ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರೆ ಪರಿಹಾರ: ಸಾಕಾ, ಇನ್ನೂ ಬೇಕಾ?

ನೆರೆಯಿಂದ ಹಾನಿಗೊಳಗಾದ 7 ರಾಜ್ಯಗಳಿಗೆ ಹೆಚ್ಚುವರಿ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ದೊರೆತಿದೆ. ಆದರೆ, ನೆರೆಯಿಂದಾದ ಅಂದಾಜು ನಷ್ಟಕ್ಕೆ ಈ ಪರಿಹಾರ ಸಾಕಾಗುವುದಿಲ್ಲ ಎನ್ನಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನೆರೆಯಿಂದ ಹಾನಿಗೊಳಗಾದ 7 ರಾಜ್ಯಗಳಿಗೆ ಹೆಚ್ಚುವರಿ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ದೊರೆತಿದೆ. ಆದರೆ, ನೆರೆಯಿಂದಾದ ಅಂದಾಜು ನಷ್ಟಕ್ಕೆ ಈ ಪರಿಹಾರ ಸಾಕಾಗುವುದಿಲ್ಲ ಎನ್ನಲಾಗುತ್ತಿದೆ.

ಕರ್ನಾಟಕಕ್ಕೆ 1869 ಕೋಟಿ ರೂ. ಹೆಚ್ಚುವರಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದೆ.ಆದರೆ, ಇದು  ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸಾಕಾಗುತ್ತಿಲ್ಲ.ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ ವಸತಿ ಕಾರ್ಯ ಕೈಗೊಳ್ಳಲು ಹೆಚ್ಚಿನ ನೆರವು ಬೇಕೆಂದು ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಘಟಕ ಕೇಂದ್ರ ಸರ್ಕಾರದ ಮೇಲೆ ಕಳೆದ ಆಕ್ಟೋಬರ್ ತಿಂಗಳಿನಿಂದಲೂ ಒತ್ತಡ ಹೇರುತ್ತಲೇ ಬಂದಿದೆ. 

ರಾಜ್ಯದಲ್ಲಿ ಸುಮಾರು 38 ಸಾವಿರ ಕೋಟಿಯಷ್ಟು ಹಾನಿಯಾಗಿದೆ. ಖಾಸಗಿ ಕಟ್ಟಡಗಳನ್ನು ಹೊರತುಪಡಿಸಿದಂತೆ ಅಂದಾಜು ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದ ನಂತರ ಒಟ್ಟಾರೇ ನಷ್ಟದ ಅಂದಾಜು 35 ಸಾವಿರ ಕೋಟಿ ರೂ. ನಷ್ಟಾಗಿದೆ. 

ಕೇಂದ್ರ ಸರ್ಕಾರ ಅಳೆದು ತೂಗಿ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಕೊಟ್ಟಿದೆ. ನೆರೆ ಪರಿಹಾರವಲ್ಲದೇ ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಾದ ಅನುದಾನ ಸಾಕಷ್ಟಿದೆ. ತೆರಿಗೆ ಪಾಲು, ನರೇಗಾ ಅನುದಾನ, ಬರ ಪರಿಹಾರ ಇವುಗಳನ್ನೆಲ್ಲ ಯಾವಾಗ ಕೊಡುತ್ತಿರಿ ಮೋದಿ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com