ಯಕ್ಷಗಾನ ಕ್ಷೇತ್ರದ ಮೇರು ಪ್ರತಿಭೆ ಹೊಸ್ತೋಟ ಮಂಜುನಾಥ ಭಾಗವತ ನಿಧನ

ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪ್ರಕಾರದ ಖ್ಯಾತ ಭಾಗವತರು. ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿದ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುವ ಶ್ರೇಷ್ಠ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ(೮೦) ಇಂದು ನಿಧನರಾದರು.
ಹೊಸ್ತೋಟ ಮಂಜುನಾಥ ಭಾಗವತ
ಹೊಸ್ತೋಟ ಮಂಜುನಾಥ ಭಾಗವತ

ಶಿರಸಿ:  ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪ್ರಕಾರದ ಖ್ಯಾತ ಭಾಗವತರು. ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿದ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುವ ಶ್ರೇಷ್ಠ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ(೮೦) ಇಂದು ನಿಧನರಾದರು.

ಶಿರಸಿ ತಾಲೂಕು ವಾನಳ್ಳಿ ಸಮೀಪ ನೋತಿಗುಡ್ಡದ ಕುಟೀರದಲ್ಲಿ ನೆಲೆಸಿದ್ದ ಭಾಗವತರು ಅನಾರೋಗ್ಯದಿಂದ ಕೆಲ ಕಾಲ ಆಸ್ಪತ್ರೆ ಸೇರಿದ್ದರು. ಕಳೆದ ಹದಿನೈದು ದಿನಗಳಿಂದ ಹಾಸಿಗೆ ಹಿಡಿದಿದ್ದ ಭಾಗವತರು ತಮ್ಮ ಆತ್ಮೀಯರ ಮನೆಯಲ್ಲಿ ತಂಗಿದ್ದರು.

ಮಂಜುನಾಥ ಬಾಗವತರು ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕು ಹನ್ಮಂತಿ ಹೊಸ್ತೋಟದಲ್ಲಿ ದಿ. 15-2 -1940 ರಂದು ಜನಿಸಿದರುಶಿರಸಿಯ ಹೊಸ್ತೋಟದ ಭಾಗವತ ಮತ್ತು ತಾಯಿ ಮಹಾದೇವಿ ಹೆಗಡೆ. ಇವರ ಮಗ ಮಂಜುನಾಥ ಸ್ವಗ್ರಾಮದಲ್ಲಿ ಆರನೇ ತರಗತಿ ವರೆಗೆ ಓದಿದ್ದರು.

ಬಾಲ್ಯದಲ್ಲಿಯೇ ಹನುಮಂತಿಯ ಟೆಂಟ್ ಯಕ್ಷಗಾನ ಮೇಳದಲ್ಲಿ ಶಿವರಾಮ ಹೆಗಡೆ, ಮತ್ತು ಮಹಾಬಲ ಹೆಗಡೆಯವರಲ್ಲಿ ಯಕ್ಷಗಾನ ಕಲೆಯನ್ನು ಕಲಿತರು. ಇವರು ಭಾಗವತಿಕೆಯನ್ನೇ ಉಸಿರಾಗಿಸಿಕೊಂಡದ್ದು ಕೆರೆಮನೆ ಶಿವರಾಮ ಹೆಗ್ಡೆಯವರ ಪ್ರಭಾವದಿಂದ. ಆರಂಭದಲ್ಲಿ ಕೊಡಗಿಪಾಲ ಶಿವರಾಮ ಹೆಗ್ಡೆ ಇವರನ್ನು ರಂಗಕ್ಕೆ ತಂದಾಗ ಉತ್ಸಾಹದಿಂದ ಹಾಡುಗಾರಿಕೆ ನಡೆಸಿ ಹೆಚ್ಚಿನ ಜಿಜ್ಞಾಸೆ ಬೆಳೆಸಿಕೊಂಡು ಬಾಳೆಹದ್ದು ಕೃಷ್ಣ ಭಾಗವತ ಹಾಗೂ ಕೆರಮನೆ ಮಹಾಬಲ ಹೆಗ್ಡೆ ಇವರ ಶಿಷ್ಯನಾಗಿ ಯಕ್ಷಗಾನದ ಕಲಿಕೆಯ ಪಂಚಾಂಗವನ್ನು ಇನ್ನಷ್ಟೂ ಗಟ್ಟಿಗೊಳಿಸಿಕೊಂಡರು. ಅವರು 28 ವರ್ಷಗಳಕಾಲ ಅದೇ ಯಕ್ಷಗಾನ ಮೇಳಗಳಲ್ಲಿದ್ದು , ಭಾಗವಹಿಸುತ್ತಲೇ, ಆ ಕಲೆಯ ಅಭ್ಯಾಸ ಅಧ್ಯಯನ, ತರಬೇತಿ ಪಡೆದು, ಸಂಪ್ರದಾಯಕ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲಿ ಪ್ರಾವೀಣ್ಯತೆ ಪಡೆದರು.ಅಂದರೆ ಕ್ರಮೇಣ ಭಾಗವತಿಕೆ, ನೃತ್ಯ, ಚಂಡೆ, ಮದ್ದಳೆ, ವೇಷಗಾರಿಕೆ ಮಾಡುತ್ತಾ ಬಯಲಾಟದ ಅನೇಕ ತಿರುಗಾಟಗಳನ್ನು ಮಾಡಿದ ಅನುಭವ ಇವರದು. ತಮ್ಮ ಹಸ್ತೋಟಾ ಗಜಾನನ ಭಟ್ಟರು ಸ್ವತಃ ಇವರ ತಮ್ಮನಾಗಿದ್ದು ಇವರ ಮೇಳದಲ್ಲಿ ಚಂಡೆ ವಾದಕರಾಗಿದ್ದಕು.

