ತೆರಿಗೆ ಕಟ್ಟದ ಕಾರು 20 ಸಾವಿರಕ್ಕೆ ಹರಾಜು, ಈಗ ಸಾರಿಗೆ ಇಲಾಖೆಯೇ ಮಾಲಿಕನಿಗೆ ಕೊಡಬೇಕು 1.9 ಲಕ್ಷ! 

ಒಂದು ವಾಹನ, ಮೂವರು ಮಾಲಿಕರು, ಈಗ ತಲೆ ನೋವು ಬಂದಿರುವುದು ಮಾತ್ರ 2 ಲಕ್ಷ ಪಾವತಿಯ ಹೊರೆ ಹೊತ್ತಿರುವ ರಾಜ್ಯ ಸರ್ಕಾರಕ್ಕೆ!!! 
ತೆರಿಗೆ ಕಟ್ಟದ ಕಾರು 20 ಸಾವಿರಕ್ಕೆ ಹರಾಜು, ಈಗ ಸಾರಿಗೆ ಇಲಾಖೆಯೇ ಮಾಲಿಕನಿಗೆ ಕೊಡಬೇಕು 1.9 ಲಕ್ಷ!
ತೆರಿಗೆ ಕಟ್ಟದ ಕಾರು 20 ಸಾವಿರಕ್ಕೆ ಹರಾಜು, ಈಗ ಸಾರಿಗೆ ಇಲಾಖೆಯೇ ಮಾಲಿಕನಿಗೆ ಕೊಡಬೇಕು 1.9 ಲಕ್ಷ!

ಒಂದು ವಾಹನ, ಮೂವರು ಮಾಲಿಕರು, ಈಗ ತಲೆ ನೋವು ಬಂದಿರುವುದು ಮಾತ್ರ 2 ಲಕ್ಷ ಪಾವತಿಯ ಹೊರೆ ಹೊತ್ತಿರುವ ರಾಜ್ಯ ಸರ್ಕಾರಕ್ಕೆ!!! 
 
32 ವರ್ಷಗಳ ಹಿಂದೆ ಸಾರಿಗೆ ಇಲಾಖೆ ಹಾಸನದಲ್ಲಿನ ಲಕ್ಷುರಿ ಟ್ಯಾಕ್ಸಿಯನ್ನು 20,000 ಕ್ಕೆ ಹರಾಜು ಹಾಕಿತ್ತು. ಕಾರಿನ ಮೂಲ ಮಾಲಿಕ ಕೋರ್ಟ್ ಗೆ ಹೋಗಿದ್ದರ ಪರಿಣಾಮ ಈಗ ಕಾರು ಮೂಲ ಮಾಲಿಕನಿಗೇ ಸಿಕ್ಕಿದೆ. ಆದರೆ ಈಗ ಈ ಕಾರಿನ 3 ನೇ ಮಾಲಿಕನಿಗೆ ಸರ್ಕಾರ 1.91 ಲಕ್ಷ ರೂಪಾಯಿ ಪಾವತಿ ಮಾಡಬೇಕಿದೆ. ಇದರಿಂದ ಕಾರನ್ನು ಹರಾಜು ಹಾಕಿ ಬಂದಿದ್ದ ಹಣಕ್ಕಿಂತಲೂ 9 ಪಟ್ಟು ಹೆಚ್ಚಿನ ಮೊತ್ತದ ಹಣವನ್ನು ಸರ್ಕಾರ ಖರ್ಚು ಮಾಡಬೇಕಾಗಿ ಬಂದಿದೆ. 

ಘಟನೆಯ ಹಿನ್ನೆಲೆ: 

1988 ರಲ್ಲಿ ಹಾಸನದಲ್ಲಿ ತಪಾಸಣೆ ವೇಳೆ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರ್ ವಾಹನ ಇನ್ಸ್ ಪೆಕ್ಟರ್ ಟ್ಯಾಕ್ಸಿ ಮಾಲಿಕ ಅಮೀರ್ ತೆರಿಗೆ ಪಾವತಿ ಮಾಡದೇ ಇರುವುದನ್ನು ಗಮನಿಸಿ ಕಾರನ್ನು ವಶಕ್ಕೆ ಪಡೆದಿದ್ದರು. ಈ ಘಟನಯಾದ ಒಂದು ವರ್ಷಕ್ಕೆ ಕಾರನ್ನು ಹರಾಜು ಮಾಡಲಾಯಿತು. ಹರಾಜು ಪ್ರಕ್ರಿಯೆಯಲ್ಲಿ ಹೆಚ್ ಆರ್ ಶಿವಶಂಕರ್ ಎಂಬುವವರು ಕಾರನ್ನು 20,000 ಕ್ಕೆ ಖರೀದಿಸಿದ್ದರು.

ಶಿವಶಂಕರ್ ಹರಾಜಿನಲ್ಲಿ ಖರೀದಿಸಿದ್ದ ಕಾರನ್ನು ಕಲೀಮ್ ಪಾಶಾ ಎಂಬುವವರಿಗೆ 30,000 ರೂಗಳಿಗೆ ಮಾರಾಟ ಮಾಡಿದ್ದರು. ಕಲೀಮ್ ಪಾಶಾ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಮಾಡಿದ್ದರು. ಅಷ್ಟೇ ಅಲ್ಲದೇ ವಾಹನದ ರಿಪೇರಿಗಾಗಿ 8,900 ರೂಪಾಯಿ ಖರ್ಚು ಮಾಡಿದ್ದರು. ಈ ನಡುವೆ ಕಾರಿನ ಮೂಲ ಮಾಲಿಕ ಅಮೀರ್ ಹರಾಜು ಪ್ರಕ್ರಿಯೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ ಹರಾಜು ಪ್ರಕ್ರಿಯೆಯನ್ನು ಅಸಿಂಧುಗೊಳಿಸಿ ವಾಹನವನ್ನು ವಶಕ್ಕೆ ಪಡೆಯುವಂತೆ ಹಾಸನದ ಆರ್ ಟಿಒಗೆ ಸೂಚನೆ ನೀಡಿದೆ. ಮೂಲ ಮಾಲಿಕನಿಗೇ ಮರಳಿ ನೀಡಬೇಕೆಂದು ಆದೇಶ ನೀಡಿತ್ತು. 2007 ರಲ್ಲಿ ಕಲೀಮ್ (ಕಾರಿನ ಮೂರನೇ ಮಾಲಿಕ) ತನಗೆ ಈ ಆದೇಶದಿಂದ ನಷ್ಟವಾಗುತ್ತದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಕಲೀಮ್ ಗೆ 38,900 ರೂಪಾಯಿಗಳು ಹಾಗೂ ಶೇ.15 ರಷ್ಟು ಬಡ್ಡಿ ಸೇರಿಸಿ 1.51 ಲಕ್ಷ ರೂಪಾಯಿ ನೀಡಬೇಕೆಂದು ಆದೇಶ ನೀಡಿದೆ. 2019 ರ ಡಿ.30 ರಂದು ಸರ್ಕಾರದ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ನೀಡಿದ ಆದೇಶದ ಪ್ರಕಾರ ಇಲಾಖೆ ಕಲೀಮ್ ಗೆ ಬಡ್ಡಿ ಸೇರಿಸಿ 1.9 ಲಕ್ಷ ರೂಪಾಯಿ ನೀಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com