ಟೊಮೆಟೊ ಸಂಗ್ರಹಣೆಗೆ ಕಡಿಮೆ ವೆಚ್ಚದ ತಂತ್ರಜ್ಞಾನ ಕಂಡುಹಿಡಿದ ಸಿಎಫ್ ಟಿಆರ್ ಐ 

ಬೆಲೆ ಏರಿಳಿತದ ಸಮಸ್ಯೆಯಿಂದ ಬಳಲುತ್ತಿರುವ ಟೊಮೆಟೊ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಮೈಸೂರು ಮೂಲದ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿಎಫ್ ಟಿಆರ್ ಐ) ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಕಂಡುಹಿಡಿದಿದೆ. 
ಟೊಮೆಟೊ ಸಂಗ್ರಹಣೆಗೆ ಕಡಿಮೆ ವೆಚ್ಚದ ತಂತ್ರಜ್ಞಾನ ಕಂಡುಹಿಡಿದ ಸಿಎಫ್ ಟಿಆರ್ ಐ 

ಮೈಸೂರು: ಬೆಲೆ ಏರಿಳಿತದ ಸಮಸ್ಯೆಯಿಂದ ಬಳಲುತ್ತಿರುವ ಟೊಮೆಟೊ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಮೈಸೂರು ಮೂಲದ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿಎಫ್ ಟಿಆರ್ ಐ) ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು ಇದರಲ್ಲಿ ಕಿಲೋಗೆ ಕೇವಲ 4 ರೂಪಾಯಿಗಳಲ್ಲಿ ನಾಲ್ಕು ತಿಂಗಳಿಗೂ ಅಧಿಕ ಕಾಲದವರೆಗೆ ಟೊಮೆಟೊವನ್ನು ಸಂಗ್ರಹಿಸಿಡಬಹುದಾಗಿದೆ.


ಸಾಮಾನ್ಯವಾಗಿ ಟೊಮೆಟೊ ಬೆಳೆಗಾರರು ಬೆಳೆ ಹಾಳಾಗುತ್ತದೆ ಎಂದು ಕಡಿಮೆ ಬೆಲೆ ಇರುವಾಗ ಅನಿವಾರ್ಯತೆಯಿಂದ ಮಾರಾಟ ಮಾಡಬೇಕಾಗುತ್ತದೆ. 


ಈ ತಂತ್ರಜ್ಞಾನವನ್ನು ಸಂಸ್ಥೆಯ ಆಹಾರ ಪ್ಯಾಕೇಜ್ ಘಟಕ ಅಭಿವೃದ್ಧಿಪಡಿಸಿದ್ದು ಟೊಮೆಟೊಗಳನ್ನು ಸಂಗ್ರಹಿಸಿಡಲು ಪರಿಹಾರ ಕಂಡುಹಿಡಿದಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಸಂಸ್ಥೆಯ ಆಹಾರ ಘಟಕದ ಮುಖ್ಯಸ್ಥ ಹೆಚ್ ಎಸ್ ಸತೀಶ್, ಈ ತಂತ್ರಜ್ಞಾನದಡಿ ಯಾವುದೇ ದುಬಾರಿ ಯಂತ್ರೋಪಕರಣ ಅಥವಾ ರೆಫ್ರಿಜರೇಟರ್ ನ ಅವಶ್ಯಕತೆಯಿರುವುದಿಲ್ಲ. ಸಿಎಫ್ ಟಿಆರ್ ಐ ವಿನ್ಯಾಸಗೊಳಿಸಿರುವ ನಿರ್ದಿಷ್ಟ ಶಾಖಭರಿತ ಚೀಲಗಳಲ್ಲಿ ಉಪ್ಪಿನಿಂದ ಟೊಮೆಟೊ ಬೆರೆಸಿಟ್ಟರೆ ಸಾಕಾಗುತ್ತದೆ. ಇದು ಉಷ್ಣತೆಯನ್ನು ತಡೆಯುತ್ತದೆ.


ಹೀಗೆ ಸಂಗ್ರಹಿಸಿಟ್ಟ ಟೊಮೆಟೊವನ್ನು ರೈತರು ಅಧಿಕ ಬೆಲೆ ಸಿಗುವಾಗ ಮಾರಾಟ ಮಾಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com