ಮಡಿಕೇರಿ: ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಮಾರಾಟ ಮಾಡಿದ ವೈದ್ಯ ದಂಪತಿ!

ಹಣದಾಸೆಗೆ ವೈದ್ಯರೇ ಅಪ್ರಾಪ್ತ ಯುವತಿಗೆ ಹೆರಿಗೆ ಮಾಡಿಸಿದ್ದಲ್ಲದೆ ಮಗುವನ್ನು ಮಾರಾಟ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ವರದಿಯಾಗಿದೆ. 

Published: 07th January 2020 07:23 PM  |   Last Updated: 07th January 2020 07:23 PM   |  A+A-


ಆರೋಪಿ ವೈದ್ಯ ದಂಪತಿಗಳು

Posted By : raghavendra
Source : Online Desk

ಮಡಿಕೇರಿ: ಹಣದಾಸೆಗೆ ವೈದ್ಯರೇ ಅಪ್ರಾಪ್ತ ಯುವತಿಗೆ ಹೆರಿಗೆ ಮಾಡಿಸಿದ್ದಲ್ಲದೆ ಮಗುವನ್ನು ಮಾರಾಟ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ವರದಿಯಾಗಿದೆ. 

,ಅಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ದಂಪತಿಗಳಾದ  ಡಾ.ರಾಜೇಶ್ವರಿ ಹಾಗೂ ಡಾ.ನವೀನ್ ಈ ಕೃತ್ಯ ಎಸಗಿರುವ ವೈದ್ಯ ದಂಪತಿಗಳಾಗಿದ್ದು ಪ್ರಕರಣ ದಾಖಲಾಗುತ್ತಿದ್ದಂತೆ ಊರಿಂದ ಪರಾರಿಯಾಗಿದ್ದಾರೆ. ಅಲ್ಲದೆ ಮಗುವನ್ನು ಪಡೆದಿದ್ದ ಕುಟುಂಬ ಸಹ ಕಣ್ಮರೆಯಾಗಿದ್ದು ಪೋಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

ಘಟನೆ ವಿವರ

2019ರ ಆಗಸ್ಟ್​ 22ರಂದು ವೈದ್ಯ ದಂಪತಿಗಳಾದ ರಾಜೇಶ್ವರಿ, ನವೀನ್ ಓರ್ವ ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿದ್ದರು. ಈ ಸಂಬಂಧ ಪೋಲೀಸರಿಗೆ ಮಾಹಿತಿ ದೊರಕುವ ಮುನ್ನವೇ ಆ ಮಗುವನ್ನು ಬೇರೊಬ್ಬರಿಗೆ ಂಆರಾಟ ಮಾಡಿದ್ದಾರೆ. 

ಮಗುವನ್ನು ಬೇರೊಂದ ಆಸ್ಪತ್ರೆಯ ಸಿಬ್ಬಂದಿಗೆ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಿದ್ದ ವೈದ್ಯ ದಂಪತಿ ಇದಕ್ಕಾಗಿ ನಗರಸಭೆಯಲ್ಲಿ ನಕಲಿ ಜನನ ಪ್ರಮಾಣಪತ್ರವನ್ನೂ ಸೃಷ್ಟಿಸಿದ್ದರು.

ಕೃತ್ಯದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿಯಾದ ಅರುಂಧತಿ ವೈದ್ಯ ದಂಪತಿ, ಅಶ್ವಿನಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದ ಮೇರಿ, ರಮ್ಯ, ಕವಿತಾ ಹಾಗೂ ಮಗು ತೆಗೆದುಕೊಂಡ ಕುಟುಂಬ ಸದಸ್ಯರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp