ಈ ಬಾರಿ ಒಳ್ಳೆಯ ಬಜೆಟ್ ಮಂಡನೆ: ಸಿಎಂ ಯಡಿಯೂರಪ್ಪ

 ಈ ಬಾರಿ ಎಲ್ಲರ ಅಭಿಪ್ರಾಯ ಪಡೆದು ಒಳ್ಳೆಯ ಬಜೆಟ್ ಮಂಡನೆ ಮಾಡುತ್ತೇನೆ. ರೈತ ಪರ ಬಜೆಟ್ ಮಂಡನೆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ವಿಧಾನಸೌಧದ ಮುಂಭಾಗ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಎಸ್ಆರ್‌ಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಎಸ್ಆರ್‌ಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

ಬೆಂಗಳೂರು: ವಿಧಾನಸೌಧದ ಮುಂಭಾಗ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಎಸ್ಆರ್‌ಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

ಅಂಬಾರಿ ಡ್ರೀಮ್ ಕ್ಲಾಸ್- 5, ಐರಾವತ ಕ್ಲಾಸ್ - 3, ಐರಾವತ - 4, ನಾನ್ ಎಸಿ ಸ್ಲೀಪರ್ - 01, ರಾಜಹಂಸ - 2, ಕರ್ನಾಟಕ ಸಾರಿಗೆ - 5, ಒಟ್ಟು 20 ಬಸ್ಸುಗಳನ್ನು ಅವರು ಲೋಕಾರ್ಪಣೆ ಮಾಡಿದರು. ಆದರೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಗೈರಾಗಿದ್ದರು.

ತನ್ನ ಊರಿನ ಬೆಂಗಳೂರು - ಶಿಕಾರಿಪುರ ಬಸ್ಸಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಲ್ಪ ದೂರು ಪ್ರಯಾಣಿಸಿದರು.

ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಹೋದ ಕೂಡಲೇ ಪ್ರವಾಹ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ. ಎರಡನೇ ಕಂತಿನಲ್ಲಿ 1, 869 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಪ್ರಧಾನಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಈ ಮೊದಲು ಪ್ರಥಮ ಕಂತಿನಲ್ಲಿ 1200 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಬಿಡುಗಡೆ ಆಗಿರುವ ಹಣ ಸಾಕಾಗುವುದಿಲ್ಲ. ಈಗ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಮತ್ತೆ ಹಣ ಬಿಡುಗಡೆ ಮಾಡುವ ವಿಶ್ಚಾಸ ಇದೆ ಎಂದು ಹೇಳಿದರು.

ಈಗಾಗಲೇ ಬಜೆಟ್ ಪೂರ್ವ ಭಾವಿ ಸಭೆ ಆರಂಭಿಸಲಾಗಿದೆ. ನಿನ್ನೆ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಂದೆ ಉಳಿದ ಇಲಾಖೆಗಳ ಜೊತೆ ಸಭೆ ಮಾಡಲಾಗುವುದು. ಈಗ ಯಾವ ಇಲಾಖೆಗಳಲ್ಲಿ ಏನೇನು ಆಗಿದೆ, ಮುಂದಿನ ಬಜೆಟ್ ನಲ್ಲಿ ಏನು ಮಾಡಬೇಕು ಎಂದು ಚರ್ಚಿಸಲಾಗಿದೆ. ಈ ಬಾರಿ ಎಲ್ಲರ ಅಭಿಪ್ರಾಯ ಪಡೆದು ಒಳ್ಳೆಯ ಬಜೆಟ್ ಮಂಡನೆ ಮಾಡುತ್ತೇನೆ. ರೈತ ಪರ ಬಜೆಟ್ ಮಂಡನೆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com