೧೯೬೬ರಲ್ಲಿ ರಾಮಕೃಷ್ಣ ಆಶ್ರಮದಲ್ಲಿ ಪರಿವ್ರಾಜಕ ವ್ರತ ಕೈಗೊಂಡ ಮಂಜುನಾಥ ಭಾಗವತರು ಅಲ್ಲಿಂದ ತಮ್ಮ ಮುಂದಿನ ಜೀವನವನ್ನೆಲ್ಲಾ ಯಕ್ಷಗಾನಕ್ಕಾಗಿಯೇ ಮುಡಿಪಿಟ್ಟಿದ್ದರು.

ರಚಿಸಿದ ಯಕ್ಷಗಾನ ಪ್ರಸಂಗಗಳು
250ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಭಾಗವತರ ಪ್ರಮುಖ ಯಕ್ಷಗಾನ ಪ್ರಸಂಗಗಳು ಹೀಗಿದೆ- 
ರಾಮಾಯಣದ 19 ಪ್ರಸಂಗ ;
ಮಹಾಭಾರತದ 50 ಪ್ರಸಂಗ ;
ಭಾಗವತದ 20 ಪ್ರಸಂಗ ;
ರಾಮ ಕೃಷ್ಣ ಚರಿತೆ 27 ಪ್ರಸಂಗ ;
ಗೋ ಮಹಿಮಾಯಾನ 33 ಪ್ರಸಂಗ ;
ಮಕ್ಕಳಿಗಾಗಿ ಚೈತ್ರ ಪೂರ್ಣಿಮಾ (ಪಂಚತಂತ್ರ ಆಧರಿಸಿ) ;
ಮ್ಯಾಕ್ ಬೆತ್ ಆಧರಿಸಿ “ಮೇಘಕೇತ” ;
ಆಲ್ ಇಸ್ ವೆಲ್ ದಟ್ ಎಂಡ್ಸ್ ವೆಲ್ ಆಧರಿಸಿ :
ಗುಣಪನ ಕಲ್ಯಾಣಹೋಮರನ ಒಡೆಸ್ಸೀ ಕಾವ್ಯವನ್ನಾಧರಿಸಿ ಉಲ್ಲಾಸ ದತ್ತ ಚರಿತ್ರೆ 3 ಪ್ರಸಂಗಗಳು;
ಕಾಳಿದಾಸನ ಮೇಘದೂತ, ಶಾಕುಂತಲ; ,
ಭಾಸನ ಯೌಗಂಧರಾಯಣ, ಉತ್ತರರಾಮ ಚರಿತೆ, ದೂತವಾಕ್ಯ,
ಚಿತ್ರಪಟ ರಾಮಾಯಣ

