆಗಿ ಆಚರಿಸಲಿಲ್ಲ: ಪ್ರತಿವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ಚಾಲುಕ್ಯ ಉತ್ಸವ ಆಚರಣೆ ಮಾಡಬೇಕು ಎನ್ನುವ ಚರ್ಚೆಗಳು ಚರ್ಚೆಗೆ ಮಾತ್ರ ಸೀಮಿತವಾಗುತ್ತಿರುವುದು ದುರದೃಷ್ಟಕರ. 2013 ರಿಂದ 2018ರವರೆಗೆ ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿ, ಬಳಿಕ ಒಂದುವರೆ ವರ್ಷ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಉತ್ಸವ ಆಚರಣೆಗೆ ಮನಸ್ಸು ಮಾಡಲಿಲ್ಲ ಎನ್ನುವುದನ್ನು ಬಿಡಿ.

ಇದೀಗ ಬಾದಾಮಿ ಕ್ಷೇತ್ರದ ಶಾಸಕರಾಗಿಯಾದರೂ ಚಾಲುಕ್ಯ ಉತ್ಸವ ಆಚರಣೆಗೆ ಮನಸ್ಸು ಮಾಡುತ್ತಿಲ್ಲ. ಕ್ಷೇತ್ರದ ಶಾಸಕರಾಗಿಯೂ ಮನಸ್ಸು ಮಾಡುತ್ತಿಲ್ಲ: ಚಾಲುಕ್ಯ ಉತ್ಸವ ಆಚರಣೆಗೆ ಸಕಾಲವಾಗಿರುವ ಈ ಸಮಯದಲ್ಲಿ ಅವರಿಗೆ ಕ್ಷೇತ್ರಕ್ಕೂ ಬಂದು ಹೋಗಲು ಪುರುಸೊತ್ತಿಲ್ಲ ಎನ್ನುವಂತಾಗಿದೆ. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ 15 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿದ ಕೂಡಲೇ ಸೋಲಿನ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ, ಪ್ರತಿಪಕ್ಷ ನಾಯಕನ ಆಯ್ಕೆ ಕಸರತ್ತು ನಡೆಸಿದ್ದು, ಪದಾಧಿಕಾರಿಗಳ ಆಯ್ಕೆಯಲ್ಲಿಯೇ ಸಿದ್ದರಾಮಯ್ಯ ಬ್ಯೂಸಿ ಆಗಿದ್ದಾರೆ. ಬನಶಂಕರಿ ಜಾತ್ರೆ ಪೂರ್ವ ಸಿದ್ದತಾ ಸಭೆಯನ್ನು ಕೂಡ ಬೆಂಗಳೂರಿನಲ್ಲೇ ನಡೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರಿಗೆ ರಾಜಕಿಯ ಮರುಜನ್ಮ ನೀಡಿದ ಕ್ಷೇತ್ರ ಬಾದಾಮಿ. ಆ ಕಾರಣಕ್ಕಾದರೂ ಚಾಲುಕ್ಯರ ಗತ ವೈಭವವನ್ನು ಸ್ಮರಿಸುವ ಚಾಲುಕ್ಯ ಉತ್ಸವ ಆಚರಣೆಗೆ ಮನಸ್ಸು ಮಾಡಿ ಸರ್ಕಾರದ ಮೇಲೆ ಒತ್ತಡ ತರಬೇಕಿತ್ತು. ಆ ಕೆಲಸ ಅವರಿಂದ ಆಗುತ್ತಲೇ ಇಲ್ಲ.

ಡಿಸಿಎಂಗೂ ಆಸಕ್ತಿ ಇಲ್ಲ:

ಸಿದ್ದರಾಮಯ್ಯ ಬಿಡಿ ಅವರು ಪ್ರತಿಪಕ್ಷದಲ್ಲಿದ್ದಾರೆ. ಆಡಳಿತ ಪಕ್ಷದಲ್ಲಿನ ಸರ್ಕಾರದಲ್ಲಿ ಮೊದಲ ಬಾರಿಗೆ ಜಿಲ್ಲೆಯವರಾದ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ ಆಗಿದ್ದಾರೆ. ತಮ್ಮ ಕಾಲದಲ್ಲಾದರೂ ಐದಾರು ವರ್ಷಗಳಿಂದ ನಿಂತು ಹೋಗಿರುವ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಲು ಮುಂದಾಗಬೇಕಿತ್ತು. ಅವರ ಮುಂದೆ ವಿಷಯ ಪ್ರಸ್ತಾಪವಾದಾಗಲೂ ನೋಡೋಣ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳುವ ಧಾವಂತದಲ್ಲಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ತಮ್ಮ ಡಿಸಿಎಂ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತೋ ಎನ್ನುವ ಆತಂಕದಲ್ಲಿ ಕಾಲ ನೂಕುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದದ ರಾಜ್ಯ ಬಿಜೆಪಿ ಪಾಳೆಯದಲ್ಲಿ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆ ವರೆಗೂ ಚರ್ಚೆ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳಿಲ್ಲ. ಆಡಳಿತ ಮತ್ತು ಪ್ರತಿಪಕ್ಷದಲ್ಲಿರುವ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಧಿಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿರುವಾಗ ನಾಡಿನ ಕಲೆ,ವಾಸ್ತುಶಿಲ್ಷ, ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಚಾಲುಕ್ಯ ಉತ್ಸವ ಆಚರಣೆ ಬಗ್ಗೆ ಯಾರಲ್ಲೂ ಆಸಕ್ತಿ ಕಾಣಿಸದೇ ಇರುವುದು ಚಾಲುಕ್ಯ ನಾಡಿನ ಜನತೆಯಲ್ಲಿ ಬೇಸರವನ್ನು ತರಿಸಿದೆ. ಜನಪ್ರತಿನಿಧಿಗಳ ಅಧಿಕಾರ ದಾಹದಿಂದಾಗಿ ಪ್ರವಾಸೋದ್ಯಮ ಬೆಳವಣಿಗೆ, ರಾಷ್ಟಿçÃಯ ಸಾಂಸ್ಕೃತಿಕ ಪರಿಕಲ್ಪನೆಯ ಉತ್ಸವ ಯಾವ ಮಟ್ಟಿಕ್ಕೆ ಬಂದು ನಿಂತಿದೆ ಎನ್ನುವುದು ಗಮನಾರ್ಹ.

ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com