ಪಾರ್ಲರ್ ಮೇಲೆ ಸಿಸಿಬಿ ದಾಳಿ: ಇಬ್ಬರ ಬಂಧನ

ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಸಾಮ್ರಾಟ್ ಠಾಕೂರ್ (25), ರಾಕೇಶ್ (22) ಬಂಧಿತ ಆರೋಪಿಗಳು. 

Published: 06th January 2020 06:26 PM  |   Last Updated: 06th January 2020 06:26 PM   |  A+A-


Two held during CCB raids in Bengaluru; six women rescued from prostitution racket

ಪಾರ್ಲರ್ ಮೇಲೆ ಸಿಸಿಬಿ ದಾಳಿ: ಇಬ್ಬರ ಬಂಧನ

Posted By : Srinivas Rao BV
Source : Online Desk

ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಸಾಮ್ರಾಟ್ ಠಾಕೂರ್ (25), ರಾಕೇಶ್ (22) ಬಂಧಿತ ಆರೋಪಿಗಳು. 

ಬಂಧಿತರಿಂದ 13,500 ನಗದು ಹಾಗೂ 2 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ವಿವೇಕ್ ನಗರದ ಇಕೋ ಬಾಡಿ ಸ್ಪಾ ಆ್ಯಂಡ್ ಸಲೂನ್ ಎಂಬ ಹೆಸರಿನಲ್ಲಿ ಸ್ಪಾ ನಡೆಸುವುದಾಗಿ ಹೇಳಿ, ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ರವಿವಾರ ದಾಳಿ ನಡೆಸಿದ್ದರು. 

ದಾಳಿ ಸಂದರ್ಭದಲ್ಲಿ ಆರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಯಿಂದ ಗಳಿಸಿದ ಹಣದಿಂದ ಆರೋಪಿಗಳು ಜೀವನಸಾಗಿಸತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ  ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮಿ ಕಾಂತಯ್ಯ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp