ಪ್ರವಾಹ ಪೀಡಿತ ಜಿಲ್ಲೆಗಳ ಜನರಿಗೆ ತೆರಿಗೆಯಿಂದ ಈ ವರ್ಷ ಮುಕ್ತಿ ನೀಡಿದ ಸರ್ಕಾರ 

ಪ್ರವಾಹ ಸಂತ್ರಸ್ತರಿಗೆ ಇಲ್ಲೊಂದು ಸಿಹಿಸುದ್ದಿ. ರಾಜ್ಯ ಸರ್ಕಾರ 22 ಪ್ರವಾಹ ಪೀಡಿತ ಜಿಲ್ಲೆಗಳ ಗ್ರಾಮ ಪಂಚಾಯತಿಗಳಿಗೆ ಆದೇಶ ನೀಡಿ ಈ ವರ್ಷ ಜನರಿಂದ ತೆರಿಗೆ ಸಂಗ್ರಹಿಸದಂತೆ ಸೂಚಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ಇಲ್ಲೊಂದು ಸಿಹಿಸುದ್ದಿ. ರಾಜ್ಯ ಸರ್ಕಾರ 22 ಪ್ರವಾಹ ಪೀಡಿತ ಜಿಲ್ಲೆಗಳ ಗ್ರಾಮ ಪಂಚಾಯತಿಗಳಿಗೆ ಆದೇಶ ನೀಡಿ ಈ ವರ್ಷ ಜನರಿಂದ ತೆರಿಗೆ ಸಂಗ್ರಹಿಸದಂತೆ ಸೂಚಿಸಿದೆ. 


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಆದೇಶ ಹೊರಡಿಸಿದ್ದು, ಜನರು ತೆರಿಗೆ ಪಾವತಿಸದಿದ್ದರೂ ಕೂಡ ಅರ್ಜಿ ಸಂಖ್ಯೆ 9,11ಎ ಮತ್ತು 11ಬಿಯನ್ನು ಉಚಿತವಾಗಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಖ್, ಪ್ರವಾಹದಲ್ಲಿ ಅನೇಕ ಮಂದಿ ಸರ್ಕಾರಿ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಅರ್ಜಿ ಸಂಖ್ಯೆ 9 ಮತ್ತು 11ನ್ನು ನೀಡುವಾಗ ಸಾಮಾನ್ಯವಾಗಿ ತೆರಿಗೆ ಸಂಗ್ರಹಿಸುತ್ತೇವೆ. ಆದರೆ ಈ ವರ್ಷ ತೆರಿಗೆ ಸಂಗ್ರಹಿಸಿಕೊಳ್ಳದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.


ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, ಮಾನವೀಯತೆ ನೆಲೆಯಲ್ಲಿ ಪ್ರವಾಹಪೀಡಿತ ಜಿಲ್ಲೆಗಳ ಜನರಿಂದ ತೆರಿಗೆ ಸಂಗ್ರಹಿಸುತ್ತಿಲ್ಲ. ಅವರಿಗೆ ಸ್ವಲ್ಪ ನಿರಾಳತೆ ಕೊಡಬೇಕಿದೆ ಎಂದರು.


ಮುಂಬರುವ ಬಜೆಟ್ ನಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಜನರಿಗೆ ಏನಾದರೂ ಪ್ಯಾಕೆಜ್ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ ಹಣಕಾಸು ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿ ಬರುವುದರಿಂದ ಅದರ ಬಗ್ಗೆ ಮಾಹಿತಿ ನೀಡಲು ಅವರೇ ಸೂಕ್ತವಾದ ವ್ಯಕ್ತಿ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com