ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಜೆಟ್ ಪೂರ್ವ ಸಮಾಲೋಚನೆ

ಫೆಬ್ರವರಿ 1 ರಂದು  ಕೇಂದ್ರ ಅಯವ್ಯಯ ಮಂಡನೆಯಾಗಲಿರುವ ಹಿನ್ನಲೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ನಡೆಸಿದ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ, ಪ್ರಮುಖವಾಗಿ ರೈಲ್ವೆ ಮೂಲಸೌಕರ್ಯ, ಸೇವಾ ವಲಯಕ್ಕೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ಸ್ವೀಕರಿಸಿದರು. 
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ:  ಫೆಬ್ರವರಿ 1 ರಂದು  ಕೇಂದ್ರ ಅಯವ್ಯಯ ಮಂಡನೆಯಾಗಲಿರುವ ಹಿನ್ನಲೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ನಡೆಸಿದ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ, ಪ್ರಮುಖವಾಗಿ ರೈಲ್ವೆ ಮೂಲಸೌಕರ್ಯ, ಸೇವಾ ವಲಯಕ್ಕೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ಸ್ವೀಕರಿಸಿದರು. 

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಸದಸ್ಯರೊಂದಿಗೆ ಕಳೆದ ಸಂಜೆ ನಡೆಸಲಾದ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ರೈಲ್ವೆ ಮೂಲ ಸೌಕರ್ಯಗಳನ್ನು ಸುಧಾರಿಸಬೇಕು ಎಂದು ಹಲವು ಸದಸ್ಯರು ಸಲಹೆ ನೀಡಿದ್ದಾರೆ. 

ನೇರ ತೆರಿಗೆ ದರಗಳನ್ನು ತಗ್ಗಿಸಬೇಕು, ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ, ಸರಕು ಮತ್ತು ಸೇವಾ ತೆರಿಗೆ ಸಮಸ್ಯೆ ಹಾಗೂ ಇನ್ನಿತರ ವಲಯಗಳ ಕುಂದುಕೊರತೆಗಳನ್ನು ಸಚಿವರು ಮುಂದಿರಿಸಿದರು.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಉದ್ದಿಮೆದಾರರು, ಕೈಗಾರಿಕೆಗಳನ್ನು ಸೆಳೆಯಲು ಹೂಡಿಕೆ ಸ್ನೇಹಿ ನೀತಿಯೊಂದಿಗೆ ಉಪಕ್ರಮಗಳನ್ನು ಆರಂಭಿಸಬೇಕಾದ ಅಗತ್ಯವಿದೆ ವಾಣಿಜ್ಯ ಮಂಡಳಿ ಸದಸ್ಯರು ಸಲಹೆ ನೀಡಿದರು.

ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕೆಸಿಸಿಐ ತೆರಿಗೆ ಉಪ ಸಮಿತಿ ಅಧ್ಯಕ್ಷರು ಸುಮೇರ್ ಓಸ್ವಾರ್, ತೆರಿಗೆ ಪಾವತಿಸಲು ವ್ಯಾಪಾರಿಗಳು ಹಾಗೂ ಉದ್ದಿಮೆದಾರರು ವಿರೋಧವಾಗಿಲ್ಲ, ಆದರೆ, ಅಧಿಕಾರಿಗಳು ಅನುಸರಿಸುತ್ತಿರುವ ಒತ್ತಡ ತಂತ್ರಗಳಿಂದ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು

ಈಗಾಗಲೇ ತೆರಿಗೆ ಪಾವತಿಸುತ್ತಿರುವ ವ್ಯಾಪಾರಿಗಳು, ಕೈಗಾರಿಕೋದ್ಯಮಗಳು ಹಾಗೂ ವಹಿವಾಟುದಾರರ ವಿರುದ್ದ ಹೆಚ್ಚಿನ ಒತ್ತಡ ತರುವ ಬದಲು ತೆರಿಗೆ ನೆಲೆಯನ್ನು ಮತ್ತಷ್ಟು ವಿಸ್ತರಿಸಿ ಇನ್ನೂ ಹೆಚ್ಚಿನ ಜನರನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕಾದ ಆಗತ್ಯವಿದೆ ಎಂದರು.

ಈ ವಿಷಯ ಸಂಬಂಧ ಹಲವು ಮಂದಿ ಕಳವಳ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವ ಜೋಷಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ ಸಂಗ್ರಹಣೆಯಲ್ಲಿ ಮಾನವ ಹಸ್ತಕ್ಷೇಪ ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳುತ್ತಿದೆ ಎಂದರು

ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ನಡೆಸುವುದರಿಂದ ಯಾರ ತೆರಿಗೆ ಮೌಲ್ಯಮಾಪನ ಮಾಡುತ್ತಿದ್ದೇವೆ ಎಂಬ ಮಾಹಿತಿ ತೆರಿಗೆ ಅಧಿಕಾರಿಗೆ ಇರುವುದಿಲ್ಲ ಎಂದು ಅವರು ಹೇಳಿದರು.

ವಿವಿಧ ಸಂಸ್ಥೆಗಳು ಮತ್ತು ಸಂಘಗಳ ಪ್ರತಿನಿಧಿಗಳು ಮತ್ತು ವಿವಿಧ ವಲಯಗಳ ವೃತ್ತಿಪರರು ಸಮಾಲೋಚನೆಯ ಸಮಯದಲ್ಲಿ ತಮ್ಮ ಸಲಹೆಗಳನ್ನು ಮಂಡಿಸಿದರು.

ಸಲಹೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಪ್ರಮುಖ ಆರ್ಥಿಕ ಸುಧಾರಣೆಗಳು ಅನುಷ್ಠಾನ ಹಂತದಲ್ಲಿವೆ ಮತ್ತು ಹಲವು ಉನ್ನತ ಮಟ್ಟದ ತಂಡಗಳು ದೇಶವನ್ನು ಐದು ಟ್ರಿಲಿಯನ್ ಆರ್ಥಿಕತೆಯನ್ನಾಗಿಸಲು ಗುರಿ ನಿಗದಿಪಡಿಸುವ ಉದ್ದೇಶಿತ ಸುಧಾರಣೆಗಳ ಕುರಿತು ಕಾರ್ಯನಿರ್ವಹಿಸುತ್ತಿವೆ ಎಂಬ ಸುಳಿವು ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com