ಯಕ್ಷಗಾನದ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳನ್ನು ನಡೆಸಿದ್ದ ಭಾಗವತರು ಹಲವು ಸಂಶೋಧನಾ ಗ್ರಂಥಗಳ ರಚನಕಾರರೂ ಆಗಿದ್ದಾರೆ. ಅವುಗಳಲ್ಲಿ ಕೆಲವು ಗ್ರಂಥಗಳು, ಪ್ರಬಂಧಗಳ ವಿವರ ಹೀಗಿದೆ- 
ಸಂಪಾಜೆ ಯಕ್ಷಗಾನ ಸಮ್ಮೇಳನದ ಅದ್ಯಕ್ಷತೆ. ;ಶಿವರಾಮ ಕಾರಂತ ಪ್ರತಿಷ್ಠಾನದಲ್ಲಿ ವಿಚಾರ ಪೂರ್ಣ ಪ್ರಬಂಧಮಂಡನೆ ;ಮೂಡಲಪಾಯ ಯಕ್ಷಗಾನದ ವರದಿ ಮಂಡನೆ (ಬಿದಿರೇಹಳ್ಳಿ -ತುಮಕೂರುಜಿಲ್ಲೆ
ತಾಳೆಗರಿಯಲ್ಲಿನ ‘ಯಕ್ಷಗಾನ ಪ್ರಸಂಗಗಳ ಅಧ್ಯಯನ’ ಮತ್ತು ಅದರ ಪ್ರಕಟಣೆ (ಕೆಳದಿ ವಸ್ತು ಸಂಗ್ರಹಾಲಯ,), *‘ರಾಮಕೃಷ್ಣ ಚರಿತೆ’, ಮಹಾಕಾವ್ಯದ ಭಾವಾನುವಾದ (ರಾಮಕೃಷ್ಣಾಶ್ರಮ ಮೈಸೂರು),
‘ಒಡಲಿನ ಮಡಿಲು-ಯಕ್ಷತಾರೆ’(ಬಯಲಾಟದ ನೆನಪುಗಳು) (ಅನೇಕ ಟ್ರಸ್ಟ್ ಬೆಂಗಳೂರು.);
‘ಪವಾಡವಲ್ಲ ವಿಸ್ಮಯ’, (ಅಪೂರ್ವ ಅನುಭವಗಳು- ಅನೇಕ ಟ್ರಸ್ಟ್ ಬೆಂಗಳೂರು.);
ಯಕ್ಷಗಾನ ಲಕ್ಷಣ ಅಚ್ಚಿನಲ್ಲಿ. ಹೀಗೆ ಹಲವರು ಕೃತಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಸಂದರ್ಶನಗಳು ಪ್ರಕಟಗೊಂಡಿವೆ.

ಮಂಜುನಾಥ ಭಾಗವತರ ಯಕ್ಷಗಾನ ಕ್ಷೇತ್ರದ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿ, ಗೌರವಗಳು ಅವರನ್ನರಸಿ ಬಂದಿವೆ. ಅವುಗಳಲ್ಲಿ ಪ್ರಮುಖವಾಗಿದ್ದ ಕೆಲವು ಪ್ರಶಸ್ತಿ, ಪುರಸ್ಕಾರಗಳು ಹೀಗಿದೆ-
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1987;
ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ 2012 ;
ವಿಶೇಷ ಪ್ರಶಸ್ತಿ : ಜಾನಪದ ಅಕಾಡೆಮಿ,
ಪರಮದೇವ ಪ್ರಶಸ್ತಿ (ಅಗ್ನಿ ಟ್ರಸ್ಟ್) 2012;
ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ;
ಬ್ರಹ್ಮಾವರದ ಹಾರಾಡಿ ರಾಮ ಗಾಣಿಗ-ವೀರಭದ್ರನಾಯಕ ಪ್ರಶಸ್ತಿ ;
ಸೀತಾನದಿಗಂಗಮ್ಮ ಭಾಗವತ ಪ್ರಶಸ್ತಿ ;
ಉಪ್ಪೂರುನಾರಾಯಣ ಭಾಗವತ ಪ್ರಶಸ್ತಿ :
ರಾಮ ವಿಠಲ ಪ್ರಶಸ್ತಿ (ಪೇಜಾವರ ಶ್ರೀಗಳು) 2014;
ಆಳ್ವಾಸ್ ನುಡಿ ಪುರಸ್ಕಾರ (ಮೂಡುಬಿದರೆ);
ಇತರೆ
ಸಾಕೇತ ಟ್ರಸ್ಟ್ ಹೆಗ್ಗೋಡು ಇವರಿಗೆ 60ವರ್ಷ ತುಂಬಿದಾಗ ‘ಷಷ್ಯ್ಠಬ್ಧಿ’ -ಜೀವನ ಕೃತಿ ವಿಮರ್ಶೆ1999 ಪ್ರಕಟಿಸಿದೆ.
ಸ್ವರ್ಣವಲ್ಲಿ ಮಠದ ಯಕ್ಷ ಶಾಲ್ಮಲಾ ‘ಯಕ್ಷಋಷಿ’ ಕೃತಿಗಳನ್ನು ಪ್ರಕಟಿಸಿವೆ.
ಅನೇಕ ನಾರಾಯಣ ಜೋಶೀ ಟ್ರಸ್ಟ್ (ರಿ) ಬೆಣಗಳೂರು ಇವರ ಗೌರವಾರ್ಥ -ಯಕ್ಷ ಕಿರೀಟ ಮಾಲಿಕೆ ;
ಇವರಿಗೆ ಸಂಬಂಧ ಪಟ್ಟಂತೆ ‘ಬಹುಮುಖ’ ಮಹಿಳಾ ಯಕ್ಷಗಾನ ಕೆಲವು ನೋಟಗಳು; ಸಂ.ಮಮತಾ ಜಿ. 2013 :ಎಂಬ ಕೃತಿಯನ್ನು ಪ್ರಕಟಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com